#ಆನ೦ದಪುರಂ_ಇತಿಹಾಸ_70. #ಆನಂದಪುರಂ_ಖಾದರ್_ಬುಡನ್_ಸಾಬರಲ್ಲಿರುವ_ತಾಮ್ರಪತ್ರ #ಈ_ತಾಮ್ರ_ಪತ್ರದಲ್ಲಿ_ಏನಿದೆ? #ಈಗ_ಈ_ತಾಮ್ರ_ಪತ್ರ_ಎಲ್ಲಿದೆ? #ಈ_ತಾಮ್ರ_ಪತ್ರ_ಆನಂದಪುರಂ_ಮಸೀದಿಗೆ_ಕೆಳದಿ_ರಾಜಾಶ್ರಯ_ಇರುವ_ದಾಖಲೆ. #ರಾಜಾ_ವೆಂಕಟಪ್ಪನಾಯಕರ_ಮೊಮ್ಮೊಗ_ರಾಜ_ವೀರಭದ್ರನಾಯಕರು_ನೀಡಿದ_ಭೂದಾನ #ಆನಂದಪುರಂ_ಮಸೀದಿಗೆ_ಭೂದಾನ_ನೀಡಿದ_ತಾಮ್ರಪತ್ರ 2) ಎಪಿಗ್ರಾಪಿಯ ಕ್ರ.ಸಂ 108. ಕಾಲ ಮಾನ ಕ್ರಿ.ಶ. 1631 AD ಆನಂದಪುರಂ ಖಾದರ್ ಬುಡನ್ ಸಾಬರಲ್ಲಿರುವ ತಾಮ್ರಪತ್ರದ ವಿವರ. ಕೆಳದಿ ರಾಜ ವೆಂಕಟಪ್ಪ ನಾಯಕರ ಪುತ್ರ ಭದ್ರಪ್ಪ ನಾಯಕ, ಭದ್ರಪ್ಪ ನಾಯಕರ ಪುತ್ರ ವೀರಭದ್ರ ನಾಯಕರು ಕ್ರಿ.ಶ. 1631 ರಲ್ಲಿ ಆನಂದಪುರಂನ ಮಸೀದಿಗೆ ದಾನವಾಗಿ 12 ವರಹ ಜಮೀನು ದಾನವಾಗಿ ನೀಡಿದ ಭೂದಾನ ಪತ್ರ ಈ ತಾಮ್ರ ಶಾಸನ. ವಿಶೇಷ ಅಂದರೆ ಈ ಶಾಸನದಲ್ಲಿ ಈ ಮಸೀದಿ ಕೆಳದಿ ಅರಸರಿಂದ ನಿಮಿ೯ಸಲ್ಪಟ್ಟದ್ದಾಗಿಯೂ ನಮೂದಿಸಿದ್ದಾರೆ ಮತ್ತು ಮಸೀದಿಯ ದಾರ್ಮಿಕ ಆಚರಣೆಗಾಗಿ ಆನಂದಪುರದ ಸೀಮೆಯ ಮಲವ ಗೊಪ್ಪದಲ್ಲಿ 12 ವರಹಾ ಭೂಮಿ ದಾನ ಕೊಟ್ಟಿದ್ದಾರೆ ಇದರಿಂದ ಕೆಳದಿ ಅರಸರು ಅನ್ಯ ದಮ೯ದವರಿಗೂ ಆಶ್ರಯ ನೀಡಿದವರು ಮತ್ತು ಆನಂದಪುರಂ ಮಸೀದಿಗೆ ಕೆಳದಿ ರಾಜಾಶ್ರಯ ಇತ್ತು ಎಂಬುದು ಇದರಿಂದ ತಿಳಿದು ಬರುತ್ತದೆ. ಈ ತಾಮ್ರ ಶಾಸನ 1902ರಲ್ಲಿ ಕರ್ನಾಟಕ ಎಪಿಗ್ರಾಫಿಯಾ ದಲ್ಲಿ ದಾಖಲಾಗಿದೆ, ಆಗ ಈ ತಾಮ್ರ ಶಾಸನ ಆನಂದಪುರಂ ನ ಖಾದರ್ ಬುಡನ್ ಸಾಬರಲ್ಲಿತ್...