#ಇದು ಶಿವಮೊಗ್ಗದ 1961ರ ರಿಯಲ್ ಎಸ್ಟೇಟ್ ಕಥೆ. ಇವರು ಶ್ರೀನಿವಾಸ್ ರಾವ್ ವಯಸ್ಸು 74 ವಷ೯ ಇವರಿಗೆ ಕಣ್ಣಿನ ತೊಂದರೆ ಹುಟ್ಟಿನಿಂದ ಇದೆ, ಇವರ ತಾಯಿ ಇದ್ದಾರೆ 96 ವಷ೯ ಅವರ ಹೆಸರು ಶ್ರೀಮತಿ ಅನ್ನಪೂಣ೯ ಅವರ ಪತಿ ದಿವ೦ಗತ ಶ್ರೀ ಅಚ್ಚುತ ರಾವ್ ಬ್ರಿಟಿಷ್ ಭಾರತೀಯ ಸೈನ್ಯದಲ್ಲಿ ವೆಟರ್ನರಿ ಡಾಕ್ಟರ್ ಆಗಿದ್ದರು, ಸೈನ್ಯದ ಕುದುರೆಗಳ ಆರೈಕೆಗೆ ಇವರು ಅನಿವಾಯ೯.1944ರಲ್ಲಿ ಕಿವಿ ಸಮಸ್ಯೆಯಿ೦ದ ನಿವೃತ್ತರಾದರು, ಪಾಕಿಸ್ತಾನದ ಪೇಶಾವರದಲ್ಲಿ ಬಹಳ ಕಾಲ ಇದ್ದರು. ಆಚ್ಚುತ್ ರಾವ್ ರವರ ತಂದೆ ಶ್ರೀ ಸೀತಾರಾಮಯ್ಯ ಆಗಿನ ಕಾಲದಲ್ಲಿ ಶಿವಮೊಗ್ಗದ ಖ್ಯಾತ ವಕೀಲರು ಅವರಿಗೆ ಈಗಿನ ನಂಜಪ್ಪ ಆಸ್ಪತ್ರೆ ಎದುರು ಮೂರುವರೆ ಎಕರೆ ವಿಸ್ತಿಣ೯ದ ಮಾವಿನ ತೋಪು ಅದರಲ್ಲಿ ದೊಡ್ಡ ಬಂಗಲೆ ಇತ್ತು. 1960ರಲ್ಲಿ ಈಜಾಗವನ್ನ ನಿವೇಶನವಾಗಿ ಪರಿವತಿ೯ಸಿ 30 X 90 ಅಡಿ ನಿವೇಶನ ಮಾಡಿದರು ಅದೇ ಇವತ್ತಿನ ಅಚ್ಚುತ ರಾವ್ ಲೇ ಔಟ್ ಆಗ ಮಾರಟ ಮಾಡಿದ ನಿವೇಶನದ ಬೆಲೆ 300 ರೂಪಾಯಿ !. ಅಚ್ಚುತ ರಾವ್ ರಿಗೆ ಐದು ಗಂಡು, ನಾಲ್ಕು ಹೆಣ್ಣು ಮಕ್ಕಳು ಮಕ್ಕಳಿಗೆ ಒಂದೇ ಒಂದು ಸೈಟ್ ಕೊಡದೆ ಮಾರಾಟ ಮಾಡಿದ್ದರು, ಹಣ ಬಂಗಾರ ಸೈಟ್ ಗಿಂತ ಉತ್ತಮ ಎಂಬುದು ಆ ಕಾಲದ ನಂಬಿಕೆ ಆಗಿತ್ತು. ನಂತರ ಕಾಲಾನಂತರ ಈ ಶ್ರೀನಿವಾಸ ರಾವ್ ಅಡಿಕೆ ಮಂಡಿ ಗುಮಸ್ತರಾಗಿ ಕೆಲಸ ಮಾಡಿದರು ಅವರ ಸಹೋದರರು ಉತ್ತಮ ...