Skip to main content

#ವಿದ್ಯಾವ೦ತರು ವಿಚಾರವಂತರಾದರೆ ಮಾತ್ರ ಸಮಾಜಕ್ಕೆ ಲಾಭ #

#ಕನಾ೯ಟಕರಾಜ್ಯ ಮಟ್ಟದ ಮೂರನೆ ಆದಿವಾಸಿಗಳ ಸಮ್ಮೇಳನ ಹೊಸನಗರದಲ್ಲಿ#
  ಮೊನ್ನೆ ನನ್ನ ಕ್ಲಾಸ್ ಮೇಟ್ ಪುರಪ್ಪೆಮನೆ ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ಮತ್ತು ಬಟ್ಟೆಮಲ್ಲಪ್ಪದಲ್ಲಿ ಸಾಹಸದಿಂದ ವ್ಯಾಸ ವಿದ್ಯಾಲಯ ಶಾಲೆ ನಡೆಸುತ್ತಿರುವ ಗ್ರಾಮ ಪಂಚಾಯತ್ ಸದಸ್ಯ ಮಂಜುನಾಥ ಸತ್ಯನಾರಾಯಣ್ ಬ್ಯಾಣದ್ ಕನಾ೯ಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಂಚಾಲಕರಾದ ಬೆಂಗಳೂರಿನ SY ಗುರುಶಾ೦ತ್ ಜೊತೆ ಬಂದು ಕರಪತ್ರ ನೀಡಿದರು.
 ಈ ಸಮ್ಮೇಳನದ ಗೌರವಾಧ್ಯಕ್ಷರು ಚರಕ ಪ್ರಸನ್ನ,ಅಧ್ಯಕ್ಷರು ಕುಣುಬಿ ಸಮಾಜದ ಸಾಗರದ ವಕೀಲರಾದ ಕೊಂಗನಾಸಳ್ಳಿ ಮಂಜಪ್ಪ, ಇವರು ನನ್ನ ಶಿಷ್ಯ ಇವರ ನೇತೃತ್ವದಲ್ಲಿ 1995 ರಲ್ಲಿ ಆನಂದಪುರದಲ್ಲಿ ಮತ್ತು 1996ರಲ್ಲಿ ಭಟ್ಕಳ ಸಮೀಪದ ಕೊಗಾರಿನ ದೇವಗಾರು ಎಂಬ ಹಳ್ಳಿಯಲ್ಲಿ ಜಾನು ಎನ್ನುವವರ ಜಾಗದಲ್ಲಿ ಶಿವಮೊಗ್ಗ ಜಿಲ್ಲಾ ಮಟ್ಟದ ಕುಣುಬಿ ಜನಾ೦ಗದ ಎರೆಡು ಸಮಾವೇಶ ಮಾಡಿದ್ದು, ನಾನು ಭಾಗವಹಿಸಿದ್ದು ನೆನಪಾಯಿತು.
  ಪಕ್ಕದ ಗೋವಾ ರಾಜ್ಯದಲ್ಲಿ ಇವರ ಜಾತಿ ST ನಮ್ಮ ರಾಜ್ಯದಲ್ಲಿ BCM - B, ಮೀಸಲಾತಿಗಾಗಿ ಅವರ ಹೋರಾಟ ನಡೆದೇ ಇದೆ.
 ಶಿವಮೊಗ್ಗ ಜಿಲ್ಲೆಯ ಕುಣುಬಿ, ಹಸಲರು, ಗೌಳಿ, ಸಿಳ್ಳೆಕ್ಯಾತರರನ್ನ ಆದಿವಾಸಿ ಸಮಾವೇಶದಲ್ಲಿ ಸೇರಿಸಿಕೊಂಡಿರುವುದು ಸ್ವಾಗತಾಹ೯ ಇವರಿಗೆ ಬೆಂಬಲಿಸಿ ಇವರ ಸಮ್ಮೇಳನ ಯಶಸ್ವಿಗೆ ಪ್ರಕಾಶ್ ಮತ್ತು ಮಂಜುನಾಥ ಸತ್ಯನಾರಾಯಣ್ ಬ್ಯಾಣದ್ ಬೆಂಬಲಿಸುತ್ತಿರುವುದು ಖುಷಿ ಆಯಿತು ಇವರ ರಾಜ್ಯ ಮಟ್ಟದ ಸಮಾವೇಶಕ್ಕೆ ತಯಾರಿ ಹೇಗೆ ಎಂದೆ? ಬಂದವರಿಗೆ ಹೊಸನಗರದ 2 ಕಲ್ಯಾಣ ಮಂಟಪದಲ್ಲಿ ವ್ಯವಸ್ಥೆ ಮಾಡಿದ್ದೇವೆ ನಮ್ಮ ಆಥಿ೯ಕ ಲಭ್ಯತೆ ನೋಡಿ ಅದಕ್ಕೆ ತಕ್ಕ ಹಾಗೆ ಸರಳ ಊಟ ವ್ಯವಸ್ಥೆ ಮಾಡಲಾಗುವುದು ಅಂತ ಗುರುಶಾಂತ್ ಹೇಳಿದರು.
