Skip to main content

Posts

Showing posts with the label K.Moyiddin kaka he never skip kannada daily news paper

Blog number 1630. ಆನಂದಪುರಂ ಇತಿಹಾಸ ಸಂಖ್ಯೆ 102.ನಿತ್ಯ ಕನ್ನಡ ದಿನ ಪತ್ರಿಕೆ ಪ್ರೇಮಿ ಕೇರಳಿಗ ಕೆ. ಮೊಯಿದ್ದೀನ್ ಕಾಕ

ಕೇರಳಿಗ ಕೆ.ಮೊಹಿದೀನ್ ಕಾಕ ಕನ್ನಡದ ಎಲ್ಲಾ ಪತ್ರಿಕೆ ಪ್ರತಿ ನಿತ್ಯ ಓದಿಯೇ ಮುಂದಿನ ಕೆಲಸ ಮಾಡುವವರಾಗಿದ್ದರು.   ಆನಂದಪುರಂಗೆ ಮೊದಲು ಬಂದ ಮಲೆಯಾಳದ ವಲಸಿಗರಲ್ಲಿ ಮೊಹಿದೀನ್ ಕಾಕ ಕನ್ನಡ ಕಲಿತು ಎಲ್ಲಾ ಪತ್ರಿಕೆ ಓದಿ ಮುಂದಿನ ಕೆಲಸ ಪ್ರಾರಂಬಿಸುವ ನಿತ್ಯ ಕಾಯಕ ಹೊಂದಿದ್ದರು.     ಶುಂಠಿ ವ್ಯಾಪಾರಿ ರಾಮಟ್ಟ, ಪ೦ಚಾಯಿತಿ ಸದಸ್ಯರಾದ ಕರುಣಾಕರನ್, ಮಿಲ್ಟ್ರಿ ಹೋಟೆಲ್ ನಾಯರ್, ನಾಟಾ ಕೊಯ್ಯುವ ಲೋಹಿತಾಶ್ವಾ, ಲಾರಿ ಮಾಲಿಕರಾದ ಅಚ್ಚುತಾಚಾರ್, ಗಾರೆ ಕೆಲಸದ ಗೋಪಿ ಮೇಸ್ತ್ರಿ ಇವರೆಲ್ಲ ಅವರ ಬಾಷೆ, ಆಚರಣೆ ಮತ್ತು ಅವರ ಆಹಾರ ಪದ್ಧತಿಯಿಂದ ನಾವು ಚಿಕ್ಕವರಿದ್ದಾಗ ಬಿನ್ನರಾಗಿ ಕಾಣುತ್ತಿದ್ದರು, ಇವರೆಲ್ಲರ ಮಲೆಯಾಳಿ ಎಕ್ಸೆ೦ಟ್ ನ ಕನ್ನಡ ಬೇರೆ ಅಥ೯ ನೀಡಿ ನಗು ಸುರಿಸುತ್ತಿತ್ತು.   ಮೊಯಿದಿನ್ ಕಾಕ ಆನಂದಪುರಂ ಬಸ್ ಸ್ಟ್ಯಾ೦ಡ್ ಹತ್ತಿರ ಅನೇಕ ವಷ೯ ಎಳನೀರು ಅಂಗಡಿ ನಡೆಸಿದರು ಆಗ ಎದುರಿನ ಸಕಾ೯ರಿ ಕನಕಮ್ಮಳ ಆಸ್ಪತ್ರೆಯಲ್ಲಿ ಒಳ್ಳೆಯ ಸೇವಾ ಮನೋಭಾವದ ವೈದ್ಯರು ಇರುತ್ತಿದ್ದರು ಇಡೀ ಆಸ್ಪತ್ರೆ ರೋಗಿಗಳಿಂದ ತುಂಬಿರುತ್ತಿತ್ತು, ರೋಗಿಗಳನ್ನ ನೋಡಲು ಬರುವ ಅಂದು ಬಂದುಗಳು ಕೈಯಲ್ಲಿ ಎಳನೀರು ಒಯ್ಯುವ ಪದ್ದತಿ ಇತ್ತು ಹಾಗಾಗಿ ಕಾಕನ ಎಳನೀರು ವ್ಯಾಪಾರ ಜೋರಿತ್ತು.   ಮಕ್ಕಳನ್ನ ಕನ್ನಡ ಮಾಧ್ಯಮದಲ್ಲೇ ಓದಿಸಿದರು ಅವರೂ ಅತ್ಯುತ್ತಮವಾಗಿ ಓದಿದರು, ಮಗ ಮೊಹಮದ್ ನನ್ನ ಕ್ಲಾಸ್ ಮೇಟ್ ಅವರು ಸಾಗರದ ಪ್ರಖ್ಯ...