Skip to main content

Posts

Showing posts with the label Shambhu Ram my favourite pet never give chance to skip every day walk

Blog number 1159. ಶಂಭೂರಾಮನೆಂಬ ಬೆಳಗಿನ ನಿತ್ಯ ವಾಕಿಂಗ್ ಸಂಗಾತಿ, ನಿತ್ಯ ವಾಕಿಂಗ್ ಗೆ ಪ್ರೇರೇಪಿಸುವ ಇವನು, ನಿತ್ಯ ನೀರುಣಿಸೆನ್ನುವ ಹೂವಿನ ಗಿಡಗಳಿಂದ ತಪ್ಪಿಸಿಕೊಳ್ಳಲು ಸಾದ್ಯವೇ ಇಲ್ಲ.

https://youtu.be/hFH0ogjIxqg #ನನ್ನ_ಬೆಳಗಿನ_ವಾಕಿಂಗ್_ಜೊತೆಗಾರ #ಶಂಭೂ_ರಾಮ್_ಮುಂದಿನ_ಮಾರ್ಚ್_ತಿಂಗಳಿಗೆ_ಎರೆಡು_ವರ್ಷ #ಇದೇ_ತಳಿಯ_ಬೇರೆ_ನಾಯಿಗಳು_ಹಲ್ಲು_ಉಜ್ಜಿಸಲು_ತುಂಬಾ_ರಗಳೆ_ಮಾಡುತ್ತವೆ. #ರಾಟ್_ವೈಲರ್_ಸಾಕ_ಬೇಕೆಂಬ_ಆಸೆ_ಈಡೇರಿದೆ.     ಸಾಕು ನಾಯಿ ಇದ್ದರೆ ಹೃದಯದ ಆರೋಗ್ಯ ಉತ್ತಮ ಅಂತ ಗೆಳೆಯರು ಹೇಳಿದಾಗ ಯೋಚಿಸುತ್ತಿದ್ದೆ ಮನುಷ್ಯನ ಹೃದಯಕ್ಕೂ ಸಾಕು ನಾಯಿಗೂ ಎಲ್ಲಿಂದ ಸಂಬಂದ ಅಂತ.    ಇದು ಕಟ್ಟುಹಾಕದೆ ಸಾಕುವ ನಾಯಿಗಳಿಗೆ ಸಂಬಂದಿಸಿದ್ದಲ್ಲ ಆದರೆ ನೀವು ಕಟ್ಟುಹಾಕಿ ಸಾಕುವ ನಾಯಿಗಳು ಖಂಡಿತಾ ಅದನ್ನು ಸಾಕುವವರ ಆರೋಗ್ಯ ಪಿಟ್ ನೆಸ್ ಕಾಪಾಡುತ್ತದೆ.   ನಾನು ಸಾಕಿರುವ ರಾಟ್ ವೈಲರ್ ಹೆಸರು ಶಂಭೂ ನಾನು ಕರೆಯುವುದು ಶಂಭೂರಾಮ್ ಅಂತ ಮುಂದಿನ ಮಾರ್ಚ 23ಕ್ಕೆ ಅವನಿಗೆ ಎರೆಡು ವಷ೯ .    ಒಂದು ತಿಂಗಳ ಮರಿ ಬೆಂಗಳೂರಿನ ಕೆನಲ್ ಬ್ರೀಡರ್ ರಿಂದ ಖರೀದಿಸಿ ತಂದದ್ದು, ನನ್ನ ಮಗ ಅವನಿಗೆ ಸರಿಯಾದ ತರಬೇತಿ ನೀಡಿದ್ದರಿಂದ ಶಂಭೂರಾಮ್ ಪ್ರೆಂಡ್ಲಿ ಆಗಿ ಹೊಂದಾಣಿಕೆಯಲ್ಲಿ ಇದ್ದಾನೆ.    ನಮ್ಮ ಜೊತೆ ಮನೆಯಲ್ಲೇ ಇರುವುದರಿಂದ ಹೊರಗಿನಿಂದ ಯಾರೂ ಮನೆಯ ಒಳಗೆ ಬರುವುದು ಕಷ್ಟ ಆಗಿದೆ, ಇದರಿ೦ದ ಮನೆಗೆ ಬರುವ ಗೆಳೆಯರು ಮತ್ತು ಅತಿಥಿಗಳಿಗೆ ನನ್ನ ಲಾಡ್ಜ್ ಆಪೀಸಿನಲ್ಲೇ ಅತಿಥ್ಯ ಕೆಲವರಿಗೆ ಇದು ಅಪಥ್ಯ ಆದರೂ ನಮಗೆ ಅನಿವಾಯ೯ ಆಗಿದೆ.   ಸ್ನಾನ...