Skip to main content

Posts

Showing posts with the label Anandapuram devalopment coordinator Sri Ranganath Bhat

ಸ್ವಾತಂತ್ರ ನಂತರದ ನವ ಆನಂದಪುರಂ ನಿಮಾ೯ಣದಲ್ಲಿ ಮಂತ್ರಿ ಬದರಿನಾರಾಯಣರ ಜೊತೆ ಸಹಕರಿಸುತ್ತಿದ್ದ ಸಾತ್ವಿಕ ದೈವಭಕ್ತ ರಂಗನಾಥ ಭಟ್ಟರು ಈಗ ನಿವೃತ್ತ ಜೀವನದಲ್ಲಿ

#ಆನಂದಪುರದ_ಜನತೆ_ಮಾರೆಯಲಾರದ_ರಂಗನಾಥ_ಭಟ್ಟರು #ಸ್ವಾತಂತ್ರ_ನಂತರದ_ಮೊದಲ_ವಿಲೇಜ್_ಅಕೌಂಟೆಂಟ್_ಮತ್ತು_ಆನಂದಪುರದ_ವಿಲೇಜ್_ಪಂಚಾಯತ್_ಕಾಯ೯ನಿವ೯ಹಿಸಿದವರು.          ಆನಂದಪುರದ ಅಧಿಕೃತ ಮಾಹಿತಿ ಹೇಳುವವರು ಈ ರಂಗನಾಥ ಭಟ್ಟರು ಮತ್ತು ಬೋಜ್ ರಾಜ್ ಮಾಸ್ತರ್ (ಬೋಜರಾಜ್ ಅಯ್ಯಂಗಾರರು) ಮಾತ್ರ, ಬೋಜ್ ರಾಜ್ ಆಯಂಗಾರರ ಮತ್ತು ರಂಗನಾಥ ಭಟ್ಟರ ಕುಟುಂಬ ಪ್ರಸಿದ್ಧ ಭೂ ಮಾಲಿಕರಾದ ರಾಮಕೃಷ್ಣ ಅಯ್ಯಂಗಾರ್ (ಮಂತ್ರಿ ಬದರಿನಾರಾಯಣ ಅಯ್ಯಂಗಾರ್ ರ ತಂದೆ) ಆನಂದಪುರಕ್ಕೆ ಬರುವ ಮೊದಲೇ ಇವರ ಅಜ್ಜಂದಿರದ್ದು ಮೂರು ತಲೆಮಾರು ಕಳೆದಿತ್ತಂತೆ.      ನನಗೆ ಬಾರೀ ಕಷ್ಟದಿಂದ ಆನಂದಪುರದ ವಿಲೇಜ್ ಪಂಚಾಯಿತಿ ಕಟ್ಟಡದಲ್ಲೇ ಆನಂದಪುರದ ಶ್ರೀಮತಿ ಕೆರಿಯಮ್ಮ ನಡೆಸುತ್ತಿದ್ದ ನಸ೯ರಿ ಶಾಲೆಗೆ ಸೇರಿಸಿದಾಗ (ಒಂದೆರೆಡು ದಿನದಲ್ಲೇ ಬಿಟ್ಟುಬಿಟ್ಟೆ 1968 ರಲ್ಲಿ) ರಂಗನಾಥ ಭಟ್ಟರು ಬಿಳಿ ಶಟ್೯ ಮತ್ತು ಬಿಳಿ ಪಂಚೆಯಲ್ಲಿ ವಿಲೇಜ್ ಪಂಚಾಯಿತಿ ಅಧಿಕಾರಿ ಮತ್ತು ರೆವಿನ್ಯೂ ಇಲಾಖೆ ವಿಲೇಜ್ ಅಕೌಂಟೆಂಟ್ ಆಗಿದ್ದರು, ಆಗ ವಿಲೇಜ್ ಪಂಚಾಯತ್ ಛೇಮ೯ನ್ ಬದರೀನಾರಾಯಣ್ ಆಯ್ಯಂಗಾರರ ಅಣ್ಣ ವೆಂಕಟಚಲ ಅಯ್ಯಂಗಾರರು. (ಆಗ ರೆವಿನ್ಯೂ ಇಲಾಖೆಯ ಅಡಿಯಲ್ಲಿ ವಿಲೇಜ್ ಪಂಚಾಯಿತಿ ಇತ್ತು ಈಗ ಪ್ರತ್ಯೇಕ ಪಂಚಾಯತ್ ಇಲಾಖೆ ಆಗಿದೆ.)    ಪ್ರತಿ ವರ್ಷದಂತೆ ಆನಂದಪುರದ ಇತಿಹಾಸ ಪ್ರಸಿದ್ದಿ ಪಡೆದ ರಂಗನಾಥ ದೇವಾಲಯದ ಜಾತ್ರಾ ಆಹ್ವಾನ...