   ರಾಜಕೀಯ ಸಮಾವೇಶಗಳು ಅದರ ಡಾಂ ಡೂo ವ್ಯವಸ್ಥೆ ಮುಂದೆ ಆದಿವಾಸಿಗಳ ಸಮಾವೇಶ ಬಡವಾಗಿ ಕಂಡರೂ ಇಲ್ಲಿ ವೈಚಾರಿಕ ಶ್ರೀಮಂತಿಕೆ ಇದೆ, ಈ ಸಮಾವೇಶ ಅವರ ಸಂಘಟನೆ ಮತ್ತು ಹಕ್ಕುಗಳಿಗಾಗಿ ಜನ ಜಾಗೃತಿ ಆಗಲಿದೆ.
  ಇಲ್ಲಿ ಪ್ರಕಾಶ್ ಬಗ್ಗೆ ಎರೆಡು ಮಾತು ಬರೆಯಲೆ ಬೇಕು, ಸಾಗರದಲ್ಲಿ 8ನೇ ತರಗತಿ ಓದುವಾಗ ಇವರ ಮನೆ ಸಾಗರ ಆಸ್ಪತ್ರೆ ಹಿಂಬಾಗದ ಕ್ವಾಟ೯ರ್ಸ್ ನಲ್ಲಿ ಇತ್ತು ಇವರ ತಾಯಿ ಲೀಲಾವತಿ ಸಿಸ್ಟರ್ ನನಗೆ ತಾಯಿಯ೦ತೆ ಒಂದು ವಷ೯ ಮದ್ಯಾಹನ ಊಟ ಬಡಿಸಿದ್ದಾರೆ, ನಾನು ಹುಟ್ಟಿದಾಗ ಪ್ರಕಾಶ್ ಅಜ್ಜಿ ನನಗೆ ಬಂಗಾರದ ಉoಗುರ ತೊಡಿಸಿದ್ದರಂತೆ, ಈಗ ಪ್ರಕಾಶ್ ಪುರಪ್ಪೆ ಮನೆ ಪಂಚಾಯಿತಿ ಸದಸ್ಯರು, ನೀನಾಸಂನಲ್ಲಿ ನುರಿತವರು ನಾಟಕ, ಟಿವಿ ದಾರಾವಾಹಿ ಮತ್ತು ಸಿನಿಮಾದಲ್ಲೂ ಅಭಿನಯಿಸುತ್ತಾರೆ, ಪರಿಸರ ಹೋರಾಟ ಮತ್ತು ಇಂತಹ ಜನಪರ ಕಾಯ೯ಕ್ರಮದಲ್ಲೂ ಮುಂದೆ ಇದ್ದಾರೆ.
  ಇನ್ನೊಬ್ಬರು ಮಂಜುನಾಥಸತ್ಯನಾರಾಯಣ್ ಬ್ಯಾಣದ್ ಪತ್ರಕತ೯ರಾಗಿ ಟಿವಿ ರಿಪೋಟ್೯ರ್ ಆಗಿ ಕಾರವಾರ ಜಿಲ್ಲೆಯಲ್ಲಿದ್ದವರು ಅದನ್ನ ಬಿಟ್ಟು ಹಳ್ಳಿಯಲ್ಲಿ ವ್ಯಾಸ ವಿದ್ಯಾಸಂಸ್ಥೆ ಕಟ್ಟಿ ಬೆಳೆಸುತ್ತಿದ್ದಾರೆ, ಇವರದ್ದು ಹತ್ತು ಹಲವಾರು ಆದಶ೯ದ ಕಾಯ೯ಕ್ರಮ ಇದರ ಮಧ್ಯೆ ದೆಹಲಿಯ ಆಮ್ ಆದ್ಮಿ ಪಾಟಿ೯ ಚಿಂತನೆಯಲ್ಲಿ ಯುವಕರ ಪಡೆ ಆಲಗೇರಿ ಮOಡ್ರಿ ಗ್ರಾಮ ಪoಚಾಯತನಲ್ಲಿ ಅಧಿಕಾರ ನಡೆಸುತ್ತಿದೆ ಬಹುಶಃ ರಾಜ್ಯದಲ್ಲಿ ಇದೊಂದೆ ಗ್ರಾಮ ಪಂಚಾಯತ್ ಆಮ್ ಆದ್ಮಿ ಪಾಟಿ೯ಯದು ಇರಬೇಕು ಅಲ್ಲಿ ಇವರೂ ಗ್ರಾಮ ಪಂಚಾಯತ ಸದಸ್ಯರು.
  ಇವತ್ತಿನ ದಿನದಲ್ಲಿ ಅಧಿಕಾರದ ರಾಜಕಾರಣ ಪಕ್ಷ ಅಂತ ಯುವಕರು ಆಕಡೆ ಆಕಷಿ೯ತರಾಗಿದ್ದರೆ ಈ ಇಬ್ಬರು ಬಿನ್ನವಾಗಿ ಆದಿವಾಸಿ ಸಮ್ಮೇಳನಕ್ಕೆ ಸಹಕರಿಸುತ್ತಿರಲಿಕ್ಕೆ ಇವರಿಬ್ಬರ ವೈಚಾರಿಕ ಹಿನ್ನೆಲೆ ಕೂಡ ಕಾರಣ.
  ಇವರ ಪ್ರಯತ್ನಕ್ಕೆ ಸರಿಯಾದ ಪ್ರತಿಫಲ ಸಿಗಲಿ ಎಂದು ಹಾರೈಸುತ್ತೇನೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...