ವಂದೇ_ಮಾತರಂ_ಮತ್ತು_ಸಭಾತ್ಯಾಗದ_ರಾಜಕೀಯ. #ಯಾವುದು_ಸರಿ_ಯಾವುದು_ತಪ್ಪು?...
ಯಾರಾದರೂ ಭಕ್ತಿಪೂರ್ವಕವಾಗಿ ಪೂರ್ಣ ಗೀತೆಯನ್ನು ಹಾಡಿದರೆ ಅದು ಸಂವಿಧಾನದಲ್ಲಾಗಲಿ ಅಥವಾ ಭಾರತದ ಯಾವುದೇ ಕಾನೂನಿನಲ್ಲಾಗಲಿ ಯಾವುದೇ ರೀತಿಯಲ್ಲೂ ಅಪರಾಧವಲ್ಲ ಅಥವಾ ತಪ್ಪಲ್ಲ.
ಶಿಷ್ಟಾಚಾರವನ್ನು ಪಾಲಿಸಿ ಕೇವಲ ಎರಡು ಚರಣ ಹಾಡಿದಾಗ "ಪೂರ್ಣ ಹಾಡಿಲ್ಲ, ಆದ್ದರಿಂದ ಇದು ದೇಶದ್ರೋಹ ಅಥವಾ ಅಪಮಾನ" ಎಂದು ಬಿಂಬಿಸಿ ಸಭಾತ್ಯಾಗ ಮಾಡುವುದು ಕೂಡ ಸಮಂಜಸವಲ್ಲ.
ಕೆಲವು ಸಾರ್ವಜನಿಕ ವೇದಿಕೆಗಳಲ್ಲಿ ಅಥವಾ ಸದನಗಳಲ್ಲಿ ಇತ್ತೀಚಿನ ದಿನಗಳಲ್ಲಿ ಒಂದು ವಿಚಿತ್ರ ದೃಶ್ಯ ಕಂಡುಬರುತ್ತಿದೆ.
ಪೂರ್ಣ ವಂದೇ ಮಾತರಂ ಹಾಡಿಲ್ಲವೆಂದು ಒಂದು ಪಕ್ಷದವರು ಆಕ್ಷೇಪ ವ್ಯಕ್ತಪಡಿಸಿದರೆ, ಪೂರ್ಣವಾಗಿ ಹಾಡಿದ್ದಕ್ಕೆ ಮತ್ತೊಂದು ಪಕ್ಷದವರು ವಿರೋಧಿಸಿ ಸಭಾತ್ಯಾಗ ಮಾಡುತ್ತಾರೆ.
ದೇಶಭಕ್ತಿಯ ಸಂಕೇತವಾಗಿರುವ ಒಂದು ಪವಿತ್ರ ಗೀತೆಯ ಸುತ್ತ ಇಷ್ಟೊಂದು ಗೊಂದಲ ಮತ್ತು ರಾಜಕೀಯ ಅಗತ್ಯವಿದೆಯೇ?....
ಈ ವಿಷಯದಲ್ಲಿ ಇತಿಹಾಸ ಮತ್ತು ಸಂವಿಧಾನ ಏನು ಹೇಳುತ್ತದೆ ನೋಡಿ.
#ಇತಿಹಾಸದ_ವಾಸ್ತವ.
ಬಂಕಿಮಚಂದ್ರ ಚಟರ್ಜಿ ಅವರು '#ಆನಂದಮಠ' ಕಾದಂಬರಿಯಲ್ಲಿ ಬರೆದ 'ವಂದೇ ಮಾತರಂ' ಭಾರತದ ಸ್ವಾತಂತ್ರ್ಯ ಸಂಗ್ರಾಮದ ಮಂತ್ರವಾಗಿತ್ತು.
