Skip to main content

Posts

Showing posts with the label 500 Years back para boiled rice popularised by GERUSOPPEJAIN KING HIVARASA

Blog number 2045. ಕುಚುಲಕ್ಕಿ ಇಂಗ್ಲೀಷ್ ನಲ್ಲಿ ಪ್ಯಾರಾ ಬಾಯಿಲ್ಡ್ ರೈಸ್ 500 ವಷ೯ಗಳ ಹಿಂದೆ ಜಗತ್ತಿಗೆ ಪರಿಚಯಿಸಿದ ಗೇರುಸೊಪ್ಪೆಯ ಜೈನ ರಾಜ ಹೈವರಸ

#ಕುಚುಲಕ್ಕಿ_ಕಂಡು_ಹಿಡಿದ_ದೇಶ_ಭಾರತ #ಐನೂರು_ವರ್ಷದ_ಹಿಂದೆ_ಗೇರುಸೊಪ್ಪೆ_ಸಾಮ್ರಾಜ್ಯದ_ಹೈವರಸ_ಜಗತ್ತಿಗೆ_ಪರಿಚಯಿಸಿದರು #ಆದರೆ.... #ಜರ್ಮನ್_ವಿಜ್ಞಾನಿ_ಎರಿಕ್_ಗುಸ್ತಾಂವ್_ಹೆಜ್ಲಾಂಬ್_ಮತ್ತು_ಬ್ರಿಟಿಷ್_ವಿಜ್ಞಾನಿ_ಪ್ರಾನ್ಸಿಸ್_ಹೆರಾನ್_ರೋಜರ್ #ಕುಚುಲಕ್ಕಿ_1910ರಲ್ಲಿ_ಕಂಡು_ಹಿಡಿದ_ದಾಖಲೆ_ಹೊಂದಿದ್ದಾರೆ. #ನನ್ನ_ಅಜ್ಜಿ_100_ವರ್ಷದ_ಹಿಂದೆ_ಆನಂದಪುರಂನಲ್ಲಿ_ಕುಚುಲಕ್ಕಿ_ಉದ್ಯಮ_ನಡೆಸಿದ್ದರು #ಎಂಬತ್ತರ_ದಶಕದಲ್ಲಿ_ನಾನು_ಕುಚಲಕ್ಕಿ_ಮಾಡುವುದು_ಕಲಿತಿದ್ದೆ.    ಇವತ್ತಿನ #ಡಿಜಿಟಲ್_ಮಾಧ್ಯಮ ಪ್ರಸಾರ ಮಾಡಿದ ಗೇರುಸೊಪ್ಪೆ ಸಾಮ್ರಾಜ್ಯದ ಇತಿಹಾಸದಲ್ಲಿ ಇತಿಹಾಸ ಸಂಶೋದಕರಾದ ಲೋಕರಾಜ ಜೈನರು ರಾಜ ಹೈವರಸ 500 ವರ್ಷದ ಹಿಂದೆ ಜಗತ್ತಿಗೆ ಕುಚಲಕ್ಕಿ ಪರಿಚಯಿಸಿದವರೆಂದು ತಿಳಿಸಿದ್ದಾರೆ.    ಅದಕ್ಕೆ ಪೂರಕವಾಗಿ ರಾಜ ಹೈವರಸ ಬತ್ತ ಒಣಗಿಸುವ ಕಣಗಳನ್ನು ನಿರ್ಮಿಸಿದ್ದನ್ನು ತೋರಿಸಿದ್ದಾರೆ, ಭಾರತದ ಕರಾವಳಿಯಲ್ಲಿ ಜನ ನಿತ್ಯ ಪ್ಯಾರಾ ಬಾಯಿಲ್ಡ್ ರೈಸ್ ಎಂಬ ಕುಚಲಕ್ಕಿ ಬಳಸುತ್ತಾರೆ.    ರೈಸ್ ಮಿಲ್ ಯುಗ ಪ್ರಾರಂಭಕ್ಕೆ ಮೊದಲು ದೊಡ್ಡ ದೊಡ್ಡ ತಾಮ್ರದ ಹಂಡೆಗಳಲ್ಲಿ ಬತ್ತ ನೆನೆಸಿ ಬೇಯಿಸಿ ನಂತರ ಕಣಗಳಲ್ಲಿ ಹದಕ್ಕೆ ತಕ್ಕವಾಗಿ ಬಿಸಿಲಲ್ಲಿ ಒಣಗಿಸಿ ಒರಳಿನಲ್ಲಿ ಒನಕೆಯಿಂದ ಕುಟ್ಟಿ ನಂತರ ಮರದಲ್ಲಿ ಅದನ್ನು ಕೇರಿ ಅಕ್ಕಿ ಹೊಟ್ಟು ಬೇರೆ ಮಾಡಿ ಸಾಣಿಗೆಯಲ್ಲಿ ಸಾಣಿಸಿ ತುಂಡಕ್...