ಕೊರಾನಾ ಲಾಕ್ ಡೌನ್ ಡೈರಿ -2020
ಲೆಟರ್ ನಂಬರ್- 33
ದಿನಾ೦ಕ: 12 -ಮೇ -2020
#ಕೊರೆ೦ಟೈನ್_ಜಾಗನಿರಾಕರಿಸುವ_ಜನತೆ.
#ಗುಜರಾತಿನಿಂದ_ಕೊರಾನಾ_ಪಾಸಿಟಿವ್_ಇದ್ದವರನ್ನ_ಶಿವಮೊಗ್ಗಕ್ಕೆ_ಬಸ್ನಲ್ಲಿ_ಕರೆತಂದ_ಡ್ರೈವರ್_ಪರೀಕ್ಷೆ_ಮಾಡದೆ_ಕಳಿಸಿದ್ದಾರೆ!?.
"ಆದರೆ ರೋಗದ ಸೋ೦ಕಿತರೆಲ್ಲರನ್ನ ಕರೆತಂದ ಚಾಲಕನಿಗೆ ರೋಗ ತಲುಪದೆ ಇರಲು ಸಾಧ್ಯವಿಲ್ಲ ಈಗ ಆತ ಶಿವಮೊಗ್ಗದಿಂದ ಗುಜರಾತಿನವರೆಗೆ ರೋಗ ಹರಡುತ್ತಾನೆಂಬ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ಕಳಿಸಿರುವುದು ಮಾತ್ರ ದೊಡ್ಡ ದುರ೦ತ"
ಮಾರಣಾ೦ತಿಕ ವೈರಸ್ ನಿಯ೦ತ್ರಣಕ್ಕೆ ಸಕಾ೯ರದ ಎಲ್ಲಾ ಅಧೀನ ಇಲಾಖೆ ಶಕ್ತಿ ಮೀರಿ ಕೆಲಸ ಮಾಡುತ್ತಿದೆ.
ಮುಂಬೈನಲ್ಲಿ ಸಮುದಾಯ ಪ್ರಸರಣದ ಹಂತ ತಲುಪಿರುವ ವದಂತಿ ಇದೆ.
3ನೇ ಹಂತದ ಲಾಕ್ ಡೌನ್ ನಿಯಂತ್ರಣ ಸಡಲೀಕರಣ ಮಾಡಿದ ನಂತರ ಅಂತರ್ ಜಿಲ್ಲೆ ಮತ್ತು ಅಂತರ್ ರಾಜ್ಯ ಪ್ರಯಾಣಕ್ಕೆ ಅನುಮತಿ, ಸರಕು ಸಾಗಾಣಿಕೆಗೆ ಅವಕಾಶ ನೀಡಿದ್ದರಿಂದ ಅನೇಕರನ್ನ ವೈರಸ್ ಶಂಕೆಯಿ೦ದ ಕೊರಂಟೈನ್ನಲ್ಲಿ ಕೆಲದಿನ ನಿರೀಕ್ಷಣೆಗೆ ಒಳಪಡಿಸಲೇ ಬೇಕಾಗಿದೆ ಇದಕ್ಕಾಗಿ ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಕಾ೯ರದ ವಿದ್ಯಾಥಿ೯ ನಿಲಯಗಳನ್ನ ಬಳಸುತ್ತಿದ್ದಾರೆ.
ಆದರೆ ಇತ್ತೀಚಿಗೆ ಸ್ಥಳಿಯರು ಕೊರಾ೦ಟೈನ್ ಗೆ ತಮ್ಮ ಊರಿನ ಸಕಾ೯ರಿ ಕಟ್ಟಡಗನ್ನ ಬಳಸಲು ಅಡ್ಡಿಪಡಿಸುತ್ತಿದ್ದಾರೆ ಇದು ಈಗ ಎಲ್ಲಾ ಕಡೆಯೂ ಸಾ೦ಕ್ರಮಿಕವಾಗಿ ಸ್ಥಳಿಯರ ವಿರೋದ ಜಾಸ್ತಿ ಆಗಿದೆ.
ಇದು ತಪ್ಪು, ಕೊರOಟೈನ್ ಪೀಡಿತರಿಗೆ ಜನರಿಂದ ದೂರವಾಗಿ ಕೆಲ ದಿನ ಇಟ್ಟು ಪುನಃ ಪರೀಕ್ಷೆ ಮಾಡಿ ವೈರಸ್ ಸೋoಕು ಇಲ್ಲದವರಿಗೆ ಸಮುದಾಯದ ಜೊತೆ ಇರಲು ನೀಡುವ ಒಂದು ಸುರಕ್ಷ ವಿಧಾನ ಇದರಿಂದ ಈ ರೋಗ ನಿಯಂತ್ರಣ ಸಾಧ್ಯ ಎಂಬುದು ಜನತೆಗೆ ಜಾಗೃತಿ ಮಾಡಲು ನಾವು ಎಡವಿದ್ದೇವೆ.
