Blog number 882, 2014ರ ಲೋಕಸಭಾ ಚುನಾವಣೆಯಲ್ಲಿ ನಾನು ಮಾಜಿ ಶಾಸಕರಾದ ಗೋಪಾಲಕೃಷ್ಣ ಬೇಳೂರು ಜೊತೆಗೆ ಜೆಡಿಎಸ್ ಪಕ್ಷ ತೊರೆದು ಬಿಜೆಪಿ ಪಕ್ಷ ಸೇರಿ ಮೋದಿ ಪ್ರದಾನಿಯಾಗಬೇಕೆಂದು ಈ ಮೂಲಕ ಲಂಚಮುಕ್ತ ಭಾರತದ ಕನಸು ಕಂಡು 8 ವರ್ಷ ಆಯಿತು.
# ಎಂಟು_ವರ್ಷದ_ಹಿಂದಿನ_ನೆನಪಿನ_ರಾಜಕಾರಣದ_ಚಿತ್ರ. #ಮೋದಿ_ಸರ್ಕಾರಕ್ಕೆ_ಎಂಟು_ವರ್ಷ. ಆಗಷ್ಟೆ ವಿಧಾನ ಸಭಾ ಚುನಾವಣೆ ಮುಗಿದಿತ್ತು, ಆ ಚುನಾವಣೆಯಲ್ಲಿ ನಾನು ಸಾಗರ ವಿಧಾನ ಸಭಾ ಕ್ಷೇತ್ರದ ಜಾತ್ಯಾತೀತ ಜನತಾದಳದ ಅಧ್ಯಕ್ಷನಾಗಿದ್ದೆ. (ಎರಡನೆ ಬಾರಿಗೆ , ಅದೂ ವಿಧಾನ ಸಭಾ ಚುನಾವಣೆ ನಂತರ ವೈಯಕ್ತಿಕ ಕಾರಣದಿಂದ ರಾಜಕೀಯದಿಂದ ದೂರ ಇರುವ ಕರಾರಿನ ಮೇಲೆ) ಈ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಕಾಗೋಡು ತಿಮ್ಮಪ್ಪನವರು ಗೆದ್ದು ನಮ್ಮ ಅಭ್ಯಥಿ೯ ಬೇಳೂರು ಗೋಪಾಲಕೃಷ್ಣ ( ಎರೆಡು ಬಾರಿ ಬಿಜೆಪಿ ಶಾಸಕರಾಗಿದ್ದವರು) ವೈಯಕ್ತಿಕ ಸಾಮರ್ಥ್ಯದಿಂದ ಎರಡನೆ ಸ್ಥಾನದಲ್ಲಿ ಪರಾಜಿತರಾದರು, ನಂತರ ನಾನು ರಾಜಕೀಯ ಬಿಟ್ಟು ಬಿಟ್ಟಿದ್ದೆ. ಹೀಗಿದ್ದಾಗಲೇ 2014ರ ಲೋಕಸಭಾ ಚುನಾವಣೆ ಘೋಷಣೆ ಆಯಿತು, ಯಡೂರಪ್ಪನವರು ಬಿಜೆಪಿಯಿಂದ ಶಿವಮೊಗ್ಗ ಲೋಕಸಭಾ ಅಭ್ಯರ್ಥಿ ಆದರು, ಆಗ ಬೇಳೂರು ಗೋಪಾಲಕೃಷ್ಣ ಪುನಃ ಮಾತೃ ಪಕ್ಷದ ಸೇರ್ಪಡೆ ತೀರ್ಮಾನಗಳಾಯಿತು. ಈ ಸಂದರ್ಭದಲ್ಲಿ ತಾಲ್ಲೂಕ್ ಜೆಡಿಎಸ್ ಅಧ್ಯಕ್ಷನಾದ ನಾನು ಮತ್ತು ಸಾಗರ ಟವನ್ ಜೆಡಿಎಸ್ ಅಧ್ಯಕ್ಷರಾದ ಮಂಜುನಾಥರು ಗೋಪಾಲಕೃಷ್ಣರ ಗೆಳೆತನದ ಒತ್ತಾಯದಿಂದ ಬಿಜೆಪಿ ಸೇರಿದೆವು, ಆಗ ನಮ್ಮ ಮನಸ್ಸಿನಲ್ಲೂ ಮೋದಿ ಪ್ರದಾನಿ ಆದರೆ 24 ಗಂಟೆ ವಿದ್ಯುತ್, ನಿರುದ್ಯೋಗ ನಿವಾರಣೆ, ಒಂದು ರೂಪಾಯಿ ಲಂಚ ಇಲ್ಲದ ಸರ್ಕಾರಿ ಕಚೇರಿ, ಎಲ್ಲರಿಗೂ ಉಚಿತ ಚಿಕಿತ್ಸೆ, ಬಡವರ ಮಕ್ಕಳಿಗೆ ಉ...