MALLIK VEG ANANDAPURAM (Inbetween Shimoga and Jogfalls NH 206), ಮಲ್ಲಿಕಾ ವೆಜ್ ಆನಂದಪುರಂ (ಶಿವಮೊಗ್ಗ ಮತ್ತು ಜೋಗ್ ಫಾಲ್ಸ್ ಮಧ್ಯ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ) ಪಶ್ಚಿಮ ಘಟ್ಟದ ವಿಶೇಷ ತಿನಿಸು ಹಲಸಿನ ಎಲೆ ಕೊಟ್ಟೆಕಡಬು,
#ಆನಂದಪುರಂನಲ್ಲಿ_ಮಲ್ಲಿಕಾ_ವೆಜ್_ರೆಸ್ಟೋರಾಂಟ್ #ನನಗೆ_ಹೋಟೆಲ್_ಉದ್ಯಮ_ಬೋದಿಸಿದವರು_ಛಾಯ_ಹೋಟೆಲ್_ಬೀಮಣ್ಣ. #ಹೊಸರುಚಿ #ಹಲಸಿನ_ಎಲೆ_ಕಡಬು #ಅಕ್ಕಿ_ರೊಟ್ಟಿ #ರಾಗಿ_ರೊಟ್ಟಿ_ಇಲ್ಲಿ_ನಿತ್ಯ_ಲಭ್ಯವಿದೆ. ಶಿವಮೊಗ್ಗ ಮತ್ತು ಸಾಗರ ಮಧ್ಯದ ಆನಂದಪುರಂ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಯಡೇಹಳ್ಳಿ ವೃತ್ತದಲ್ಲಿ ದಿನಾಂಕ 28- ಸೆಪ್ಟೆಂಬರ್ -2012ರಲ್ಲಿ ನಾವು ಪ್ರಾರಂಭಿಸಿದ #ಮಲ್ಲಿಕಾ_ವೆಜ್ ಯಾವುದೇ ಪೂವ೯ಯೋಚಿತ ಪ್ರಾಜೆಕ್ಟ್ ಆಗಿರಲಿಲ್ಲ, ಅನಿರಿಕ್ಷಿತ ಮತ್ತು ಅನಿವಾಯ೯ದಿಂದ ಪ್ರಾರಂಬಿಸಿದ್ದು. ತಂದೆ ತಾಯಿ ಹೆಸರಲ್ಲಿ #ಕೃಷ್ಣ_ಸರಸ_ಕಲ್ಯಾಣ_ಮಂಟಪ (ಬಾಲ್ಯದ ಕನಸು) ನಿರ್ಮಿಸಿದ ಮೇಲೆ ಅದನ್ನು ನಿರ್ವಹಣೆ ಮಾಡಲು ನಿತ್ಯ ಕೆಲಸಗಾರರು ಬೇಕಾಯಿತು ಅದಕ್ಕಾಗಿ ಹತ್ತು ರೂಮಿನ ಲಾಡ್ಜ್ #ಹೊ೦ಬುಜ_ರೆಸಿಡೆನ್ಸಿ ಪ್ರಾರಂಬಿಸಿದೆ, ಲಾಡ್ಜನಲ್ಲಿ ತಂಗುವವರಿಗಾಗಿ ಊಟ ಉಪಹಾರಕ್ಕೆ ರೆಸ್ಟೋರೆಂಟ್ ಅನಿವಾಯ೯ ಆಯಿತು. ಅನೇಕರಿಗೆ ಆಹ್ವಾನಿಸಿದೆ ಆದರೆ ಅವರೆಲ್ಲರ ಅಭಿಪ್ರಾಯ ಯಡೇಹಳ್ಳಿ ಸರ್ಕಲ್ ನಲ್ಲಿ ಹೋಟೆಲ್ ನಡೆಯೊಲ್ಲ ಇತ್ಯಾದಿ. ಕುಂದಾಪುರದ ಗೆಳೆಯರೊಬ್ಬರ ಪರಿಚಯದಲ್ಲಿ ಹೈದ್ರಾಬಾದಿನಲ್ಲಿ ಹೋಟೆಲ್ ನಡೆಸುವವರೊಬ್ಬರು ಬಂದು ನೋಡಿ ಹೋಟೆಲ್ ಪ್ರಾರಂಬಿಸುವ ತೀರ್ಮಾನ ಮಾಡಿದರು ಅವರ ಕಂಡಿಷನ್ ರೆಸ್ಟೋರಂಟ್ ಪೀಠೋಪಕರಣ, ಕಿಚನ್ ಪೂರ್ಣ ಸೆಟ್ ಮಾಡಿ ಕೊಡಿ ದಿನಕ್ಕೆ ಇಷ್ಟು ಬಾಡಿಗೆ ಅಂತ. ಎಲ್ಲಾ ತಯಾರು ಮಾಡಿಸಿದ...