#ಅಡಿಕೆ_ವಿಶೇಷ
#ನರೇಂದ್ರ_ಮೋದಿ
ಮಲೆನಾಡಿನ ಅಡಿಕೆಯ ಹಾಳೆ ತಟ್ಟೆಗೆ ಪ್ರದಾನಿ ನರೇಂದ್ರ ಮೋದಿ ರಾಯಬಾರಿ.
#modi #PrimeMinisterOfIndia #narendramodipmindia #NarendraModi #arecanut #BJPGovernment #malenadu #shivamogga #sagar #KarnatakaBJP #govtofindia #govtofkarnataka #agricultureworldwide #cancerawareness
ಅಡಿಕೆ_ಬೆಳೆಗಾರರ_ಸಮಾವೇಶ
ಸಾಗರದಲ್ಲಿ ಇದೇ 6 ಡಿಸೆಂಬರ್ 2024 ರಂದು ನಡೆಯಲಿರುವ ಅಡಿಕೆ ಬೆಳೆಗಾರರ ಸಮಾವೇಶದ ಸಂದರ್ಭದಲ್ಲಿನ ಸರಣಿ ಲೇಖನಗಳ ಭಾಗ-7.
ಪ್ರಧಾನಿ ನರೇಂದ್ರ ಮೋದಿ ಅಡಿಕೆ ಹಾಳೆ ತಟ್ಟೆಯಲ್ಲಿ ಕಚೋರಿ ತಿನ್ನುವ
ಈ ಚಿತ್ರ ಅನೇಕ ಸಂದೇಶ ನೀಡಿದೆ.
ಮಲೆನಾಡಿನ ಅಡಿಕೆಯ ಹಾಳೆ ತಟ್ಟೆಗೆ ಪ್ರದಾನಿ ನರೇಂದ್ರ ಮೋದಿ ರಾಯಬಾರಿ.
ಅಡಿಕೆ ಬೆಳಗಾರರಿಗೆ, ಅಡಿಕೆ ಹಾಳೆ ತಟ್ಟೆ ತಯಾರಿಕೆ ಮಾಡುವವರಿಗೆ, ಪರಿಸರ ಸ್ನೇಹಿ ಮತ್ತು ಪ್ಲಾಸ್ಟಿಕ್ ವಿರೋದಿಗಳಿಗೆ ಪ್ರದಾನ ಮಂತ್ರಿಗಳ ಈ ಪಟ ಅನೇಕ ಸಂದೇಶ ಮತ್ತು ಪ್ರೋತ್ಸಾಹಕ್ಕೆ ವಿಶೇಷವಾಗಿ ಮಲೆನಾಡಿಗರ ಸಂತೋಷಕ್ಕೆ ಕಾರಣವಾಗಿದೆ
ಪಶ್ಚಿಮ ಘಟ್ಟ ಶ್ರೇಣಿಯ ಅಡಿಕೆ ಉಪ ಉತ್ಪನ್ನ ಹಾಳೆ ತಟ್ಟೆ ದಿನದಿಂದ ದಿನಕ್ಕೆ ತನ್ನ ಬೇಡಿಕೆ ವೃದ್ಧಿಸಿಕೊಳ್ಳುತ್ತಿದೆ.
ಈ ಸಂದಭ೯ದಲ್ಲಿ ನಮ್ಮ ದೇಶದ ಪ್ರದಾನ ಮಂತ್ರಿ ಅಡಿಕೆ ಹಾಳೆ ತಟ್ಟೆಯಲ್ಲಿ ಗುಜರಾತನ ಪ್ರಸಿದ್ದ ತಿನಿಸು ಕಚೋರಿ ಸೇವಿಸುವ ಈ ಪಟ ಅಡಿಕೆ ಹಾಳೆ ತಟ್ಟೆಗೆ ಇನ್ನೂ ಹೆಚ್ಚಿನ ಪ್ರಚಾರಕ್ಕೆ ಕಾರಣವಾಗಿದೆ.
ಅಡಿಕೆ ಬೆಳೆಗಾರರಿಗೆ ಈ ಪಟ ಅತ್ಯಂತ ನೆಚ್ಚಿನದ್ದಾಗಿದೆ.
ಗುಜರಾತ್ ರಾಜ್ಯದಲ್ಲಿ ಗುಟ್ಕಾ ನಿಷೇಧ ಜಾರಿ ಮಾಡಿದ್ದು ನರೇಂದ್ರ ಮೋದಿಗಳು ಅಲ್ಲಿನ ಮುಖ್ಯಮಂತ್ರಿ ಆದ ಅವದಿಯಲ್ಲಿ.
ಅವರು ಗುಜರಾತಿನ ಗುಟ್ಕಾ ಉದ್ಯಮದ ಹಿತ ಕಾಪಾಡಲು ಶೇಕಡಾ 100% ರಪ್ತು ಆದಾರಿತ ಗುಟ್ಕಾ ಘಟಕಗಳು ನಿಷೇದದಿಂದ ವಿನಾಯಿತಿ ನೀಡಿದ್ದಾರೆ.
ದೇಶದಲ್ಲಿ ಅತಿ ಹೆಚ್ಚಿನ ಗುಟ್ಕಾ ತಿನ್ನುವವರು ಗುಜರಾತಿಗಳು ಆದ್ದರಿಂದ ದೇಶದ ಪ್ರಧಾನಿಗಳಿಗೆ ಅಡಿಕೆ ಬೆಳೆಗಾರರ ಸಮಸ್ಯೆಗಳು ಸಂಪೂರ್ಣ ತಿಳಿದಿದೆ ಎಂಬುದಕ್ಕೆ ಮೇಲಿನ ಎರೆಡು ಉದಾಹರಣೆ ಇಲ್ಲಿ ಉಲ್ಲೇಖಿಸಲಾಗಿದೆ.
ದೇಶದ ಅತಿ ದೊಡ್ಡ ವಾಣಿಜ್ಯ ಬೆಳೆ ಅಡಿಕೆಗೆ ವಿಶ್ವ ಮಟ್ಟದಲ್ಲಿ ಈ ರೀತಿಯ ಕ್ಯಾನ್ಸರ್ ಕಾರಕ ಎಂಬ ದೃಡೀಕರಣದಿಂದ ಅಡಿಕೆ ಹೊರತರಲು ಕಷ್ಟವೇ?
ಕೇಂದ್ರ ಸರ್ಕಾರವೇ ಅಡಿಕೆ ಕ್ಯಾನ್ಸರ್ ಕಾರಕವಲ್ಲ ಎಂಬ ಸಂಶೋದನೆ ಮಾಡಿಸಲು ಯಾಕೆ ಮುಂದೆ ಬರುತ್ತಿಲ್ಲ? ಈ ಪ್ರಶ್ನೆ ದೇಶದ ಎಲ್ಲಾ ಅಡಿಕೆ ಬೆಳೆಗಾರರ ಮನಸಿನಲ್ಲಿ ಮೂಡಿದೆ.
Comments
Post a Comment