ಕೊರಾನ ಲಾಕ್ ಡೌನ್ ಡೈರಿ - (37).ಲಾಕ್ ಡೌನ್ - 4 ರ ವಿನಾಯ್ತಿಗಳು ಕೊರಾನ ವೈರಸ್ ನಿಯ೦ತ್ರಣಕ್ಕೆ ಸಹಕಾರಿ ಅಲ್ಲ, ರಾಜ್ಯ ಸಕಾ೯ರದ ನಡೆ ಬೇರೆ ರಾಜ್ಯದ ತೀಮಾ೯ನದOತಿಲ್ಲ, ಕೊರಾನ ವೈರಸ್ ನ ಅನಾಹುತಕಾರಿ ಹಂತ ತಲುಪಿದರೆ ಹೊಣೆ ಯಾರದ್ದು?
ಕೊರಾನಾ ಲಾಕ್ ಡೌನ್ ಡೈರಿ -2020 ಲೆಟರ್ ನಂಬರ್- 37 ದಿನಾ೦ಕ: 19 -ಮೇ -2020 #ಲಾಕ್_ಡೌನ್_4_ಕೊರಾನ_ಹರಡಲು_ಫ್ರೀಪಾಸ್. * ಇಷ್ಟು ದಿನದ ನಿಯOತ್ರಣ ಮುಂಜಾಗೃತೆಯನ್ನ ಅಪಹಾಸ್ಯ ಮಾಡಿದಂತೆ ಲಾಕ್ ಡೌನ್ -4 ರ ವಿನಾಯತಿಗಳು. ಈ ಕಾಯಿಲೆಗೆ ಔಷದಿ ಕಂಡು ಹಿಡಿದಿಲ್ಲ ಅಲ್ಲಿ ತನಕ ನಮ್ಮದು ತಂತಿ ಮೇಲಿನ ನಡುಗೆ, ಇಲ್ಲಿವರೆಗೆ ನಮ್ಮ ನಮ್ಮ ಮಿತಿಯ ನಿಯ೦ತ್ರಣ ಇನ್ನೂ ಮುಂದೂ ನೀರಿಕ್ಷಿಸಲು ಸಾಧ್ಯವಿಲ್ಲ. ಯಾಕೆಂದರೆ ಅನೇಕ ರಾಜ್ಯಗಳು ಕೇಂದ್ರ ಸಕಾ೯ರ ವಿನಾಯಿತಿ ನೀಡಿದರೂ ಪರಿಸ್ಥಿತಿಯ ಗಂಬೀರತೆ ನೋಡಿ ಮೇ ತಿಂಗಳ 31 ರವರೆಗೆ ಲಾಕ್ ಡೌನ್ ಮುಂದುವರಿಸಿದೆ. ಆದರೆ ಕನಾ೯ಟಕ ರಾಜ್ಯದಲ್ಲಿ ಮಾತ್ರ ಎಲ್ಲಾ ರೀತಿಯ ವಿನಾಯಿತಿ ನೀಡಿರುವುದು ಮಾತ್ರ ಅಪಾಯಕಾರಿ ನಡೆ ಆಗಿದೆ. ಇದು ಮುಂದಿನ ದಿನದಲ್ಲಿ ರಾಜ್ಯದ ಮುಖ್ಯಮ೦ತ್ರಿ ಯಡೂರಪ್ಪರವರು ಪರಿಸ್ಥಿತಿ ನಿಯ೦ತ್ರಣ ಕೈ ತಪ್ಪಿದರೆ ಹೊಣೆಗಾರರಾಗ ಬೇಕಾದರು ಆಶ್ಚಯ೯ವಿಲ್ಲ. ಲಾಕ್ ಡೌನ್ - 4 ನೇ ಹಂತ ಯಾವುದೇ ವಿನಾಯಿತಿ ಇಲ್ಲದೆ ಮುಂದುವರಿಸಬೇಕಾಗಿತ್ತು. ಈಗಾಗಲೇ ಪರಿಸ್ಥಿತಿ ಕೈ ಮೀರಿದ ಲಕ್ಷಣವಿದೆ ಇದು ವಿಕೋಪಕ್ಕೆ ಹೋಗದಂತೆ ತಡೆಯದೆ ಇರುವಂತ ಆಡಳಿತಾತ್ಮಕ ನಡೆ ವಿವಾದಕ್ಕೆ...