ಗೀತೆಯ ಮೊದಲ ಎರಡು ಚರಣಗಳು ಸಂಪೂರ್ಣವಾಗಿ ಭಾರತ ಭೂಮಿಯ ನೈಸರ್ಗಿಕ ಸೌಂದರ್ಯ ಸುಜಲಾಂ, ಸುಫಲಾಂ, ಮಲಯಜ ಶೀತಲಾಂ... ಮತ್ತು ಮಾತೃಭೂಮಿಯ ಕೃತಜ್ಞತೆಯನ್ನು ಸಾರುತ್ತವೆ, ನಂತರದ ಚರಣಗಳಲ್ಲಿ ಹಿಂದೂ ದೇವತೆಗಳಾದ ದುರ್ಗೆ, ಲಕ್ಷ್ಮಿಯ ರೂಪಕಗಳು ಬರುತ್ತವೆ ಇದರಿಂದ ಭಾರತದ ಬಹುಧರ್ಮೀಯ ಸ್ವರೂಪ ಮತ್ತು ಎಲ್ಲರ ಭಾವನೆಗಳನ್ನು ಒಗ್ಗೂಡಿಸುವ ದೃಷ್ಟಿಯಿಂದ, ರವೀಂದ್ರನಾಥ ಟ್ಯಾಗೋರ್ ಅವರ ಸಲಹೆಯಂತೆ ಮೊದಲ ಎರಡು ನುಡಿಗಳನ್ನು ಮಾತ್ರ ಅಧಿಕೃತವಾಗಿ ಸಾರ್ವಜನಿಕ ವೇದಿಕೆಗಳಲ್ಲಿ ಹಾಡಲು 1937ರ ಕಾಂಗ್ರೆಸ್ ಅಧಿವೇಶನದಲ್ಲಿ ನಿರ್ಧರಿಸಲಾಯಿತು.
1950ರ ಸಂವಿಧಾನ ಸಭೆಯ ಅಧ್ಯಕ್ಷರಾಗಿದ್ದ ಡಾ. ರಾಜೇಂದ್ರ ಪ್ರಸಾದ್ ಅವರು ವಂದೇ ಮಾತರಂ ಅನ್ನು 'ರಾಷ್ಟ್ರೀಯ ಗೀತೆ' (National Song) ಎಂದು ಘೋಷಿಸುವಾಗಲೂ ಈ ರೂಢಿಯನ್ನೇ ಮುಂದುವರಿಸಲಾಯಿತು.
#ಪೂರ್ಣ_ಹಾಡುವುದು_ತಪ್ಪೇ?.
ಸಂವಿಧಾನದಲ್ಲಾಗಲಿ ಅಥವಾ ಭಾರತದ ಯಾವುದೇ ಕಾನೂನಿನಲ್ಲಾಗಲಿ ಪೂರ್ಣ ಗೀತೆಯನ್ನು ಹಾಡುವುದಕ್ಕೆ ಯಾವುದೇ ನಿಷೇಧವಿಲ್ಲ.
ಯಾರಾದರೂ ಭಕ್ತಿಪೂರ್ವಕವಾಗಿ ಪೂರ್ಣ ಗೀತೆಯನ್ನು ಹಾಡಿದರೆ ಅದು ಯಾವುದೇ ರೀತಿಯಲ್ಲೂ ಅಪರಾಧವಲ್ಲ ಅಥವಾ ತಪ್ಪಲ್ಲ.
ಕೇವಲ ಧಾರ್ಮಿಕ ರೂಪಕಗಳಿವೆ ಎಂಬ ಕಾರಣಕ್ಕೆ ಇಡೀ ಸಭೆಯಿಂದ ಹೊರನಡೆಯುವುದು ಅಥವಾ ಅಸಹಿಷ್ಣುತೆ ತೋರುವುದು ಸರಿ ಅಲ್ಲ.
#ಪೂರ್ಣ_ಹಾಡಲೇಬೇಕು_ಎಂದು_ಪಟ್ಟು
#ಹಿಡಿಯುವುದು_ಸರಿಯೇ?...
