Blog number 1224. ಶಿವಮೊಗ್ಗ ರಾಜಕಾರಣದಲ್ಲಿ ಬೆಂಕಿ ಚೆಂಡಿನಂತಿದ್ದ ಹೋರಾಟಗಾರ ಪೂರ್ಯಾ ನಾಯಕರು ಅವರ ಪತ್ನಿ ಶ್ರೀಮತಿ ಶಾರದಾ ಪೂರ್ಯಾ ನಾಯಕರು ಶಿವಮೊಗ್ಗ ಗ್ರಾಮಾಂತರದ ಮಾಜಿ ಶಾಸಕರು ಎರೆಡು ವರ್ಷದ ಹಿಂದೆ ಇದೇ ದಿನ ಮಗನ ಮದುವೆ ಆಹ್ವಾನ ನೀಡಲು ಬಂದಿದ್ದರು.
#ಬೆಂಕಿ_ಚಂಡಿನಂತ_ಗೆಳೆಯ_ದಿವ೦ಗತ_ಪೂರ್ಯನಾಯಕರ_ಪತ್ನಿ_ಶಿವಮೊಗ್ಗ_ಗ್ರಾಮಾಂತರದ_ಮಾಜಿ_ಶಾಸಕಿ #ಸಹೋದರಿ_ಶ್ರೀಮತಿ_ಶಾರದಾಪೂರ್ಯ_ನಾಯಕರು_ಮಗನ_ವಿವಾಹ_ಆಹ್ವಾನ_ನೀಡಲು_ಬಂದಿದ್ದರು. (9- ಪೆಬ್ರುವರಿ-2021 ರಂದು) 1995-2000 ದ ಶಿವಮೊಗ್ಗ ಜಿಲ್ಲಾ ಪಂಚಾಯತ್ ನಲ್ಲಿ ನಾವೆಲ್ಲ ಜಿಲ್ಲಾ ಪಂಚಾಯತ್ ಸದಸ್ಯರು ಕೆಲವೊಂದು ಆಡಳಿತಾತ್ಮಕ ವಿಚಾರಗಳನ್ನು ಚಚಿ೯ಸಲು ಪೂಯಾ೯ ನಾಯಕರ ಮನೆಗೆ ಹೋಗುತ್ತಿದ್ದೆವು ಅಲ್ಲಿ ಶ್ರೀಮತಿ ಶಾರದಮ್ಮ ನಮಗೆಲ್ಲ ಕಾಫಿ ಟೀ ತಯಾರಿಸಿ ತಂದು ಕೊಡುತ್ತಿದ್ದರು. ದೆಹಲಿಯಲ್ಲಿ ಕಾಯ೯ ನಿಮಿತ್ತ ಹೋಗಿದ್ದ ನಾಯಕರು ಇಹಲೋಕ ತ್ಯಜಿಸಿದ್ದು ದೊಡ್ಡ ದುರಂತ, ಅವರ ಕಳೇಬರ ರಾಜ್ಯ ಸಕಾ೯ರ ದೆಹಲಿಯಿಂದ ತರಿಸಿ ಕೊಡುವ ದೊಡ್ಡ ತನ ತೋರಿದವರು ಆಗಿನ ಮುಖ್ಯಮಂತ್ರಿ ಜೆ.ಹೆಚ್.ಪಾಟೀಲರು. ಅವತ್ತು ಅಂಜನಾಪುರದಲ್ಲಿ ಪೂಯ೯ ನಾಯಕರ ಅಂತ್ಯ ಸಂಸ್ಕಾರಕ್ಕೆ ಸೇರಿದ್ದ ಜನ ಸ್ತೋಮ 20 ಸಾವಿರಕ್ಕೂ ಹೆಚ್ಚು. ಸರಣಿ ಶಾಲೆಗಳು, ಪೆಟ್ರೋಲ್ ಪಂಪ್, ಕ್ರಷರ್ ಮುಂತಾದ ಪತಿಯ ಉದ್ಯಮಗಳನ್ನ ಶಾರದಮ್ಮ ಪತಿಯ ಅನುಪ ಸ್ಥಿತಿಯಲ್ಲಿ ಮುಂದುವರಿಸಿ, ರಾಜಕಾರಣದಲ್ಲಿ ಜಾತ್ಯಾತೀತ ಜನತಾದಳದಲ್ಲಿ ಶಾಸಕಿಯಾಗಿ ಸಾದನೆ ಮಾಡಿದವರು. ಇಬ್ಬರು ಗಂಡು ಮಕ್ಕಳು ಅದರಲ್ಲಿ ದೊಡ್ಡ ಮಗನ ಮದುವೆ ಇದೇ ಪೆಬ್ರುವರಿ ತಿಂಗಳ 15 ಸೋಮವಾರ ಶಿವಮೊಗ್ಗದ ಲಗಾನ್ ಕಲ್ಯಾಣ ಮಂಟಪದಲ್ಲಿ ನೆರವೇರಿಸಲಿದ್ದಾರೆ. ...