ಅಶೋಕ ಹೆಗ್ಗಡೆ ಮಾವಿನಗುಂಡಿ ಜೋಗ ಜಲಪಾತದ ಸೆರಗಿನ ಮಾವಿನಗುಂಡಿಯಲ್ಲಿದ್ದಾರೆ, ಇವರು ಐನಕೈ ಅಂತ ತಾಜಾ ಹಣ್ಣಿನ ರಸ ಮತ್ತು ಜಾಮ್ ಒ0ದು ಕಾಲದಲ್ಲಿ ಅತ್ಯಂತ ಪ್ರಸಿದ್ಧ.
ಈಗಲು ಎಲ್ಲಾ ವಿಚಾರವನ್ನು ವಸ್ತು
ನಿಷ್ಟವಾಗಿ ವೈಜ್ಞಾನಿಕವಾದ ತಳಹದಿಯಲ್ಲೇ ವ್ಯಾಖ್ಯಾನಿಸುವ ಇವರ ಸಂಪಕ೯ ಅಗಾದ .
ನಮ್ಮಲ್ಲಿಂದ ಸುಮಾರು 60 ಕಿ. ಮೀ ದೂರದ ಆನಂದಪುರ ಪಟ್ಟಣದ ನಿವಾಸಿ ಬರಹಗಾರ ಸಾಮಾಜಿಕ ಕಾಳಜಿ, ಕ್ರಿಯಾಶೀಲ ವ್ಯಕ್ತಿತ್ವದ ಶ್ರೀ ಅರುಣ ಪ್ರಸಾದ ರ ಪರಿಚಯ ಆತ್ಮೀಯತೆಯಾಗಿ ಬೆಳೆದಿದೆ.
ಅಂತೆಯೇ ಅವರು ತೀವ್ರವಾಗಿ ತೊಡಗಿಸಿ ಕೊಂಡು ಬರೆದ ಪುಸ್ತಕ 'ಬೆಸ್ತರರಾಣಿ ಚಂಪಕಾ' ದರ ಕುರಿತು ಅನಿಸಿಕೆ ಹಂಚಿಕೊಳ್ಳುವುದು ನನ್ನ ಆದ್ಯ ಕರ್ತವ್ಯ.
ಶ್ರೀ ಅರುಣ್ ಪ್ರಸಾದ್ ರ ಜನ್ಮ, ಕರ್ಮಸ್ಥಾನವಾದ ಆನಂದಪುರದ ಸ್ಥಳ ಇತಿಹಾಸದ ಮಹತ್ವದ ಆಧ್ಯಾಯ ರಾಜಾ ವೆಂಕಟಪ್ಪ ನಾಯಕರ ಆಳ್ವಿಕೆ, ರಾಜಕುಟುಂಬದ ಚರಿತ್ರೆ. ಇತಿಹಾಸವನ್ನು ಆಧರಿಸಿ ಬರೆದ 'ಕಾಲ್ಪನಿಕ ಕಾದಂಬರಿ' ಎಂದು ಹೇಳಿಕೊಂಡಿರುವದು ಬರೆದ ವಿಶಯಗಳು ಐತಿಹಾಸಿಕ ಸತ್ಯಗಳಲ್ಲ ಎಂಬ ಆಕ್ಷೇಪ, ವಿವಾದಗಳಿಂದ ದೂರವಿರುವದಕ್ಕಾಗಿ ಮಾತ್ರ. ಸಾಧ್ಯವಾದಷ್ಟು ವಸ್ತು, ವಿಶಯನಿಷ್ಠ ಬರವಣಿಗೆ.
ಅತ್ಯಂತ ಸುಲಲಿತವಾಗಿ ಓದಿಸಿಕೊಂಡು ಹೋಗುವ ಶೈಲಿ, ಗತಕಾಲದ ಬಳಕೆಯ ಶಬ್ದಗಳು, ದುರಂತ ಪ್ರೇಮಕಥೆಯ ಸಾರ್ವತ್ರಿಕ ಅಪೀಲ್ ಗಳಿಂದ ಈ ಪುಸ್ತಕ ಓದುಗರ ಮೆಚ್ಚುಗೆ ಗಳಿಸುವುದರಲ್ಲಿ ಸಂದೇಹವಿಲ್ಲ.
ನನಗೆ ವಿಶೇಶ ಗಮನ ಸೆಳೆದಿದ್ದು ತೊಂಭತ್ತು ಪುಟಗಳ ಬರಹವನ್ನು ಐವತ್ತೆಂಟು ಆಧ್ಯಾಯಗಳನ್ನಾಗಿಸಿದ್ದು. ಇದು ಓದುಗರಿಗೆ ಒಳ್ಳೆಯ ಹಲಸಿನ ಹಣ್ಣು ತೊಳೆ ಬಿಡಿಸಿ ಎದುರಿಗಿಟ್ಟಂತೆ ಸ್ವಾದಿಷ್ಠತೆ ಹೆಚ್ಚಿಸಿದೆ.
ವಿಶ್ವಮಾನವ ರಾಗುವಷ್ಟೇ ಸಾರ್ಥಕತೆ ನಮ್ಮೂರಮಾನವ ರಾಗುವದರಲ್ಲೂ ಇದೆ ಎಂಬುದು ಶ್ರೀ ಅರುಣ ಪ್ರಸಾದರ ರ ಈ ಹ್ಱತ್ಪೂರ್ವಕ ಪ್ರಯತ್ನ ತೋರಿಸುತ್ತದೆ.
ಧನ್ಯವಾದಗಳು Arun Prasad.
Comments
Post a Comment