#ಕೃಷ್ಣಮೂತಿ೯_ಎನ್
ಕನ್ನಡ ಉಪನ್ಯಾಸಕರು, ಶಿವಮೊಗ್ಗದ ಪ್ರತಿಷ್ಠಿತ ಡಿ.ವಿ.ಎಸ್ ಪದವಿ ಪೂವ೯ ಕಾಲೇಜಿನಲ್ಲಿ, ಇವರು ಆನಂದಪುರದವರು ಅವರ ಬಾಲ್ಯದಲ್ಲಿ ಚಂಪಕ ಸರಸ್ಸು ನಲ್ಲಿ ಆಡಿ ಬೆಳೆದವರು ಆನಂದಪುರದವರದ್ದೆ ವಿಮಶೆ೯ನನ್ನ ಕಾದ೦ಬರಿ #ಬೆಸ್ತರರಾಣಿ_ಚಂಪಕಾ ಓದಿ ಬರೆದಿದ್ದಾರೆ.
ಶ್ರೀ ಅರುಣ್ ಪ್ರಸಾದ್ ರವರೆ, ಕಾದಂಬರಿ ಬರೆಯುವುದು,ತಿದ್ದುವುದು, ಪ್ರಕಾಶರನ್ನು ಹುಡುಕುವುದು. ಮುದ್ರಣಕ್ಕೆ ಹಣಜೋಡಿಸುವುದು ಅಥವಾ ಇದ್ದ ಹಣ ವೆಚ್ಚಮಾಡುವುದು. ಎಲ್ಲವೂ ಪ್ರಯಾಸದ ಕೆಲಸವೇ. ಆದರೆ ತಮ್ಮ ಆಸಕ್ತಿ ಮೆಚ್ಚುವಂತದ್ದು, ಏಕೆಂದರೆ ರಾಣಿ ಚಂಪಕಾಳ ಬಗ್ಗೆ, ಕೆಳದಿ ಸಂಸ್ಥಾನದ ದೊರೆ ವೆಂಕಟಪ್ಪನಾಯಕನ ಬಗ್ಗೆ ತಾವು ಕಲೆ ಹಾಕಿರುವ ಮಾಹಿತಿ ಸುಲಭ ಸಾಧ್ಯ ವಾದುದಲ್ಲ. ತಾವೇ ಹೇಳಿಕೊಂಡಿರುವಂತೆ,#ಕಾದಂಬರಿ_ಕಾಲ್ಪನಿಕವಾದರೂ, ನಮ್ಮ ಊರಿನ ಬಗ್ಗೆ ಕತೆಯ ವಸ್ತು(ರಾಣಿಚಂಪಕಾ) ಕೇಂದ್ರೀಕೃತ ವಾಗಿರುವುದರಿಂದ ಓದುವಾಗ ಆನಂದಪುರ(ಆನಂದಪುರಂ), ಯಡೇಹಳ್ಳಿ ಹಾಗೂ ಸುತ್ತ ಮುತ್ತಲ ಊರು,ಗ್ರಾಮಗಳ ಹೆಸರು ಓದಿದಾಗ ಮನಸ್ಸಿಗೆ ಅಪ್ಯಾಯಮಾನವಾದ ಖುಷಿ ಯಾಗುತ್ತದೆ ಹಾಗೆಯೇ ಗುಂಡಿಬಯಲು ಜಮೀನಿನ(ರಾಜ್ಯದ ಭತ್ತದ ಕಣಜ) ಪ್ರಾಮುಖ್ಯತೆ, ಅದರ ನೀರಿನ ಮೂಲಗಳ ಪ್ರಸ್ತಾಪ ಔಚಿತ್ಯ ಪೂರ್ಣವೆನಿಸುತ್ತದೆ.ಹಾಗೂ ಹೆಮ್ಮೆ,ಅಭಿಮಾನವೆನ್ನಿಸುತ್ತದೆ. ಆನಂದಪುರದಲ್ಲಿ ವಾಸವಿರುವ ಗಂಗಾಮತಸ್ಥರ(ಬೋವಿಗಳು) ಬಗ್ಗೆ, ಅವರ ಕಸುಬು,ಉಪಕಸುಬುಗಳ ಬಗ್ಗೆ ಬೆಳಕು ಚೆಲ್ಲಿರುವುದೂ ಕೂಡ ಗಮನಾರ್ಹ ವಿಷಯವಾಗಿದೆ.ರಾಣಿ ಚಂಪಕಾ ಗಂಗಮತಸ್ಥ ಜನಾಂಗಕ್ಕೆ ಸೇರಿದವಳೆಂಬುದು ಆ ಜನಾಂಗದ ಪ್ರತಿಷ್ಠೆಯ ವಿಷಯ ಕೂಡವಾಗಿದೆ. ರಂಗೋಲಿಯ ಕಲಾತ್ಮಕತೆ ಬಗ್ಗೆ ಹೊಸದೊಂದು ಕಲ್ಪನೆಯನ್ನು ಕಟ್ಟಿಕೊಟ್ಟದ್ದೀರಿ.ವೆಂಕಟಪ್ಪ ನಾಯಕ ತನ್ನ ರಾಜ್ಯವನ್ನು ಎಷ್ಟುವಿಸ್ತಾರ(ಘಟ್ಟದ ಮೇಲೆ ಘಟ್ಟದ ಕೆಳಗೆ) ಗೊಳಿಸಿದ್ದನೆಂಬುದರಿಂದ ಅವನ ಸಾಮರ್ಥ್ಯದ ಅರಿವಾಗುತ್ತದೆ. ಒಟ್ಟಾರೆ ತಮ್ಮ ಪ್ರಥಮ ಪ್ರಯತ್ನ ಯಶಸ್ಸನ್ನು ಕಂಡಿದೆ ಎಂಬುದು ನನ್ನ ಭಾವನೆ. ನಮ್ಮೂರಿಗೆ, ನಮ್ಮೂರಿನವರಿಗೆ ಆನಂದಪುರ,ಯಡೇಹಳ್ಳಿಗಳು ಐತಿಹಾಸಿಕ ಪ್ರದೇಶ ಗಳೆಂಬುದನ್ನು ಪುನರ್ ಮನನ ಮಾಡಿದ್ದಕ್ಕಾಗಿ ಅನಂತ ವಂದನೆಗಳು.
💐 ನಿಮ್ಮವ,
ಎನ್.ಕೃಷ್ಣ ಮೂರ್ತಿ ಕನ್ನಡ ಉಪನ್ಯಾಸ ಕ,ಡಿವಿಎಸ್ ಪದವಿಪೂರ್ವ (ಸ್ವತಂತ್ರ)ಕಾಲೇಜು, ಶಿವಮೊಗ್ಗ.*
Comments
Post a Comment