Skip to main content

Posts

Showing posts with the label Panche or Dhothi traditional dress code of Hindu

Blog number 1944. ನಾನು ಪಂಚೆದಾರಿಯಾಗಿ 11 ವರ್ಷವಾಯಿತು, ಹಿಂದೂ ಜೈನ ಮತ್ತು ಮುಸ್ಲಿಂರಲ್ಲಿ ಹೊಲಿಗೆ ರಹಿತ ಉಡುಪಾದ ಪಂಚೆ ದಾರ್ಮಿಕ ಯಾತ್ರೆಯಲ್ಲಿ ಕಡ್ಡಾಯ ಬಳಕೆಯಲ್ಲಿದೆ.

#ಶಿವಮೊಗ್ಗದ_ಹಿರಿಯ_ಸಮಾಜವಾದಿ_ಪಿ_ಪುಟ್ಟಯ್ಯನವರ_ಉಡುಗೊರೆ_ಪಂಚೆಗಳು #ನಾನು_ಪ್ಯಾಂಟಿನಿಂದ_ಪಂಚೆಗೆ_ಬದಲಾಗಿ_ಹತ್ತು_ವರ್ಷ_ಆಯಿತು #ವಿಚಾರವಾದಿ_ಹೆಚ್_ಎನ್_ನರಸಿಂಹಯ್ಯ_ಮಾಜಿ_ಪ್ರಧಾನಿ_ದೇವೇಗೌಡರು #ಮುಖ್ಯಮಂತ್ರಿ_ಸಿದ್ಧರಾಮಯ್ಯ_ಪಂಚೆ_ಪ್ರಿಯರು #ಪಂಚೆ_ಧರಿಸಿ_ಬಂದರೆ_ಪ್ರವೇಶ_ನಿರಾಕರಿಸುವ_ಕ್ಲಬ್_ಗಳಿದೆ #ನಾನ್ಯಾಕೆ_ಪಂಚೆಗೆ_ಬದಲಾದೆ_ಗೊತ್ತಾ...    ನನ್ನ ಮಗ ಈ ವರ್ಷದ ಆಲೇ ಮನೆ ಬೆಲ್ಲ ಶಿವಮೊಗ್ಗದ ಹಿರಿಯ ಸಮಾಜವಾದಿ,ಮಾಜಿ ರಾಜ್ಯಾದ್ಯಕ್ಷರು ಲೋಕದಳ (ಚೌದುರಿ ಚರಣ್ ಸಿಂಗ್ ಪಾರ್ಟಿ) ಪಿ.ಪುಟ್ಟಯ್ಯ ಇವರಿಗೆ ತಲುಪಿಸಲು ಹೋಗಿದ್ದ ಅವರು ಅವರ ಅನೇಕ ಗೆಳೆಯರಿಗೆ ಪ್ರತಿ ವರ್ಷ ಮಲೆನಾಡಿನ ಆಲೇಮನೆ ಬೆಲ್ಲ ನೀಡುತ್ತಾರೆ.     ಮಲ್ನಾಡಳ್ಳಿಯ ಮರಿ ಸ್ವಾಮಿಗಳಾಗುವವರೆಂದೇ ಭಾವಿಸಲಾಗಿದ್ದ ಪುಟ್ಟಯ್ಯನವರು ಅದನ್ನು ನಿರಾಕರಿಸಿ ಬಂದವರು ಅವರು ನನ್ನ ಮಗನ ಹತ್ತಿರ ಬೆಲೆ ಬಾಳುವ ಮೂರು ಬಿಳಿ ಪಂಚೆಗಳನ್ನು ಉಡುಗೊರೆ ಆಗಿ ಕಳಿಸಿದ್ದಾರೆ ಆಗಾಗ್ಗೆ ಪುಟ್ಟಯ್ಯನವರು ನೀಡುವ ಪಂಚೆಗಳು ನನಗೆ ಪಂಚ ಪ್ರಾಣ ಅಂತವರು ನೀಡುವ ವಸ್ತ್ರದಾನ ಶೇಷ್ಟವೂ ಹೌದು.        2013ರ ತನಕ ಪ್ಯಾಂಟ್ ಶರ್ಟ್, ಖಾದಿ ಜುಬ್ಬಾ ಪೈಜಾಮದಾರಿ ಆಗಿದ್ದೆ, 1980ರ ತನಕ SSLC ವರೆಗೆ ಚಡ್ಡಿ ಅಂಗಿದಾರಿ ಆಗಿದ್ದು ಮೊದಲ ವರ್ಷದ ಡಿಪ್ಲೋಮ ತರಗತಿಗೆ ಸೇರುವಾಗ ಆನಂದಪುರಂನ ಸರ್ಕಾರಿ ಆಸ್ಪತ್ರೆ ಎದುರಿನ ಖ...