ಭಾಗ_3_ಜೈನ_ನಿಶಿದಿ_ಮಂಟಪಗಳು_ಸಿದ್ದಪ್ಪನ_ಗುಡಿಗಳಾದ_ಕಥೆ! ಇತಿಹಾಸದ ಮರೆಯಲ್ಲಿ ಕಳೆದುಹೋದ ಸತ್ಯ... ಜೈನ ನಿಶಿದಿ ಮಂಟಪಗಳನ್ನು ಕಾಲಾಂತರದಲ್ಲಿ ಸ್ಥಳೀಯರು "ಸಿದ್ದಪ್ಪನ ಗುಡಿ", "ಸಿದ್ಧರ ಗುಡಿ" ಅಥವಾ "ಸಿದ್ದೇಶ್ವರ ದೇವಸ್ಥಾನ" ಎಂದು ಕರೆಯಲು ಅತ್ಯಂತ ಆಳವಾದ ಭಾಷಾಂತರ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರಣಗಳಿವೆ. ಇತಿಹಾಸ ಮತ್ತು ಜನಪದದ ಹಿನ್ನೆಲೆಯಲ್ಲಿ ಇದನ್ನು ಹೀಗೆ ವಿಶ್ಲೇಷಿಸಬಹುದು. ಜೈನ ಧರ್ಮದ 'ಸಿದ್ಧ' ಪರಿಕಲ್ಪನೆಯಿಂದ ಮತ್ತು ಜೈನ ತತ್ತ್ವಶಾಸ್ತ್ರದ ಪ್ರಕಾರ ಆತ್ಮವು ಕರ್ಮಬಂಧನಗಳಿಂದ ಮುಕ್ತವಾಗಿ ಮೋಕ್ಷವನ್ನು ಪಡೆದಾಗ ಅದನ್ನು 'ಸಿದ್ಧ' (ಎಂದು ಕರೆಯಲಾಗುತ್ತದೆ. ಸಲ್ಲೇಖನ ವ್ರತವನ್ನು ಆಚರಿಸಿ ದೇಹ ತ್ಯಾಗ ಮಾಡಿದ ಜೈನ ಮುನಿಗಳು ಮುಕ್ತಿ ಅಥವಾ ಸಿದ್ಧಾವಸ್ಥೆಯನ್ನು ತಲುಪಿದ್ದಾರೆ ಎಂದು ನಂಬಲಾಗುತ್ತದೆ. ಹೀಗೆ ಸಿದ್ಧರಾದ ಅಥವ ಮುಕ್ತಿ ಪಡೆದ ಮುನಿಗಳ ಸ್ಮರಣಾರ್ಥ ನಿರ್ಮಿಸಿದ ಮಂಟಪಗಳಾದ್ದರಿಂದ ಇವುಗಳನ್ನು "ಸಿದ್ಧರ ಮಂಟಪ" ಅಥವಾ "ಸಿದ್ಧರ ಜಾಗ" ಎಂದು ಕರೆಯಲಾಗುತ್ತಿತ್ತು. ಇದು ಕಾಲಕ್ರಮೇಣ ಜನಸಾಮಾನ್ಯರ ಬಾಯಲ್ಲಿ 'ಸಿದ್ದಪ್ಪನ ಗುಡಿ'ಯಾಗಿ ಅಥವ ಸಿದ್ದೇಶ್ವರನ ದೇವಾಲಯವಾಗಿ ಬದಲಾಯಿತು. ನಾಥ ಪಂಥ ಮತ್ತು ಶೈವ ಧರ್ಮದ ಪ್ರಭಾವಗಳಿಂದ 12ನೇ ಶತಮಾನದ ನಂತರ ಕರ್ನಾಟಕದಲ್ಲಿ ಜೈನ ಧರ್ಮದ ಪ್ರಭಾವ ಕಡಿಮೆಯ...