Skip to main content

Posts

Showing posts with the label Nominating administration committee to all Gramapanchayath of Karnataka state

ಕೊರಾನ ಲಾಕ್ ಡೌನ್ ಡೈರಿ (39) .ಆಡಳಿತಾವ ದಿ ಮುಗಿದ ರಾಜ್ಯದ ಗ್ರಾಮ ಪಂಚಾಯತಗಳಿಗೆ ನಾಮ ನಿದೇ೯ಶನ ಸದಸ್ಯರ ನಾಮಕರಣ ಮಾಡಿ ಮುಂದಿನ ಚುನಾವಣೆ ವರೆಗೆ ಆಡಳಿತ ಮಂಡಳಿ ರಚಿಸುವ ಪಕ್ಷದ ಕಾಯ೯ಕತ೯ರಿಗೆ ಬಂಪರ್ ಕೊಡುಗೆ ನೀಡುತ್ತಿರುವ ರಾಜ್ಯ ಸಕಾ೯ರ.

ಕೊರಾನಾ ಲಾಕ್ ಡೌನ್ ಡೈರಿ -2020  ಲೆಟರ್ ನಂಬರ್- 39    ದಿನಾ೦ಕ: 21 -ಮೇ -2020 *ಕೊರಾನಾ ಜನರ ಜೀವ ಹಿಂಡುತ್ತಿದ್ದರೂ ಗ್ರಾಮ ಪಂಚಾಯತ್ ಮಟ್ಟದಲ್ಲಿ ಹೊಸ ರಾಜಕಾರಣಕ್ಕೆ ಕಾರಣವಾಗಿದೆ.*      ಕೊರಾನ ವೈರಸ್ ಜನರ ಜೀವಕ್ಕೆ ಗಂಡಾ೦ತರ ಉoಟು ಮಾಡಿದ್ದರೂ ಗ್ರಾಮ ಮಟ್ಟದಲ್ಲಿ ಮಾತ್ರ ಗ್ರಾಮ ಪಂಚಾಯಿತಿಗಳಿಗೆ ನಾಮ ನಿಧೇ೯ಶನ ಸದಸ್ಯರ ನೇಮಕ ಮಾಡುವ ವಿಚಾರ ಗರಿಗೆದರಿದೆ.     ಗ್ರಾಮ ಪಂಚಾಯತ್ ಚುನಾವಣೆಗೆ ಪಕ್ಷ ಇಲ್ಲ ಅನ್ನುವುದು ಕೇವಲ ನಾಮಕಾವಸ್ಥೆ ಆದರೆ ಇಲ್ಲಿ ಸ್ಪದೆ೯ ಮಾಡುವವರು ವಿವಿದ ಪಕ್ಷಕ್ಕೆ ಸೇರಿದ ತಳಮಟ್ಟದ ಕಾಯ೯ಕತ೯ರೆ.    ಆಯಾ ಪಕ್ಷದ ಬಹುಮತದ ಆದಾರದ ಮೇಲೆ ಅಧ್ಯಕ್ಷರು ಉಪಾಧ್ಯಕ್ಷರು ಆಯ್ಕೆ ಆಗುತ್ತಾರೆ.    ಪರಿಸ್ಥಿತಿ ಸರಿ ಇದ್ದು ಕೊರಾನಾ ವೈರಸ್ ಬಾದೆ ಇರದಿದ್ದರೆ ಇಷ್ಟರಲ್ಲಿ ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಯುತ್ತಿತ್ತು ಆದರೆ ಈ ಎಲ್ಲಾ ಗಂಡಾ೦ತರದಿ೦ದ ಗ್ರಾಮ ಪಂಚಾಯತ್ ಚುನಾವಣೆ ಅನಿವಾಯ೯ವಾಗಿ ಮುಂದೂಡಲೇ ಬೇಕಾಗಿದೆ.    ಮೇ ತಿಂಗಳ (2020) ಕೊನೆಗೆ ಈ ಹಿಂದಿನ 5 ವಷ೯ ಕಾಲಾವಧಿ ಪೂರೈಸಲಿರುವ ಗ್ರಾಮ ಪಂಚಾಯತ ಆಡಳಿತ ಮOಡಳಿಗೆ ಹೊಸ ಸದಸ್ಯರ ಚುನಾವಣೆ ನಡೆಸಲಾಗದ್ದರಿಂದ ಸಕಾ೯ರ ಆಡಳಿತಾಧಿಕಾರಿ ನೇಮಕ ಮಾಡಬೇಕಾಗಿದೆ.   ಆದರೆ ರಾಜ್ಯ ಸಕಾ೯ರ ಮುಂದಿನ ಚುನಾವಣೆ ತನಕ...