Skip to main content

4177.ಈಗಿನ_ಕಳಪೆ_ #ಬ್ರಾಂಡಿ_ವಿಸ್ಕಿಗಿಂತ_ಹಿಂದಿನಸರಾಯಿಯೇ_ಇರಬೇಕಾಗಿತ್ತು.


ಈಗಿನ_ಕಳಪೆ_ #ಬ್ರಾಂಡಿ_ವಿಸ್ಕಿಗಿಂತ_ಹಿಂದಿನ
ಸರಾಯಿಯೇ_ಇರಬೇಕಾಗಿತ್ತು.

 ಸರಾಯಿಗಿಂತ ಮಾರಕ ಈಗಿನ ಕಡಿಮೆ ಬೆಲೆಯ ಚೀಪರ್ ಬ್ರಾಂಡಿ ವಿಸ್ಕಿಗಳು ಇದರ ಗುಣಮಟ್ಟ ಕಾಪಾಡ ಬೇಕಾದವರು ಯಾರು?...

  ನಿಮ್ಮ ಊರುಗಳಲ್ಲಿ ನೀವು ನೋಡಿರಬಹುದು ಕಡಿಮೆ ಆದಾಯದವರು ಅನಿವಾರ್ಯವಾಗಿ ಅವರ ಬಜೆಟ್ ಗೆ ತಕ್ಕಂತೆ ಕಡಿಮೆ ಬೆಲೆಯ ಮಧ್ಯ ಖರೀದಿಸಿ ಕುಡಿಯುತ್ತಾರೆ.

 ನಂತರ ಕೆಲವಷ೯ಗಳಲ್ಲಿ ಅವರ ಆರೋಗ್ಯದಲ್ಲಿ ಏರು ಪೇರು ಆಗುತ್ತದೆ ಇದಕ್ಕೆ ಕಾರಣ ಇದು ಗುಣಮಟ್ಟದ ಬ್ರಾಂಡಿ ವಿಸ್ಕಿ ಆಗಿಲ್ಲ.

  ಹಳ್ಳಿಗಳಲ್ಲಿ ಅತಿ ಹೆಚ್ಚು ಯುವಕರು ಕಿಡ್ನಿ ಪೈಲೂರ್ ಗೆ ಕಾರಣವಾಗಿರುವುದು ಈ ಕಳಪೆ ಮಧ್ಯವೇ ಆಗಿದೆ.

    ಕೆಲವು ವರ್ಷಗಳ ಹಿಂದೆ ರಾಜ್ಯದಲ್ಲಿ ಸರಾಯಿ ಮಾರಾಟ ಇತ್ತು ಈಗಲೂ ಪಶ್ಚಿಮ ಬಂಗಾಳದಲ್ಲಿ ಸರಾಯಿ ರದ್ದಾಗಿಲ್ಲ.

   ಕರ್ನಾಟಕ ರಾಜ್ಯ ಸರ್ಕಾರ ಸರಾಯಿಯಲ್ಲಿ ಗುಣಮಟ್ಟ ಇಲ್ಲ. ಕಳಪೆ ಮಧ್ಯ ಅಂತ ಕಡಿಮೆ ಬೆಲೆಗೆ ಸಿಗುತ್ತಿದ್ದ ಸರಾಯಿಯನ್ನು ರದ್ದು ಮಾಡಿತ್ತು.

  ಇದಕ್ಕೆ ಸರ್ಕಾರ ನೀಡಿದ ಕಾರಣ ಬಡ ಜನರ ಆರೋಗ್ಯಕ್ಕಾಗಿ ಕಡಿಮೆ ಬೆಲೆಯಲ್ಲಿ  ಮಧ್ಯದ ಅಂಗಡಿಯಲ್ಲಿಯೇ ಗುಣಮಟ್ಟದ ಮಧ್ಯ ಬ್ರಾಂಡಿ ವಿಸ್ಕಿ ಮಾರಾಟಕ್ಕೆ ಅವಕಾಶ ಕಲ್ಪಿಸುವುದು.