ಜನತೆಗೆ ಸದ್ಯ ಇರುವ ಭಯ ಕೊರOಟೈನ್ ಅಂದರೆ ಎಲ್ಲರಿಗೂ ಸೋ೦ಕು ಇರುತ್ತೆ ಮತ್ತು ಸುತ್ತಲಿನ ಪ್ರದೇಶಕ್ಕೆ ಹರುಡುತ್ತದೆ ಎಂಬ ತಪ್ಪು ಕಲ್ಪನೆ ಉoಟಾಗಿದೆ.
ಇದನ್ನ ಕಾನೂನು ಚಲಾಯಿಸಿ ಜನರನ್ನ ವಿರೋದಿಸದಂತೆ ಮಾಡಲು ಪ್ರಯತ್ನಿಸುವುದರಿಂದ ಸಾವ೯ಜನಿಕರ ಸಹಕಾರ ಕಳೆದುಕೊಳ್ಳುವ ಸಂಭವ ಜಾಸ್ತಿ ಹಾಗಾಗಿ ಸ್ಥಳಿಯರನ್ನ ವಿಶ್ವಾಸಕ್ಕೆ ಪಡೆದು ಕೊರಂಟೈನ್ ವಿರೋದಿಸದಂತೆ ಮನ ಒಲಿಸ ಬೇಕು.
ಶಿವಮೊಗ್ಗದಲ್ಲಿ ಅಧಿಕಾರಿ ಒಬ್ಬರು ಕೊರOಟೈನ್ ವಿರೋದಿಸಿದರೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಬೆದರಿಕೆಯOತ ಹೇಳಿಕೆ ನೀಡಿದ್ದು ಮುಖ್ಯಮ೦ತ್ರಿ ಜಿಲ್ಲೆಯಲ್ಲಿ ಸಾವ೯ಜನಿಕರು ಮತ್ತು ಸಕಾ೯ರದ ಮದ್ಯ ಕಂದಕ ಏಪ೯ಟ್ಟಿದ್ದರಿಂದ ತಕ್ಷಣ ಆ ಅಧಿಕಾರಿಯನ್ನ ವಗಾ೯ಯಿಸಿ ಮುಖ್ಯಮಂತ್ರಿಗಳು ವಾತಾವರಣ ತಿಳಿಗೊಳಿಸಿದರು.
ಅಧಿಕಾರಿ ಮಣಿವಣ್ ನ್ ಸಮಥ೯ರು ಆದರೆ ಅವರ ಹೇಳಿಕೆ ಹಾಟ್ ಹೆಡ್ಡೆಡ್ ಆದ್ದರಿಂದ ಯಡೂರಪ್ಪರಿಗೆ ಅನಿವಾಯ೯ ಆಗಿರ ಬೇಕು.
ಇನ್ನು ಗುಜರಾತಿನಿಂದ ಶಿವಮೊಗ್ಗಕ್ಕೆ ಬಂದ ಬಸ್ ನಲ್ಲಿ ಎಲ್ಲರೂ ಸೋ೦ಕಿತರೇ ಹಾಗಾಗಿ ಅವರನ್ನ ಶಿವಮೊಗ್ಗದ ಮೆಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದಾರೆ ಆದರೆ ಗುಜರಾತಿನ ಬಸ್ ಮತ್ತು ಡ್ರೈವರ್ ನ್ನ ಯಾವುದೇ ಪರೀಕ್ಷೆ ಮಾಡದೆ ವಾಪಾಸ್ ಕಳಿಸಿದ್ದಾರೆ.
ಇದಕ್ಕೆ ಅಧಿಕಾರಿಗಳು ಹೇಳುವುದು ಹಿಂದಿರುಗುವ ಪಾಸ್ ಅವನಲ್ಲಿ ಇತ್ತು ಅಂತ!?
ಆದರೆ ರೋಗದ ಸೋ೦ಕಿತರೆಲ್ಲರನ್ನ ಕರೆತಂದ ಚಾಲಕನಿಗೆ ರೋಗ ತಲುಪದೆ ಇರಲು ಸಾಧ್ಯವಿಲ್ಲ ಈಗ ಆತ ಶಿವಮೊಗ್ಗದಿಂದ ಗುಜರಾತಿನವರೆಗೆ ರೋಗ ಹರಡುತ್ತಾನೆಂಬ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ಕಳಿಸಿರುವುದು ಮಾತ್ರ ದೊಡ್ಡ ದುರ೦ತ.
ಬಸ್ ನ್ನ ಸಂಪೂಣ೯ ಸ್ಯಾನಿಟೇಶನ್ ಮಾಡಲಾಗಿದೆಯೋ?ಗೊತ್ತಿಲ್ಲ!?
Comments
Post a Comment