ಆನಂದಪುರದ ಚಂಪಕು ಸರಸ್ಸುವಿನ ಬಗ್ಗೆ ಇತಿಹಾಸ ತಜ್ಞ ಕೆಳದಿ ಗುಂಡಾಜೋಯಿಸರು ಅತ್ಯಂತ ಕಾಳಜಿ ಹೊಂದಿದ್ದಾರೆ ಈ ಬಗ್ಗೆ ಅವರು ನನಗೆ ಬರೆದ ಅಂಚೆ ಕಾಡ್೯ಗಳು ನನ್ನಲಿದೆ.
2007 ರಲ್ಲಿ ಕೆಳದಿ ಇತಿಹಾಸ ತಜ್ಞರು ಆದ ಹಿರಿಯರು ಆದ ಗುಂಡಾ ಜೋಯಿಸರು ಬರೆದ ಅಂಚೆ ಕಾಡ೯ ನನ್ನ ದಾಖಲೆಗಳಲ್ಲಿ ಸಂರಕ್ಷಿಸಿದ್ದೇನೆ, 1995 ರಲ್ಲಿ ಬರೆದ ಕಾಡ೯ ಕೂಡ ಇದೆ.
ಅವರು ಕೆಳದಿ ಅರಸರ ಹೆಸರನ್ನ ಚಿರಸ್ಥಾಯಿ ಮಾಡುವಂತ ಕೆಲಸಕ್ಕೆ ಪ್ರೇರೇಪಿಸಿದ್ದರು.
ಆನಂದಪುರಂ ನ ಚಂಪಕ ಸರಸ್ಸು ವಿನ ಚಿತ್ರದ ಪಲಕಗಳನ್ನ ಹಾಕಿ ಆನಂದಪುರಕ್ಕೆ ಪ್ರವಾಸ ಬರುವವರಿಗೆ ಮಾಗ೯ದಶ೯ನ ಮಾಡುವಂತೆ ಈ ಅಂಚೆ ಕಾಡಿ೯ನಲ್ಲಿ ಬರೆದಿದ್ದಾರೆ.
ಅವರ ನಿರೀಕ್ಷೆ ಪೂಣ೯ ಈಡೇರಿಸಲು ಆನಂದಪುರದ ವಾಸಿಗಳಾದ ನಮಗೆ ಇನ್ನೂ ಸಾಧ್ಯವಾಗಿಲ್ಲ ಎಂಬ ಕೊರಗು ಇದೆ ಆದರೂ ಆನಂದಪುರದ ಕನ್ನಡ ಸಂಘ, ಈಜು ಮಿತ್ರ ಬಳಗ, ಇತಿಹಾಸ ಪರಂಪರೆ ಉಳಿಸಿ ಅಭಿಯಾನ ಸಮಿತಿ ಮತ್ತು ಮುರುಘರಾಜೇಂದ್ರ ಸ್ವಾಮಿಗಳು ಇದಕ್ಕೆ ಪೂರಕವಾಗಿ ಅನೇಕ ಕಾಯ೯ಕ್ರಮ ವಷ೯ಪೂತಿ೯ ಮಾಡುತ್ತಿರುವುದು ಅಭಿನಂದನೀಯ.
Comments
Post a Comment