   ಆದರೆ ಸರಾಯಿ ಮಾರಾಟದ ಕಾಲದಲ್ಲಿ ಸರಾಯಿ ಸೇವನೆಯಿಂದ ಕಿಡ್ನಿ ಪೈಲ್ಯೂರ್ ಆಗುತ್ತಿದ್ದಕ್ಕಿಂತ ಹೆಚ್ಚು ಪಟ್ಟು ಈಗಿನ  ಮಧ್ಯದ ಅಂಗಡಿಯ ಬ್ರಾಂಡಿ ವಿಸ್ಕಿ ಸೇವನೆಯಿಂದ ಆಗುತ್ತಿರುವುದು ಮಾತ್ರ ಆಶ್ವರ್ಯ ಮತ್ತು ಸತ್ಯ.

  ಕಳಪೆ ಅಥವಾ ನಕಲಿ ಮದ್ಯಪಾನ ಸೇವಿಸುವುದರಿಂದ ತೀವ್ರ ಮೂತ್ರಪಿಂಡ ವೈಫಲ್ಯ  ಉಂಟಾಗುವ ಸಾಧ್ಯತೆ ಅತ್ಯಂತ ಹೆಚ್ಚು.

  ​ ಗುಣಮಟ್ಟ ಇಲ್ಲದ ಕಡಿಮೆ ದರದ ಮದ್ಯದಲ್ಲಿ ಅಮಲು ಹೆಚ್ಚಿಸಲು ಮತ್ತು ವೆಚ್ಚ ಕಡಿಮೆ ಮಾಡಲು ಅತ್ಯಂತ ವಿಷಕಾರಿ ಕಡಿಮೆ ಬೆಲೆಯ ಡಿನೇಚರ್ ಸ್ಪಿರಿಟ್ ಮತ್ತು ಕೃತಕ ಬಣ್ಣ ಬಳಸಲಾಗುತ್ತದೆ.

   ಡಿನೇಚರ್ ಸ್ಪಿರಿಟ್ ಕಳಪೆ ದರ್ಜೆಯ ಬಣ್ಣ ತಯಾರಿಕೆ ಇತ್ಯಾದಿಗೆ ಬಳಸುವ ಸ್ಪಿರಿಟ್ ಇದು ಮನುಷ್ಯ ಸೇವಿಸಲೇ ಬಾರದು.

  ಬ್ರಾಂಡಿ ವಿಸ್ಕಿ ತಯಾರಿಯಲ್ಲಿ ರೆಕ್ಟಿಫೈಡ್ ಸ್ಪಿರಿಟ್ ಮತ್ತು ನ್ಯೂಟ್ರಲ್ ಸ್ಟಿರಿಟ್ ಮಾತ್ರ ಬಳಸ ಬೇಕು ಆದರೆ ಇದು ದುಬಾರಿ.

    ಡಿನೇಚರ್ ಸ್ಪಿರಿಟ್ ಮನುಷ್ಯನ ಹೊಟ್ಟೆ ಪ್ರವೇಶಿಸಿದಾಗ ಅದು ಯಕೃತ್ತಿನ ಜೊತೆಗೆ ಕಿಡ್ನಿಯನ್ನು ಕ್ಷಣಾರ್ಧದಲ್ಲಿ ನಿಷ್ಕ್ರಿಯಗೊಳಿಸುತ್ತವೆ.

​  ಕಳಪೆ ಮದ್ಯದಲ್ಲಿ ಅತಿ ಅಪಾಯಕಾರಿ ಅಂಶವೆಂದರೆ #ಮಿಥನಾಲ್. 

