Blog number 857, ಮೈದಾ ಹಿಟ್ಟು ಗೋದಿಯ ಒಳ ತಿರುಳಿನ ಹುಡಿ, ವಿಶ್ವದ ದೀರ್ಘ ಕಾಲ ವಾಣಿಜ್ಯ ಉದ್ದೇಶದ ಅಂಟಾಗಿ ಬಳಕೆ,ಬೇಕರಿಗಳಲ್ಲಿ ಬ್ರೆಡ್ ಮತ್ತು ಸಿಹಿ ಪದಾರ್ಥದಲ್ಲಿ ಹೆಚ್ಚು ಬಳಸುತ್ತಾರೆ,ಮೈದಾ ಅತಿ ಬಳಕೆಯಿಂದ ದುಷ್ಪರಿಣಾಮ ಜಾಸ್ತಿ.
#ಮೈದಾ_ಹಿಟ್ಟಿನ_ಅಂಟಿಗೆ_ಮೈಲುತುತ್ತಾ_ಬೆರೆಸುವುದು.
#ಮೈದಾ_ಹಿಟ್ಟು_ತಯಾರಿ_ಹೇಗೆ?
#ಮೈದಾಹಿಟ್ಟು_ಭಾರತಕ್ಕೆ_ಬಂದ_ಬಗೆ
#ಬಾಲ್ಯದ_ಹೀರೊ_ಡುಮಿ೦ಗಣ್ಣರಿಂದ_ಕಲಿತ_ಮೈದಾಹಿಟ್ಟಿನ_ಅಂಟು_ತಯಾರಿಕೆ_ವಿದಾನ,
ನನ್ನ ಬಾಲ್ಯದ ಹೀರೋ ದುಮುಗಣ್ಣ (ಡುಮಿಂಗ್ ರೆಬೆಲೋ) ಆನಂದಪುರಂನ ಸಿನಿಮಾ ಟೂರಿಂಗ್ ಟಾಕೀಸಿನಲ್ಲಿ ರಾತ್ರಿ ಗೇಟ್ ಕೀಪರ್ ಆಗಿ ಡ್ಯೂಟಿ ಮಾಡಿ ಹಗಲಿನಲ್ಲಿ ಹೊಸ ಬಾಡಿಗೆ ಸೈಕಲ್ ನ ಹಿಂಬಾಗದಲ್ಲಿ ಬಿದಿರಿನ ತಟ್ಟಿ ಕಟ್ಟಿ ಅದಕ್ಕೆ ಅವತ್ತಿನ ಸಿನಿಮಾ ಪೋಸ್ಟರ್ ಅಂಟಿಸಿಕೊಂಡು, ಸೆಕಲ್ ಬಂಪರ್ ಗೂ ಮತ್ತು ಹಿಂಬಾಗದ ಚಕ್ರದ ತಂತಿಯ ರಿಮ್ಮಿನ ಮಧ್ಯಕ್ಕೆ ಕತ್ತದ ಹಗ್ಗ ಕಟ್ಟಿ ಅದರ ಮಧ್ಯದಲ್ಲಿ ಸಣ್ಣ ತಗಡಿನ ಡಬ್ಬ ಕಟ್ಟಿರುತ್ತಿರುತ್ತಿದ್ದರು, ಇವರು ಸೈಕಲ್ ಸವಾರಿ ಮಾಡುವಾಗ ಆ ಕತ್ತದ ದಾರಕ್ಕೆ ಚಕ್ರದ ತಿರುಗುವಿಕೆಯಿಂದ ಉಂಟಾಗುವ ಕಂಪನ ಟಿನ್ ಡಬ್ಬಿಯಿಂದ ವಿಚಿತ್ರ ಶಬ್ದ ಜನರನ್ನು ಈ ಸೈಕಲ್ ಕಡೆ ತಿರುಗುವಂತೆ ಮಾಡುತ್ತಿತ್ತು.
ಇದರಿಂದ ಹಳ್ಳಿಗಳಲ್ಲಿ ಆನಂದಪುರಂನಲ್ಲಿ ಪ್ರದರ್ಶನ ಅಗುವ ಸಿನಿಮಾ ಮಾಹಿತಿ ಗೊತ್ತಾಗುತ್ತಿತ್ತು ಮತ್ತು ಸೈಕಲ್ ಹ್ಯಾಂಡಲ್ ನಲ್ಲಿ ಪೋಸ್ಟರ್ ಅಂಟಿಸಲು ಗಮ್ ಇರುತ್ತಿತ್ತು ಪ್ರತಿ ಊರಿನ ನಿರ್ದಿಷ್ಟ ಬಾವಿಕಟ್ಟೆಯ ಗೋಡೆ ಮೇಲೆ ಪೋಸ್ಟರ್ ಅಂಟಿಸಿ ಬರುವುದು ಇವರ ಕೆಲಸ.
