#ಅಡಿಕೆ_ವಿಶೇಷ
#ಅಡಿಕೆ_ಬೆಳೆಗಾರರ_ಸಮಾವೇಶ
ಸಾಗರದಲ್ಲಿ ಇದೇ 6 ಡಿಸೆಂಬರ್ 2024 ರಂದು ನಡೆಯಲಿರುವ ಅಡಿಕೆ ಬೆಳೆಗಾರರ ಸಮಾವೇಶದ ಸಂದರ್ಭದಲ್ಲಿನ ಸರಣಿ ಲೇಖನಗಳ ಭಾಗ 6
ನಮ್ಮ ದೇಶದಲ್ಲಿ ಬಹುತೇಕ ಎಲ್ಲಾ ರಾಜ್ಯಗಳು ಗುಟ್ಕಾ ರದ್ದು ಮಾಡಿದೆ ಅದರ ವಿರುದ್ದ ಆಯಾ ರಾಜ್ಯದ ಉಚ್ಚ ನ್ಯಾಯಾಲಯಗಳಲ್ಲಿ ಸಲ್ಲಿಸಿದ ಮೇಲ್ಮನವಿಗಳನ್ನ ಉಚ್ಚ ನ್ಯಾಯಾಲಯಗಳು ತಿರಸ್ಕರಿಸಿ ಗುಟ್ಕಾ ರದ್ದು ಆದೇಶ ಎತ್ತಿ ಹಿಡಿದಿದೆ.
ಹಾಗಂತ ಗುಟ್ಕಾ ಸಂಪೂರ್ಣ ರದ್ದಾಗಿದೆಯಾ? ಖಂಡಿತಾ ಇಲ್ಲ ಗುಟ್ಕಾ ಕಂಪನಿಗಳು ಹೊಸ ಉಪಾಯ ಕಂಡುಕೊಂಡಿದೆ ಅದೇನೆಂದರೆ ಎರೆಡು ಪ್ರತ್ಯೇಕ ಪೊಟ್ಟಣ ನೀಡುತ್ತದೆ ಒಂದರಲ್ಲಿ ತಂಬಾಕು ರಹಿತ ಬೇರೆ ಎಲ್ಲಾ ಮಸಾಲೆ ಮಿಶ್ರ ಮಾಡಿದ ಅಡಿಕೆ ಪೊಟ್ಟಣ ಇನ್ನೊಂದು ಸಣ್ಣ ಪೊಟ್ಟಣದಲ್ಲಿ ತಂಬಾಕು ಜರ್ದಾ.
ಈ ರೀತಿ ಗುಟ್ಕಾ ನಿಷೇಧ ಆಯಾ ಗುಟ್ಕಾ ತಯಾರಿಕಾ ಕಂಪನಿಗೆ ಏನೂ ಮಾಡಲಾಗಿಲ್ಲ.
ಗುಟ್ಕಾ ಜಾಹಿರಾತು ನಿಷೇದ ಮಾಡಿದ್ದರಿಂದ ಆಯಾ ಗುಟ್ಕಾ ಕಂಪನಿಗಳು ತಮ್ಮದೇ ಬ್ರಾಂಡಿನ ಪಾನ್ ಮಸಾಲ ಜಾಹಿರಾತು ನೀಡುತ್ತಿದೆ.
ಈ ಗುಟ್ಕಾ ಕಂಪನಿಗಳೇ ಅಡಿಕೆಯ ಬಹುದೊಡ್ಡ ಖರೀದಿದಾರ ಎಂಬ ಪ್ರಚಾರವಿದೆ ಆದ್ದರಿಂದಲೇ ಅಡಿಕೆ ವ್ಯಾಪಾರಸ್ಥರು ಇದನ್ನೇ ಅಡಿಕೆ ಬೆಳೆಗಾರರ ಮನಸ್ಸಿನಲ್ಲಿ ತುಂಬಿದ್ದಾರೆ.
ಅನೇಕ ಸಂದರ್ಭಗಳಲ್ಲಿ ಅಡಿಕೆ ಬೆಳೆಗಾರರ ಸಮಾವೇಶಗಳು ಗುಟ್ಕಾ ಮಾರಾಟ ಕಂಪನಿಗಳ ಪ್ರಾಯೋಜಕತ್ವ ಪಡೆಯುತ್ತಿದೆ.
ಗುಟ್ಕಾ ತುಂಬಾಕು ಮಿಶ್ರಣದಿಂದ ಕ್ಯಾನ್ಸರ್ ಬರುತ್ತದೋ? ಅಡಿಕೆಯಿಂದ ಕ್ಯಾನ್ಸರ್ ಬರುತ್ತದೋ? ಎನ್ನುವ ಪ್ರಶ್ನೆಗೆ ಗುಟ್ಕಾ ತಂಬಾಕು ಎಂದು ಹೇಳದಂತ ವ್ಯವಸ್ಥೆ ಮಾಡಲಾಗಿದೆ.