  ದೇಹ ಪ್ರವೇಶಿಸಿದ ನಂತರ ಇದು ಫಾರ್ಮಿಕ್ ಆಸಿಡ್ ಆಗಿ ಬದಲಾಗುತ್ತದೆ ಇದು ರಕ್ತದಲ್ಲಿ ತೀವ್ರ ಆಮ್ಲೀಯತೆಯನ್ನು ಉಂಟುಮಾಡಿ, ಕಿಡ್ನಿಯ ಜೀವಕೋಶಗಳನ್ನು ಸಂಪೂರ್ಣವಾಗಿ ಸುಟ್ಟುಹಾಕುತ್ತದೆ.

 ​ತೀವ್ರ ನಿರ್ಜಲೀಕರಣಕ್ಕೆ ಕಾರಣ ಆಗುವ ಕಳಪೆ ಆಲ್ಕೋಹಾಲ್ ದೇಹದಲ್ಲಿನ ನೀರನ್ನು ಕ್ಷಿಪ್ರವಾಗಿ ಹೊರಹಾಕುತ್ತದೆ. 

  ಇದರಿಂದ ಕಿಡ್ನಿಗೆ ರಕ್ತ ಪರಿಚಲನೆ ಕಡಿಮೆಯಾಗಿ ರಕ್ತ ಶುದ್ಧೀಕರಣ ಪ್ರಕ್ರಿಯೆ ದಿಢೀರನೆ ಸ್ಥಗಿತಗೊಳ್ಳುತ್ತದೆ.

  ​ ವಿಷಕಾರಿ ಮದ್ಯ ಸೇವಿಸಿದಾಗ ರಕ್ತದೊತ್ತಡ ತೀವ್ರವಾಗಿ ಕುಸಿಯುತ್ತದೆ  ಇದರಿಂದ ಕಿಡ್ನಿಗೆ ಅಗತ್ಯವಿರುವ ಆಮ್ಲಜನಕ ಸಿಗದೆ ಮೂತ್ರಪಿಂಡದ ಅಂಗಾಂಶಗಳು ಸಾಯಲಾರಂಭಿಸುತ್ತವೆ.

​  ವಿಷಕಾರಿ ಮದ್ಯದಿಂದ ಸ್ನಾಯುಗಳು ಕರಗಿ ರಕ್ತಕ್ಕೆ ಸೇರುತ್ತವೆ. 

    ಈ ಸ್ನಾಯುವಿನ ಕಣಗಳು  ಕಿಡ್ನಿಯ ಸೂಕ್ಷ್ಮ ನಳಿಕೆಗಳನ್ನು ಸಂಪೂರ್ಣವಾಗಿ ಬ್ಲಾಕ್ ಮಾಡಿ ಮೂತ್ರ ಉತ್ಪಾದನೆಯನ್ನು ನಿಲ್ಲಿಸುತ್ತವೆ.

  ​ಕಳಪೆ ಮದ್ಯ ಸೇವಿಸಿದ ಕೆಲವೇ ಗಂಟೆಗಳಲ್ಲಿ ಕಣ್ಣು ಮಂಜಾಗುವುದು, ವಾಂತಿ, ಹೊಟ್ಟೆನೋವು, ತೀವ್ರ ಆಯಾಸ ಮತ್ತು ಮೂತ್ರ ವಿಸರ್ಜನೆ ಸಂಪೂರ್ಣವಾಗಿ ನಿಲ್ಲುವುದು ಕಿಡ್ನಿ ವೈಫಲ್ಯದ ಪ್ರಮುಖ ಲಕ್ಷಣಗಳಾಗಿವೆ. 

  ಇಂತಹ ಸಂದರ್ಭದಲ್ಲಿ ತಕ್ಷಣವೇ ಡಯಾಲಿಸಿಸ್ ಮತ್ತು ತುರ್ತು ವೈದ್ಯಕೀಯ ಚಿಕಿತ್ಸೆ ಸಿಗದಿದ್ದರೆ ಸಾವು ಸಂಭವಿಸಬಹುದು.

  ಈ ಬಗ್ಗೆ ನಿಮ್ಮ ಅಭಿಪ್ರಾಯ ಬರೆಯಿರಿ...

 #cheaper #brandi #whiski 
#arrack #MRP #bar #retail
#excise

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...