ಸಿನಿಮಾದ ತುಂಡಾದ ರೀಲಿನ ತುಣುಕುಗಳು ಡುಮುಗಣ್ಣ ನಮಗೆ ತಂದು ಕೊಡುತ್ತಿದ್ದರು ಅದನ್ನು ಆನಂದಪುರಂ ಸಂತೆಯಲ್ಲಿ ನಾವು ಖರೀದಿಸುತ್ತಿದ್ದ ಸಣ್ಣ ಬೂತಕನ್ನಡಿ ಅಳವಡಿಸಿದ ಸಿನಿಮಾ ಡಬ್ಬಿಯ ಹಿಂಬಾಗದಲ್ಲಿ ಹಾಕಿ ನೋಡುವಾಗ ಬೂತ ಕನ್ನಡಿ ಕಾರಣದಿಂದ ದೊಡ್ಡದಾಗಿ ಕಾಣುತ್ತಿದ್ದ ಸಿನಿಮಾ ಸೀನುಗಳ ಅನುಭವವೇ ಬೇರೆ.
ಡುಮಿಂಗಣ್ಣ ಅವರ ಅಂಟಿನ ಡಬ್ಬಕ್ಕೆ ಎರೆಡು ಭಾಗ ಮೈದಾ ಹಿಟ್ಟಿಗೆ ಮೂರು ಬಾಗ ನೀರು ಹಾಕಿ ಕಲಸಿ ಅದನ್ನು ಮೂರು ಸಣ್ಣ ಕಲ್ಲಿನ ಒಲೆ ಮಾಡಿ ಒಣಗಿದ ಎಲೆಕಡ್ಡಿಯಿಂದ ಬೆಂಕಿ ಮಾಡಿ ಬೇಯಿಸಿ ದಿಡೀರ್ ಅಂಟು ತಯಾರಿಸುವ ರಹಸ್ಯ ವಿದ್ಯೆ ನಾವೆಲ್ಲ ಕದ್ದು ನೋಡಿ ಕಲಿತುಕೊಂಡಿದ್ದೆ.
ನಂತರ ನಮ್ಮ ಜನಪರ ಹೋರಾಟ, ರಾಜಕೀಯದ ಪ್ರಾರಂಭದಲ್ಲಿ ಪೋಸ್ಟರ್ ಅಂಟಿಸಲು ಇದು ಸಹಾಯ ಆಯಿತು.
ಆಗಿನ ಪೋಸ್ಟ್ ಆಫೀಸುಗಳಲ್ಲಿ ಮೈದಾ ಹಿಟ್ಟಿನ ಅಂಟು ಇಟ್ಟಿರಲೇ ಬೇಕಿತ್ತು.
ನಮ್ಮ ಜಮಾನದಲ್ಲಿ ಮೈದಾ ಹಿಟ್ಟಿನ ಅಂಟು ಕೊಳೆತು ಹಳಸಿ ವಾಸನೆ ಬರುತ್ತಿದ್ದರಿಂದ ಅದಕ್ಕೆ ಒಂದೆರೆಡು ಕಾಳು ಮೈಲುತುತ್ತಾ ಹಾಕುವ ಐಡಿಯಾ ಯಾರೋ ಹೇಳಿದ್ದರಿಂದ ಅದು ಬಳಕೆಗೆ ಬಂತು.
19 ನೇ ಶತಮಾನದಲ್ಲಿ ಅಂದರೆ 1890 ರಿಂದ 1970 ರ ವರೆಗೆ ವಾಣಿಜ್ಯ ಉದ್ದೇಶದ ಪ್ಯಾಕಿಂಗ್ ಉದ್ಯಮದಲ್ಲಿ ಹೆಚ್ಚು ಬಳಕೆಯಲ್ಲಿದ್ದ ಅಂಟು ಈ ಮೈದಾ ಅಂಟು ಕಾಲ ಕ್ರಮೇಣ ಕೃತಕ ಗೊಂದು - ಅಂಟುಗಳಿಂದ ಮತ್ತು ಪ್ಲಾಸ್ಟಿಕ್ ಗಮ್ ಟೇಪ್ ಗಳಿಂದ ಈಗ ಬದಲಾಗಿದೆ.
