ಭಾಗ -52, ಆನಂದಪುರಂ ಇತಿಹಾಸ, ಉತ್ತರ ಕರ್ನಾಟಕದ ಸುಪ್ರಸಿದ್ಧ ಜಮಖಂಡಿ ನಾಟಕ ಕಂಪನಿ ಆನಂದಪುರಂ ನಲ್ಲಿ ಮರು ಹುಟ್ಟು ಪಡೆದಿದ್ದು.
#ಭಾಗ_52. #ಆನಂದಪುರಂ_ಇತಿಹಾಸ. #ಶ್ರೀ ಗಜಾನನ ನಾಟಕ ಮಂಡಳಿ ಜಮಖಂಡಿ_ನಾಟಕ_ಸಂಸ್ಥೆ. #ಪ್ರಖ್ಯಾತ_ನಾಟಕ_ಕಂಪನಿ_ಅಂತಿಮ_ದಿನಗಳು_ಆನಂದಪುರಂನಲ್ಲಿ. #ಆನಂದಪುರಂಗೆ_ಬಂದಾಗ_ಹಣ_ಸಹಾಯ_ಮಾಡಿ_ಆಶ್ರೀವದಿಸಿ_ಪ್ರೋತ್ಸಾಹಿಸಿದ_ವೆಂಕಟಾಚಲಯ್ಯಂಗಾರರು. #ಕನ್ನಡ_ಚಲನಚಿತ್ರ_ನಟರಾದ_ಲೋಕೇಶ್_ದಿರೇಂದ್ರಗೋಪಾಲ್_ಆನಂದಪುರಂನಲ್ಲಿ_ತಿಂಗಳುಗಟ್ಟಲೆ_ಕ್ಯಾಂಪ್ #ಆನಂದಪುರಂ_ವಾಸಿಗಳೇ_ಆದ_ಜಮಖಂಡಿ_ರಾಮರಾವ್_ಒಡೆಯರ್_ರಾಜ್ಯೋತ್ಸವ _ಪ್ರಶಸ್ತಿ_ಪಡೆದರು. ಜಮಖಂಡಿ ರಾಮಕೃಷ್ಣರನ್ನು ಕಲಾವಿದರು ರಾಮರಾವ್ ಒಡೆಯರ್ ಎಂದೇ ಕರೆಯುತ್ತಿದ್ದರು, ಇವರ ಊರು ಜಮಖಂಡಿ, ಅದೇ ಹೆಸರಿನಲ್ಲಿ ಇವರು ಪ್ರಾರಂಬಿಸಿದ ಶ್ರೀ ಗಜಾನನ ನಾಟಕ ಮಂಡಳಿ ಕಂಪನಿ ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧಿ ಹೊಂದಿತ್ತು. ಜಮಖಂಡಿ ನಾಟಕ ಕಂಪನಿ ಟಿಪ್ಪು ಸುಲ್ತಾನ್ ಎಂಬ ಐತಿಹಾಸಿಕ ನಾಟಕದಿಂದ ಅತ್ಯಂತ ಜನಪ್ರಿಯತೆ ಹೊಂದಿತ್ತು ಈ ನಾಟಕದಲ್ಲಿ ರಾಮರಾವ್ ರ ಬ್ರಿಟಿಷ್ ಕರ್ನಲ್ ಪಾತ್ರ ಕೂಡ ಮನೆ ಮಾತಾಗಿದ್ದ ಕಾಲವದು, ಶಾಂತಕುಮಾರ್ ಮೀರ್ ಸಾದಿಕ್ ಪಾತ್ರದಿಂದ ಪ್ರಸಿದ್ಧರಾಗಿದ್ದರು. ಈ ನಾಟಕ ಕಂಪನಿ ಪ್ರಾರಂಬಿಸಿದ ಸತ್ಯನಾರಾಯಣ ವೃತ ನಾಟಕ ಮತ್ತು ಈ ನಾಟಕದ ಸೀನರಿಗಳು ಸಿನಿಮಾವನ್ನು ಮೀರಿಸುವಂತ ಅದ್ದೂರಿ ಆಗಿತ್ತು, ಆಸ್ತಿಕರೆಲ್ಲ ಈ ನಾಟಕ ಎಷ್ಟು ಸಾರಿ ನೋಡಿದರೂ ಕಡಿಮೆ ಎಂಬಂತೆ ಪದೇ ಪದೇ ವೀಕ್ಷಿಸುತ್ತಿದ್ದರು....