Blog number 2202. ಆತ್ಮೀಯ ಮಿತ್ರ ಸಮಾಜ ಸೇವಕ ಬಿ.ಡಿ.ರವಿ ಅವರಿಗೆ 50 ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿ ಶುಭ ಹಾರೈಕೆಗಳು.
#ನಮ್ಮ_ಊರಿನ_ಉತ್ಸಾಹಿ_ಸಮಾಜ_ಸೇವಕ
#ಬಿ_ಡಿ_ರವಿ_ಅವರಿಗೆ_50ನೇ_ಹುಟ್ಟು_ಹಬ್ಬದ_ಶುಭಹಾರೈಕೆಗಳು
#ಪತ್ರಕರ್ತರು_ಸಾಹಿತಿಗಳು
#ಶಿವಮೊಗ್ಗ_ಜಿಲ್ಲಾ_ವೈಜ್ಞಾನಿಕ_ಪರಿಷತ್_ಅಧ್ಯಕ್ಷ
#ದರ್ಮಜಾಗೃತಿ_ಪ್ರಾಂತ್ಯ_ಪರಿಯೋಜನಾ_ಪ್ರಮುಖ
#ರಾಷ್ಟ್ರೀಯ_ಮೀನುಗಾರ_ಸಂಘದ_ರಾಜ್ಯ_ಪ್ರದಾನ_ಕಾರ್ಯದರ್ಶಿ
#ಭಾರತ್_ಸೇವಾದಳದ_ತಾಲ್ಲೂಕ್_ಖಜಾಂಚಿ
#ಆನಂದಪುರಂ_ಹೋಬಳಿ_ಸಾಹಿತ್ಯ_ಪರಿಷತ್_ಅಧ್ಯಕ್ಷ
#ಇತಿಹಾಸ_ಪರಂಪರೆ_ಉಳಿಸಿ_ಟ್ರಸ್ಟ್_ಸಂಸ್ಥಾಪಕ
ಬಿ.ಡಿ.ರವಿ ಆನಂದಪುರಂನ ಉತ್ಸಾಹಿ ಸಮಾಜ ಸೇವಕರು ಇವರು ಪತ್ರಕರ್ತರೂ, ಸಾಹಿತಿಗಳು, ಆನಂದಪುರಂ ಹೋಬಳಿ ಸಾಹಿತ್ಯ ಪರಿಷತ್ ಅಧ್ಯಕ್ಷರು, ಶಿವಮೊಗ್ಗ ಜಿಲ್ಲಾ ವೈಜ್ಞಾನಿಕ ಪರಿಷತ್ ಅಧ್ಯಕ್ಷರು, ದಮ೯ ಜಾಗೃತಿ ಪ್ರಾಂತ್ಯ ಪರಿಯೋಜನಾ ಪ್ರಮುಖರಾಗಿ 12 ಜಿಲ್ಲೆ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ, ರಾಷ್ಟ್ರೀಯ ಮೀನುಗಾರ ಸಂಘದ ರಾಜ್ಯ ಪ್ರದಾನ ಕಾಯ೯ದರ್ಶಿಗಳು, ಭಾರತ ಸೇವಾದಳದ ತಾಲ್ಲೂಕು ಖಜಾಂಚಿ, ಇತಿಹಾಸ ಪರಂಪರೆ ಉಳಿಸಿ ಟ್ರಸ್ಟ್ ಸಂಸ್ಥಾಪಕರು ಹೀಗೆ ಇವರ ಸಮಾಜ ಸೇವೆಯ ಪಟ್ಟಿ ಉದ್ದ ಇದೆ.
ಆರ್.ಎಸ್.ಎಸ್,ಎಬಿವಿಪಿ ಇಂದ ಬಂದವರು ಕೆಲಕಾಲ ಖಾಸಾಗಿ ಶಾಲಾ ಶಿಕ್ಷಕರಾಗಿದ್ದರು.
