#ಅಂತರಾಷ್ಟ್ರೀಯ_ನಿದಿ_ಚೋರರ_ತಂಡದಿಂದ
#ಕಾಳು_ಮೆಣಸಿನ_ರಾಣಿ__ಗೇರುಸೊಪ್ಪೆಯ_ಜೈನರಾಣಿ
#ಚೆನ್ನಬೈರಾದೇವಿ_ಸಂಸ್ಥಾನದ_ಸ್ಮಾರಕ_ಭಗ್ನವಾಯಿತು
1941 ರಲ್ಲಿ SS ಗೇರುಸೊಪ್ಪೆ ಎಂಬ ಬ್ರಿಟೀಷರ ಹಡಗು ಚೆನ್ನಬೈರಾ ದೇವಿಯ ಆಸ್ಥಾನಕ್ಕೆ ಸೇರಿದ್ದ ಟನ್ ಗಟ್ಟಲೆ ಬೆಳ್ಳಿ ಬಾರ್ ಗಳನ್ನು ಒಯ್ಯುತ್ತಿದ್ದಾಗ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನಿನ ಸಬ್ ಮೆರೀನ್ ಉಡಾಯಿಸಿದ ಟಾರ್ಪೆಡೋ ಒಂದು ಈ ಹಡಗನ್ನು ಮುಳುಗಿಸಿತು.
ಅನೇಕ ವರ್ಷಗಳ ನಂತರ 2012-13ರಲ್ಲಿ ಸಮುದ್ರದಲ್ಲಿ ಮುಳುಗಿದ ನಿಧಿಯನ್ನು ಸಂಶೋಧಿಸುವ ಅಮೆರಿಕದ ಸಂಸ್ಥೆ ಒಂದು ಈ ಮುಳುಗಿದ ಗೇರುಸೊಪ್ಪೆ ಹಡಗನ್ನು ಕಂಡುಹಿಡಿದು ಆ ಹಡಗಿನಲ್ಲಿ ರವಾನಿಸುತ್ತಿದ್ದ ಬೆಲೆಬಾಳುವ ಬೆಳ್ಳಿ ಬಾರ್ ಗಳನ್ನು ಆಳ ಸಮುದ್ರದಿಂದ ತೆಗೆಯಿತು.
ಅದು ಯುರೋಪಿನಿಂದ ಕಾಳುಮೆಣಸು ಖರೀದಿಗಾಗಿ ವಿನಿಮಯ ಮಾಡಿಕೊಂಡ ಬೆಳ್ಳಿ ಬಾರ್ ಗಳಾಗಿದ್ದು ಅದು ರಾಣಿ ಚೆನ್ನಬೈರಾ ದೇವಿಯ ಸಂಸ್ಥಾನದ್ದಾಗಿತ್ತು.
ಈ ಸುದ್ದಿ ಬ್ರಿಟಿಷರು ತಮ್ಮ ಆಡಳಿತಾವಧಿಯಲ್ಲಿ ರಾಣಿ ಚೆನ್ನಬೈರಾ ದೇವಿಯ ಗುಪ್ತ ನಿಧಿಗಳನ್ನು ವಶಪಡೆದದ್ದರು ಎಂಬ ಸುದ್ದಿಗೆ ಪೂರಕವಾಗಿದೆ.
ಆ ನಂತರದಲ್ಲಿ ನಮ್ಮ ದೇಶ ಸ್ವಾತಂತ್ರವಾಯಿತು, ಆ ಕಾಲಮಾನದಲ್ಲಿ ಇಟಲಿಯ ಮಾಫಿಯಾ ಸಂಸ್ಥೆ ಇಲ್ಲಿನ ರಾಣಿ ಚೆನ್ನಬೈರಾದೇವಿಯ ಗುಪ್ತನಿಧಿ ಸಂಶೋಧನೆಗೆ ಯೋಜನೆಯೆಂದು ರೂಪಿಸಿತ್ತೆಂದು ಹೇಳುತ್ತಾರೆ.
ಹಾಗಾದರೆ ಅವರು ಆ ಗುಪ್ತ ನಿಧಿಗಳಿಸಲು ಯಶಸ್ವಿಯಾದರಾ ಗೊತ್ತಿಲ್ಲ? ಆದರೆ ಗುಪ್ತನಿಧಿಯ ಹುಡುಕಾಟದಿಂದ 500 ವರ್ಷಗಳ ಇತಿಹಾಸವನ್ನು ಬುಡಮೇಲು ಮಾಡುವಂತಹ ಕೆಲಸ ಮಾತ್ರ ಯಶಸ್ವಿಯಾಗಿ ನಡೆಯಿತು.
ಅಲ್ಲಿ ಇದ್ದಂತ ಜೈನ ಬಸದಿಗಳು, ದೇವಾಲಯಗಳು, ಕೋಟೆಗಳು, ದೀಪ ಸ್ತಂಭಗಳು ಶಿಲಾಶಾಸನಗಳು ಹಾಗು ಗುಪ್ತ ಸುರಂಗ ಮಾರ್ಗಗಳನ್ನ ಸಂಪೂರ್ಣ ಆಗೆತದಿಂದ ಬುಡಮೇಲು ಮಾಡಿದ್ದಾರೆ.
ಇವತ್ತು ಚನ್ನಬೈರಾ ದೇವಿಯ ಗೇರುಸೊಪ್ಪೆಯ ಸಂಸ್ಥಾನವನ್ನು ನೋಡಿದರೆ ಇದು ರಾಜರ ಕಾಲದ ಯುದ್ಧದಲ್ಲಿ ಬುಡಮೇಲು ಮಾಡಿರಬೇಕೆಂದು ಅನ್ನಿಸುತ್ತದೆ ಆದರೆ ಇದು ನಿದಿ ಚೋರರಿಂದ ನಡೆದದ್ದು.
ಇದೆಲ್ಲ ನಡೆದಿದ್ದು ದೇಶ ಸ್ವತಂತ್ರವಾದ 30 ವರ್ಷದ ನಂತರ ಅದು ಸತತವಾಗಿ ಹತ್ತು ವರ್ಷ ಜನವಿರಳ ಪ್ರದೇಶವಾದ ದಟ್ಟ ಅರಣ್ಯದಲ್ಲಿ ನಿರಾತಂಕವಾಗಿ ನಡೆಯಿತು ಇದಕ್ಕೆ ಇತಿಹಾಸ ಸಂಶೋಧಕರುಗಳು, ಈ ಭಾಗದ ಪ್ರಮುಖಕರೂ, ಅಧಿಕಾರಿಗಳೂ ಗುಪ್ತ ಸಹಾಯ ನೀಡಿರಬಹುದೆಂಬ ಗುಮಾನಿಗಳಿದೆ.
ಗೇರುಸೊಪ್ಪೆ ಸಂಸ್ಥಾನದ ಎಲ್ಲಾ ಕಟ್ಟಡಗಳು ನಿಧಿ ಚೂರರ ಕೈಯಲ್ಲಿ ನಲುಗಿ ಹೋಗಿದೆ ಭಗ್ನಗೊಂಡಿದೆ.
(ಮುಂದಿನ ಭಾಗದಲ್ಲಿ SS ಗೇರುಸೊಪ್ಪೆ ಹಡಗಿನ ಮಾಹಿತಿ)
Comments
Post a Comment