Blog number 1995. ಶಿವಮೊಗ್ಗ ಲೋಕ ಸಭಾ ಚುನಾವಣೆ 2024 ರಾಜಧಾನಿಯ ಪತ್ರಕರ್ತರ ಪ್ರಶ್ನೆಗಳಿಗೆ ನನ್ನ ಗ್ರೌಂಡ್ ರಿಯಾಲಿಟಿ ಉತ್ತರ
#ಲೋಕಸಭಾ_ಚುನಾವಣೆ_ಬಂತು #ರಾಜದಾನಿಯ_ಕೆಲ_ಪತ್ರಕರ್ತರ_ಪ್ರಶ್ನೆಗಳಿಗೆ_ನನ್ನ_ವೈಯಕ್ತಿಕ_ಉತ್ತರ #ಶಿವಮೊಗ್ಗ_ಲೋಕಸಭಾ_ಅಭ್ಯರ್ಥಿಗಳು #ಗ್ರೌಂಡ್_ರಿಯಾಲಿಟಿಗಳ_ಮಾಹಿತಿ_ಕೇಳುತ್ತಾರೆ #ನನ್ನ_ಪ್ರಶ್ನೆ_ಅವರಿಗೆ_ರಾಜಕೀಯ_ಪಕ್ಷಗಳ_ಸರ್ವೆ_ಬಗ್ಗೆ. ನಮ್ಮ ರಾಜ್ಯದ ರಾಜದಾನಿಯ ಕೆಲ ಪತ್ರಕರ್ತರು ಚುನಾವಣೆ ಬಂದಾಗೆಲ್ಲ ನಮ್ಮ ಶಿವಮೊಗ್ಗ ಜಿಲ್ಲೆಯ ಮಾಹಿತಿ ಇತ್ಯಾದಿ ಗ್ರೌಂಡ್ ರಿಯಾಲಿಟಿಗೆ ಪ್ರಶ್ನೆ ಕೇಳುವುದು ಅದಕ್ಕೆ ನನ್ನದೇ ದೃಷ್ಟಿಕೋನದಲ್ಲಿ ಉತ್ತರಿಸುವುದು. ಅದರಂತೆ ನಿನ್ನೆಯ ಪ್ರಶ್ನೆಗಳು..... 1. ಹಾಲಿ ಸಂಸದ #ಬಿವ್ಯೆ_ರಾಘವೇಂದ್ರರ ಬಗ್ಗೆ ನನ್ನ ಉತ್ತರ ಹೆಸರು ಕೆಡಿಸಿ ಕೊಂಡಿಲ್ಲ, ರೈಲು - ರಾಷ್ಟ್ರೀಯ ಹೆದ್ದಾರಿ- ವಿಮಾನಗಳಿಂದ ಕೆಲಸಗಾರ ಎಂದಾಗಿದೆ, ಪಾರ್ಲಿಮೆಂಟ್ ಕ್ಷೇತ್ರದಲ್ಲಿ ಏಳು ವಿಧಾನ ಸಭಾ ಕ್ಷೇತ್ರದಲ್ಲಿ ನಾಲ್ಕರಲ್ಲಿ ಬಿಜೆಪಿ ಶಾಸಕರಿದ್ದಾರೆ, ಕಳೆದ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಲ್ಲಿ ಭರಪೂರ ಮತಗಳಿಸಿದ ದಾಖಲೆ ಇದೆ. ಈ ಭಾರಿ ಬಿಜೆಪಿ ಶಾಸಕರು ಪ್ರತಿನಿದಿಸುವ ಕ್ಷೇತ್ರದಲ್ಲಿ ಬಹುಮತ ಕಾಪಾಡಿಕೊಂಡು ಉಳಿದ ಕಾಂಗ್ರೇಸ್ ಪ್ರತಿನಿದಿಸುವ ಕ್ಷೇತ್ರದಲ್ಲಿ ಕೂಡ ಹೆಚ್ಚು ಮತ ಪಡೆದರೆ ಗೆಲುವು ಸಾಧ್ಯವಿದೆ. ಪ್ರತಿ ಸ್ಪರ್ದಿಯನ್ನು ತಪ್ಪಾಗಿ ಅಂದಾಜಿಸಿದರೆ, ಕಾರ್ಯಕರ್ತರು ಅತಿ ವಿಶ್ವಾಸದಿಂದ ಕೆಲಸ ಕಡಿಮೆ ಮಾಡಿದರೆ ಪಲಿಶಾಂಶದ ಮೇಲೆ ಪರಿಣಾಮ ಬೀರಬಹುದು. ...