Skip to main content

Posts

Showing posts with the label BESTHARA RANI CHAMPAKA REVIEWS-7

ಬೆಸ್ತರ ರಾಣಿ ಚಂಪಕಾ ವಿಮಷೆ೯-7

      ಅಶೋಕ ಹೆಗ್ಗಡೆ ಮಾವಿನಗುಂಡಿ ಜೋಗ ಜಲಪಾತದ ಸೆರಗಿನ ಮಾವಿನಗುಂಡಿಯಲ್ಲಿದ್ದಾರೆ, ಇವರು ಐನಕೈ ಅಂತ ತಾಜಾ ಹಣ್ಣಿನ ರಸ ಮತ್ತು ಜಾಮ್ ಒ0ದು ಕಾಲದಲ್ಲಿ ಅತ್ಯಂತ ಪ್ರಸಿದ್ಧ.     ಈಗಲು ಎಲ್ಲಾ ವಿಚಾರವನ್ನು ವಸ್ತು  ನಿಷ್ಟವಾಗಿ ವೈಜ್ಞಾನಿಕವಾದ ತಳಹದಿಯಲ್ಲೇ ವ್ಯಾಖ್ಯಾನಿಸುವ ಇವರ ಸಂಪಕ೯ ಅಗಾದ .    ನನ್ನ ಕಾದಂಬರಿ ಬಗ್ಗೆ ಓದಿ ಇಲ್ಲಿ ಅವರು ವಿಮಷೆ೯ ಮಾಡಿದ್ದಾರೆ. ನಮ್ಮಲ್ಲಿಂದ ಸುಮಾರು 60 ಕಿ. ಮೀ ದೂರದ ಆನಂದಪುರ ಪಟ್ಟಣದ ನಿವಾಸಿ ಬರಹಗಾರ ಸಾಮಾಜಿಕ ಕಾಳಜಿ, ಕ್ರಿಯಾಶೀಲ ವ್ಯಕ್ತಿತ್ವದ ಶ್ರೀ ಅರುಣ ಪ್ರಸಾದ ರ ಪರಿಚಯ ಆತ್ಮೀಯತೆಯಾಗಿ ಬೆಳೆದಿದೆ. ಅಂತೆಯೇ ಅವರು ತೀವ್ರವಾಗಿ ತೊಡಗಿಸಿ ಕೊಂಡು ಬರೆದ ಪುಸ್ತಕ 'ಬೆಸ್ತರರಾಣಿ ಚಂಪಕಾ' ದರ ಕುರಿತು ಅನಿಸಿಕೆ ಹಂಚಿಕೊಳ್ಳುವುದು ನನ್ನ ಆದ್ಯ ಕರ್ತವ್ಯ. ಶ್ರೀ ಅರುಣ್ ಪ್ರಸಾದ್ ರ ಜನ್ಮ, ಕರ್ಮಸ್ಥಾನವಾದ ಆನಂದಪುರದ ಸ್ಥಳ ಇತಿಹಾಸದ ಮಹತ್ವದ ಆಧ್ಯಾಯ ರಾಜಾ ವೆಂಕಟಪ್ಪ ನಾಯಕರ ಆಳ್ವಿಕೆ, ರಾಜಕುಟುಂಬದ ಚರಿತ್ರೆ. ಇತಿಹಾಸವನ್ನು ಆಧರಿಸಿ ಬರೆದ 'ಕಾಲ್ಪನಿಕ ಕಾದಂಬರಿ' ಎಂದು ಹೇಳಿಕೊಂಡಿರುವದು ಬರೆದ ವಿಶಯಗಳು ಐತಿಹಾಸಿಕ ಸತ್ಯಗಳಲ್ಲ ಎಂಬ ಆಕ್ಷೇಪ, ವಿವಾದಗಳಿಂದ ದೂರವಿರುವದಕ್ಕಾಗಿ ಮಾತ್ರ. ಸಾಧ್ಯವಾದಷ್ಟು ವಸ್ತು, ವಿಶಯನಿಷ್ಠ ಬರವಣಿಗೆ. ಅತ್ಯಂತ ಸುಲಲಿತವಾಗಿ ಓದಿಸಿಕೊಂಡು ಹೋಗುವ ಶೈಲಿ, ಗತಕಾಲದ ಬಳಕೆಯ ಶಬ್ದ...