https://youtube.com/shorts/_0B2QNRGT1I?feature=share
#ರಾಗಿರೊಟ್ಟಿ_ಕೆಂಪುಖಾರಾ_ಚಟ್ನಿ_ಬೆಣ್ಣೆ_ನೀರುಳ್ಳಿ_ಹಸಿಮೆಣಸು_ಮಜ್ಜಿಗೆ
#ಒಂದು_ಕಾಲದಲ್ಲಿ_ದೀರ್ಘ_ಪ್ರಯಾಣದಲ್ಲಿ_ಬಳಕೆ
#ಇವತ್ತು_ನಾನೇ_ಮಾಡಿದ_ಉಪಹಾರ.
#ರಾಗಿರೊಟ್ಟಿ ಮುರಿದು ಕೆಂಪು ಖಾರ ಚಟ್ನಿಗೆ ಅದ್ದಿ ಅದನ್ನು ಬೆಣ್ಣೆ ಜೊತೆ ಸೇರಿಸಿ ಬಾಯಲ್ಲಿ ಹಾಕಿ ಒಂದೆರೆಡು ಸಾರಿ ಮೆತ್ತಗೆ ನಾಲಿಗೆಯಲ್ಲಿ ತಿರುವಿ ಆ ಕ್ಷಣದಲ್ಲಿ ಮನಸ್ಸು- ಕಣ್ಣು - ಮೂಗು- ನಾಲಿಗೆ ನಿರ್ದರಿಸುವ ಪ್ರಮಾಣದಲ್ಲಿ ನೀರುಳ್ಳಿ ಕಚಕ್ ಅಂತ ಕಚ್ಚಿಕೊಂಡು ಇವೆಲ್ಲದರ ಮಿಶ್ರಣ ಮಾಡುವ ನಾಲಿಗೆಗೆ ಚುರುಕು ಮುಟ್ಟಿಸಲು ಹಸಿ ಮೆಣಸು ಕಟಕ್ ಅಂತ ಹಲ್ಲಿನಿಂದ ಕತ್ತರಿಸಿ ಸ್ವಾದಿಸುವ ಸ್ವಾದಕ್ಕೆ ಸರಿಸಾಟಿಯೇ ಇಲ್ಲ ಅನ್ನಿಸದಿರಲಾರದು.
ನಮ್ಮ ಮಲ್ಲಿಕಾ ವೆಜ್ ನಲ್ಲಿ ಹಲಸಿನ ಎಲೆ ಕೊಟ್ಟೆ ಕಡಬು, ಅಕ್ಕಿ ರೊಟ್ಟಿ ಮತ್ತು ರಾಗಿ ರೊಟ್ಟಿ ನಿತ್ಯ ಗ್ರಾಹಕರಿಗೆ ದೊರೆಯುತ್ತದೆ ಇವುಗಳ ಜೊತೆಯ ಕೆಂಪು ಖಾರಾ ಚಟ್ನಿ ಬಹು ಬೇಡಿಕೆ ಇರುವುದರಿಂದ ಕೆಂಪು ಖಾರಾ ಚಟ್ನಿ ಖಾಲಿ ಆದ ತಕ್ಷಣ ತಯಾರಿಸ ಬೇಕು ಆದರೆ ಇದನ್ನು ತಯಾರಿಸುವ ಎಕ್ಸಪರ್ಟ್ ಗೈರಾದ್ಧರಿಂದ ದಾಖಲಿಸಿರುವ ರೆಸಿಪಿಯಂತೆ ನಾನೇ ಮನೆಯಿಂದ ತಯಾರಿಸಿ ಕಳಿಸಿದೆ.
ಈ ಚಟ್ನಿಗೆ ನೀರು ತಾಗಿಸದಂತೆ ನಾಜೂಕಾಗಿ ಕೆಂಪು ಮೆಣಸಿನಕಾಯಿ, ಬೆಳ್ಳುಳ್ಳಿ, ಜೀರಿಗೆ, ಮೆಂತೆ, ಹುಣುಸೆ ಹಣ್ಣು, ಬೆಲ್ಲ ಮತ್ತು ಉಪ್ಪು ಸೇರಿಸಿ ತಯಾರಿಸಿದರೆ ಕೆಲ ದಿನಗಳ ಕಾಲ ಯಾವುದೇ ಹವಾಮಾನದಲ್ಲೂ ತಾಜಾ ಆಗಿ ಉಳಿಯುತ್ತದೆ.
ಈ ಚಟ್ನಿ ಮಾಡುವಾಗಲೇ ಬಯಲು ಸೀಮೆಯ ಜನ ಒಂದು ಕಾಲದಲ್ಲಿ ಊರಿಂದ ಊರಿಗೆ ಪ್ರಯಾಣಿಸುವಾಗ ಮಾರ್ಗ ಮಧ್ಯದಲ್ಲಿ ಹಸಿವು ತಣಿಸಲು ತೆಗೆದು ಕೊಂಡು ಹೋಗುತ್ತಿದ್ದ ರಾಗಿ ರೊಟ್ಟಿಗೆ ಈ ಚಟ್ನಿ ಒಯ್ಯಲೇ ಬೇಕಾದ ನಿಯಮ ನೆನಪಾಗಿ ಮರು ದಿನ ಬೆಳಿಗ್ಗೆ ರಾಗಿ ರೊಟ್ಟಿ ಉಪಹಾರ ತಯಾರಿಸುವ ತೀರ್ಮಾನ ಮಾಡಿದೆ.
ರಾಗಿ ರೊಟ್ಟಿ ಮುರಿದು ಕೆಂಪು ಖಾರ ಚಟ್ನಿಗೆ ಅದ್ದಿ ಅದನ್ನು ಬೆಣ್ಣೆ ಜೊತೆ ಸೇರಿಸಿ ಬಾಯಲ್ಲಿ ಹಾಕಿ ಒಂದೆರೆಡು ಸಾರಿ ಮೆತ್ತಗೆ ನಾಲಿಗೆಯಲ್ಲಿ ತಿರುವಿ ಆ ಕ್ಷಣದಲ್ಲಿ ಮನಸ್ಸು- ಕಣ್ಣು - ಮೂಗು- ನಾಲಿಗೆ ನಿರ್ದರಿಸುವ ಪ್ರಮಾಣದಲ್ಲಿ ನೀರುಳ್ಳಿ ಕಚಕ್ ಅಂತ ಕಚ್ಚಿಕೊಂಡು ಇವೆಲ್ಲದರ ಮಿಶ್ರಣ ಮಾಡುವ ನಾಲಿಗೆಗೆ ಚುರುಕು ಮುಟ್ಟಿಸಲು ಹಸಿ ಮೆಣಸು ಕಟಕ್ ಅಂತ ಹಲ್ಲಿನಿಂದ ಕತ್ತರಿಸಿ ಸ್ವಾದಿಸುವ ಸ್ವಾದಕ್ಕೆ ಸರಿಸಾಟಿಯೇ ಇಲ್ಲ ಅನ್ನಿಸದಿರಲಾರದು.
Comments
Post a Comment