ಭಾಗ - 2 , ಸಾತ್ವಿಕ ಜೀವನ, ಸಮಾಜವಾದಿ ಚಿಂತನೆಯ, ಸವ೯ ಧರ್ಮ ಸಹಿಷ್ಣುತೆಯ ಅಜಾತ ಶತ್ರು ಪಿ.ಪುಟ್ಟಯ್ಯ ಶಾಂತವೇರಿ ಗೋಪಾಲಗೌಡರ ಜೀವನದ ನಡೆ ನುಡಿಯ ಕೊನೆಯ ತಂತು ಆಗಿದ್ದಾರೆ.
ಮುಂದುವರಿದ ಎರಡನೆ ಭಾಗ #ಪಿ_ಪುಟ್ಟಯ್ಯ #ಒಂದು_ಕಾಲದಲ್ಲಿ_ಇವರ_ಪ್ರಕೃತಿ_ಮುದ್ರಣಾಲಯ_ಅನುಭವ_ಮಂಟಪದಂತೆ_ಆಗಿತ್ತು. #ಶಿವಮೊಗ್ಗ_ಜಿಲ್ಲೆಯ_ಹಿರಿಯ_ಸಮಾಜವಾದಿಗಳು. #ಮಣಿಪಾಲ್_ಸಮೀಪದ_ಪೆರ್ಡೂರಿಂದ_ಸಾಗರಕ್ಕೆ_1946ರಲ್ಲಿ_ಬಂದವರು #ಮಲ್ನಾಡಳ್ಳಿ_ಮುಂದಿನ_ಸ್ವಾಮಿಗಳು_ಎಂದೆ_ಜನರ_ಬಾವನೆಯಲ್ಲಿದ್ದವರು. #ಸಾಗರ_ಪಟ್ಟಣ_1946ರಿಂದ_1960ರ_ತನಕ_ಹೇಗಿತ್ತು. #ಭಾಗ_2. ನಾನು ಪುಟ್ಟಯ್ಯನವರನ್ನು ಮೊದಲು ನೋಡಿದ್ದು ಸಾಗರದ ನ್ಯಾಯದ ತಕ್ಕಡಿ ಸಂಪಾದಕರಾಗಿದ್ದ ತೀನಾ ಶ್ರೀನಿವಾಸರನ್ನು (ನಂತರ ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರು, ಸಾಗರ ನಗರಸಭೆ ಅಧ್ಯಕ್ಷರೂ ಆಗಿದ್ದ) ಜಮೀಲ್ ಎಂಬ ಸಬ್ ಇನ್ಸ್ಪೆಕ್ಟರ್ ಹಲ್ಲೆ ಮಾಡಿದಾಗ ನಾನು,ಶಿವಾನಂದ ಕುಗ್ವೆ ಮತ್ತು ಅದರಂತೆ ವಿಶ್ವನಾಥ ಗೌಡರು ಜೊತೆ ಇವರ ಅನುಭವ ಮಂಟಪ ಅರ್ಥಾತ್ ಪ್ರಕೃತಿ ಮುದ್ರಣಾಲಯ ನೋಡಿದ್ದು, ನಂತರ ಶಿವಮೊಗ್ಗ ಹೋದಾಗೆಲ್ಲ ಮೊದಲ ಬೇಟಿ ಇಲ್ಲಿಗೆ ನಂತರ ಬೇರೆಲ್ಲ ಕೆಲಸಕ್ಕೆ. ನಾನು ಇವರ ಕಛೇರಿಯಲ್ಲೇ ಡಾ. ಕೋವೂರರ ಪವಾಡ ರಹಸ್ಯ, ಹೆಚ್.ಎನ್.ನರಸಿಂಹಯ್ಯರ ಆತ್ಮಚರಿತ್ರೆ, ಮನುಶಾಸ್ತ್ರದ ಕನ್ನಡ ಅನುವಾದ ಮುಂತಾದ ಅನೇಕ ಪುಸ್ತಕ ಇಲ್ಲಿಂದನೇ ಉಚಿತವಾಗಿ ಪಡೆದದ್ದು ಓದಿದ್ದು. ಇವರ ಜೊತೆ ಹೋಟೆಲ್ ಗೆ ಹ...