ಸರ್ಕಾರಿ ಕಾರ್ಯಕ್ರಮಗಳು ಮತ್ತು ಸಾಂವಿಧಾನಿಕ ವೇದಿಕೆಗಳಲ್ಲಿ ಮೊದಲ ಎರಡು ಚರಣಗಳನ್ನು ಹಾಡುವುದೇ ದಶಕಗಳಿಂದ ನಡೆದುಬಂದ ಅಧಿಕೃತ ಶಿಷ್ಟಾಚಾರ (Protocol).
ಈ ಶಿಷ್ಟಾಚಾರವನ್ನು ಪಾಲಿಸಿ ಕೇವಲ ಎರಡು ಚರಣ ಹಾಡಿದಾಗ "ಪೂರ್ಣ ಹಾಡಿಲ್ಲ, ಆದ್ದರಿಂದ ಇದು ದೇಶದ್ರೋಹ ಅಥವಾ ಅಪಮಾನ" ಎಂದು ಬಿಂಬಿಸಿ ಸಭಾತ್ಯಾಗ ಮಾಡುವುದು ಕೂಡ ಸಮಂಜಸವಲ್ಲ.
ರೂಢಿಯಲ್ಲಿರುವ ಶಿಷ್ಟಾಚಾರವನ್ನು ರಾಜಕೀಯ ಲಾಭಕ್ಕಾಗಿ ವಿವಾದವನ್ನಾಗಿಸುವುದು ಸರಿಯಲ್ಲ.
#ಯಾವುದು_ಸರಿ_ಯಾವುದು_ತಪ್ಪು?...
ರಾಷ್ಟ್ರದ ಭಾವೈಕ್ಯತೆಯ ಸಂಕೇತವಾಗಬೇಕಿದ್ದ ಗೀತೆಯನ್ನು ಇಟ್ಟುಕೊಂಡು ಎರಡೂ ಪಕ್ಷಗಳು ಪರಸ್ಪರರ ಮೇಲೆ ಕೆಸರೆರಚಾಟ ನಡೆಸುವುದು, ಸಭಾತ್ಯಾಗ ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳುವುದು ತಪ್ಪು.
ಅಧಿಕೃತ ವೇದಿಕೆಗಳಲ್ಲಿ ನಿಗದಿತ ಶಿಷ್ಟಾಚಾರದಂತೆ ಮೊದಲ ಎರಡು ಚರಣಗಳನ್ನು ಗೌರವದಿಂದ ಹಾಡುವುದು ಸರಿ.
ಯಾರಾದರೂ ಸಾಂಸ್ಕೃತಿಕ ಅಥವಾ ಸಾರ್ವಜನಿಕ ವೇದಿಕೆಯಲ್ಲಿ ಪೂರ್ಣ ಗೀತೆಯನ್ನು ಹಾಡಿದರೆ ಅದನ್ನು ಗೌರವಿಸಿ ಕೇಳಿಸಿಕೊಳ್ಳುವುದು ನಾಗರಿಕ ಸೌಜನ್ಯ.
'ವಂದೇ ಮಾತರಂ' ಎಂದರೆ ತಾಯ್ನಾಡಿಗೆ ಮಾಡುವ ವಂದನೆ, ಅದನ್ನು ಹಾಡುವ ಉದ್ದೇಶ ದೇಶದ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುವುದೇ ಹೊರತು, ಅದನ್ನು ವಿರೋದ ಮಾಡುವುದು ಸಭಾತ್ಯಾಗ ಮಾಡಿ ಗೀತೆಯ ಸಾಲುಗಳ ನ್ನು ಲೆಕ್ಕ ಹಾಕುವುದನ್ನು ಬಿಡಬೇಕು, ಅದರಲ್ಲಿರುವ ದೇಶಪ್ರೇಮದ ತಿರುಳನ್ನು ಎಲ್ಲರೂ ಅರ್ಥಮಾಡಿಕೊಂಡರೆ ಸಾಕು.
#vandematharam #bankimchandrachatarji #ravindranathtagor #rajendraprasad #shivamogga #bjp #congress
Comments
Post a Comment