ಇವರ ತಂದೆ ಟೀಕಪ್ಪ ಮಾಸ್ತರ್ ಶಿಸ್ತಿನ ಸರಳ ಸಂಪನ್ನ ಶಿಕ್ಷಕರಾಗಿದ್ದವರು ಇವರ ತಾಯಿ ಮನೆತನ ಆನಂದಪುರಂ ಮಸೀದಿ ಎದುರಿನ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೂ ದಾನ ಮಾಡಿದ ಸ್ಕೂಲ್ ಪುಟ್ಟಣ್ಣರ ಮನೆತನದವರು ಈ ಶಾಲೆಯಲ್ಲಿ ಓದಿದ ಎ.ಆರ್. ಬದರಿ ನಾರಾಯಣ ಅಯ್ಯಂಗಾರ್ ವಿದ್ಯಾಮಂತ್ರಿ ಆಗುತ್ತಾರೆ.
ಈ ಶಾಲಾ ಜಾಗ ಕೆಳದಿ ರಾಜ ವೆಂಕಟಪ್ಪ ನಾಯಕ ವಿವಾಹವಾದ ರಂಗೋಲಿ ಪ್ರವೀಣೆ ಚಂಪಕಳ ತಂದೆ ಮನೆ ಇದ್ದ ಜಾಗ, ದುರಂತ ಪ್ರೇಮದ ಸ್ಮಾರಕ #ಚಂಪಕ_ಸರಸ್ಸು ನಿರ್ಮಾಣವಾದ ಮೇಲೆ ಚಂಪಕಳ ಮನೆತನದ ಮೇಲೆ ದೊಡ್ಡ ರೀತಿಯ ಪ್ರಹಾರಗಳು ಆಗುತ್ತದೆ.
ಚಂಪಕಾಳ ಆಸ್ತಿ ಶಾಪಗ್ರಸ್ತ ಎಂದು ಬ್ರಿಟೀಶರಿಗೆ ಶಾಲೆ ನಿರ್ಮಿಸಲು ಭೂದಾನ ಮಾಡುತ್ತಾರೆ ಇದು ಅಸಲಿ ಕಥೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಪೂರ್ಣ ಮಾಹಿತಿ ಓದ ಬಹುದು
https://arunprasadhombuja.blogspot.com/2021/05/22-125.html
ಬಿ.ಡಿ.ರವಿ ನಾನು 2004ರಲ್ಲಿ ಸಾಗರ ತಾಲೂಕಿನಾದ್ಯಂತ ನಡೆಸಿದ ತುಮರಿ ಸೇತುವೆ - ಹಂದಿಗೋಡು ಕಾಯಿಲೆ ಪೀಡಿತರಿಗೆ ಪುನರ್ವಸತಿ- ಜೋಗ್ ಫಾಲ್ಸ್ ಅಭಿವೃದ್ಧಿ - ಶಿವಮೊಗ್ಗ ತಾಳಗುಪ್ಪ ಬ್ರಾಡ್ ಗೇಜ್ ಒತ್ತಾಯಿಸಿ ನಡೆಸಿದ 13 ದಿನಗಳ ಪಾದಯಾತ್ರೆಯ ನೇತೃತ್ವವಹಿಸಿ ಎಲ್ಲಾ ಊರುಗಳಲ್ಲಿ ಪ್ರಸ್ತಾವಿಕ ಭಾಷಣ ಮಾಡಿದವರು, ಇವರ ಆ ದಿನದ ಸಹಾಯ ಸಹಕಾರ ನಾನು ಜೀವನ ಪರ್ಯಂತ ಮರೆಯಬಾರದು.
ಇವತ್ತು ವರದಳ್ಳಿ ಶ್ರೀಧರ ಆಶ್ರಮಕ್ಕೆ ಹೋಗಿ ಪ್ರಸಾದ ಮತ್ತು ಸಿಹಿಯೊಂದಿಗೆ ಬಂದು ತನ್ನದು 50 ನೇ ಹುಟ್ಟು ಹಬ್ಬ ಎಂದಾಗ ನಂಬಲಾಗಲಿಲ್ಲ ನಾನು ರವಿಗೆ 40 ವರ್ಷ ಇರಬಹುದೆಂದು ಭಾವಿಸಿದ್ದೆ.
Comments
Post a Comment