ಮೈದಾ ಹಿಟ್ಟು ತಯಾರಾಗುವುದೇ ಗೋದಿಯಿಂದ, ಗೋದಿಯ ಹೊರ ಸಿಪ್ಪೆ, ತೌಡುಗಳ ಸಮೇತ ಆಗುವ ಗೋದಿ ಹಿಟ್ಟು (ಅಟ್ಟಾ) ಆಹಾರ ಬಳಕೆಯ ಗೋದಿ ಹಿಟ್ಟು ಆದರೆ, ಗೋದಿಯ ಹೊರ ಸಿಪ್ಪೆಯ ಕವಚ ಮತ್ತು ತೌಡುಗಳನ್ನು ಬೇರ್ಪಡಿಸಿ ಗೋದಿ ಕಾಳಿನ ಒಳಬಾಗದ ಬಿಳಿ ತಿರುಳಿನ ಪುಡಿಯೇ ಮೈದಾ ಹಿಟ್ಟು.
ಇದಕ್ಕೆ 3000 ಸಾವಿರ ವರ್ಷದ ಇತಿಹಾಸ ಇದೆ, ಇದು ಭಾರತಕ್ಕೆ ಮುಸ್ಲಿ೦ ವ್ಯಾಪಾರಿಗಳಿಂದ ಪರೋಟ ನಾನ್ ತಯಾರಿಗಾಗಿ ಬಂದಿತಂತೆ. ಎರಡನೆ ಮಹಾಯುದ್ಧ ಕಾಲದಲ್ಲಿ ಆಹಾರ ಕೊರತೆಯಿಂದ ಮೈದಾ ಹಿಟ್ಟಿನ ಬಳಕೆ ಹೆಚ್ಚಾಗಿದೆ ಮತ್ತು ಇದು ಜನಪ್ರಿಯ ಆಯಿತು.
ಮೈದಾ ಹಿಟ್ಟಿನ ಹೆಚ್ಚು ಬಳಕೆ ಪರೋಟ ನಾನ್ ಮತ್ತು ಬೇಕರಿ ಉದ್ಯಮದ ಕೇಕ್ ಮತ್ತು ಬ್ರೆಡ್ ನಲ್ಲಿ ಬಳಕೆ ಇದೆ, ಹೆಚ್ಚು ಮೈದಾ ಬಳಕೆಯಿಂದ ಮನುಷ್ಯ ದೇಹದ ಪ್ಯಾಂಕ್ರಿಯಾಸ್ ನ ಬೇಟಾ ಸೆಲ್ ಗಳು ಹಾಳಾಗುವುದರಿಂದ ಇನ್ಸುಲಿನ್ ಉತ್ಪಾದನೆ ಏರು ಪೇರು ಆಗಿ ಡಯಾಬಿಟೀಸ್ ಗೆ ಕಾರಣ ಆಗುತ್ತದೆಂಬ ಸಂಶೋಧನಾ ವರದಿಗಳಿದೆ.
ಯುರೋಪಿನಲ್ಲಿ ಲಿಕ್ಕರ್ ಮತ್ತು ನೈಟ್ ಕ್ಲಬ್ ಪ್ರಚಾರಕ್ಕಾಗಿ ಫೋಸ್ಟರ್ ಗಳನ್ನು ಅ೦ಟಿಸಲು ಮೈದಾ ಹಿಟ್ಟಿನ ಅಂಟಿನ ಬಳಕೆ ಮಾಡಿರುವುದು ಮೈದಾ ಹಿಟ್ಟಿನ ಅಂಟಿನ ಮೊದಲ ಬಳಕೆ ಆಗಿದೆ.
ನಂತರ ಸಿನಿಮಾ ರಾಜಕೀಯ ವಾಣಿಜ್ಯ ಪ್ರಚಾರಕ್ಕಾಗಿ, ಅಂಚೆ ಸ್ಟಾಂಪ್ ಗಳಲ್ಲಿ ವಿಶ್ವದಾದ್ಯಂತ ಮತ್ತು ಭಾರತದಲ್ಲಿ ಮೈದಾ ಹಿಟ್ಟಿನ ಅಂಟು ಬಳಕೆಯಲ್ಲಿತ್ತು.
ಆದ್ದರಿಂದಲೇ ವಿದೇಶದಲ್ಲಿ ಮೈದಾ ಹಿಟ್ಟಿಗೆ All Purpose Flour ಎಂಬ ಹೆಸರಿದೆ.
ಈಗ ರಾಸಾಯನಿಕ, ಬ್ಲೀಚಿಂಗ್ ಬಳಸಿ ತಯಾರಿಸುವ ಮೈದಾ ಹಿಟ್ಟು ಮತ್ತು ಕಲಬೆರಕೆಯ ಮೈದಾ ಹಿಟ್ಟುಗಳ ಬಳಕೆ ಹೆಚ್ಚಾಗಿದೆ ಇದರಿಂದ ಜನರ ಆರೋಗ್ಯದ ಅನಾಹುತಾ ಪರಿಣಾಮಗಳು ಕೂಡ.
Comments
Post a Comment