ಅಡಿಕೆ ಬೆಳೆಗಾರರ ಬಗ್ಗೆ ಅಷ್ಟೆಲ್ಲ ಕಾಳಜಿ ಹೊಂದಿರುವ ಗುಟ್ಕಾ ಕಂಪನಿಗಳು ಅಡಿಕೆ ಕ್ಯಾನ್ಸರ್ ಕಾರಕ ಅಲ್ಲ ಎಂಬ ಸಂಶೋದನೆಗೆ ಯಾಕೆ ಹಣ ನೀಡಬಾರದು?.
ಮುಂದಿನ ದಿನಗಳಲ್ಲಿ ಅಡಿಕೆ ಬಳಸದೇ ತಯಾರಾಗುವ ಗುಟ್ಕಾ ಹೊರಬರಲಿದೆ ಎಂಬ ವದಂತಿ ಇದೆ ಗುಟ್ಕಾದಲ್ಲಿ ಬಳಸುವ ತಂಬಾಕು ಜರ್ದಾನೇ ಅವರಿಗೆ ಮುಖ್ಯ.
#ಗುಟ್ಕಾ_ನಿಷೇದ
ನಮ್ಮ ದೇಶದಲ್ಲಿ ಗುಟ್ಕಾ ಸಂಪೂರ್ಣ ನಿಶೇದ ಮಾಡಿದ ರಾಜ್ಯಗಳು ಮತ್ತು ಆದೇಶದ ದಿನಾಂಕದ ಮಾಹಿತಿ
ಅಂಡಮಾನ್ ಮತ್ತು ನಿಕೋಬಾರ್ 1 ನವೆಂಬರ್ 2012 .
ಆಂಧ್ರಪ್ರದೇಶ 9 ಜನವರಿ 2013 .
ಅರುಣಾಚಲ ಪ್ರದೇಶ
ಅಸ್ಸಾಂ
ಬಿಹಾರ 30 ಮೇ 2012.
ಈ ಕಾನೂನನ್ನು ಪಾಟ್ನಾ ಹೈಕೋರ್ಟ್ ಎತ್ತಿ ಹಿಡಿದಿತ್ತು .
ಚಂಡೀಗಢ
ಛತ್ತೀಸ್‌ಗಢ 24 ಜುಲೈ 2012 .
ದೆಹಲಿ 11 ಸೆಪ್ಟೆಂಬರ್ 2012. ಅಕ್ಟೋಬರ್ 2012 ರಂದು, ನಗರ ಮೂಲದ ಗುಟ್ಕಾ ತಯಾರಕರ ಮನವಿಗೆ ಪ್ರತಿಕ್ರಿಯೆಯಾಗಿ ದೆಹಲಿ ಹೈಕೋರ್ಟ್ ನಿಷೇಧವನ್ನು ತೆಗೆದುಹಾಕಲು ನಿರಾಕರಿಸಿತು.
ಗೋವಾ 2 ಅಕ್ಟೋಬರ್ 2005.
ಗುಜರಾತ್ 11 ಸೆಪ್ಟೆಂಬರ್ 2012. 100% ರಫ್ತು ಆಧಾರಿತ ಘಟಕಗಳು ನಿಷೇಧದಿಂದ ವಿನಾಯಿತಿ ಪಡೆದಿವೆ.
ಹಿಮಾಚಲ ಪ್ರದೇಶ 13 ಜುಲೈ 2012 .
ಹರಿಯಾಣ 15 ಆಗಸ್ಟ್ 2012
ಜಾರ್ಖಂಡ್ 24 ಜುಲೈ 2012 .
ಕೇರಳ 25 ಮೇ 2012.
ಆಗಸ್ಟ್ 2012 ರಂದು, ಕೇರಳ ಹೈಕೋರ್ಟ್ ನಿಷೇಧವನ್ನು ತಡೆಯಲು ನಿರಾಕರಿಸಿತು.
ಕರ್ನಾಟಕ 31 ಮೇ 2013.
ಮಧ್ಯಪ್ರದೇಶ 1 ಏಪ್ರಿಲ್ 2012
ಈ ಕಾನೂನನ್ನು ಮಧ್ಯಪ್ರದೇಶ ಹೈಕೋರ್ಟ್ ಎತ್ತಿ ಹಿಡಿದಿತ್ತು .
ಮಹಾರಾಷ್ಟ್ರ 20 ಜುಲೈ 2012.
ಈ ಹಿಂದೆ 1 ಆಗಸ್ಟ್ 2002 ರಂದು ಮತ್ತು 2008 ರಲ್ಲಿ ಗುಟ್ಕಾ ಮೇಲಿನ ನಿಷೇಧವನ್ನು ಸುಪ್ರೀಂ ಕೋರ್ಟ್ ಅನ್ಯಾಯದ ವ್ಯಾಪಾರ ಅಭ್ಯಾಸದ ಆಧಾರದ ಮೇಲೆ ರದ್ದುಗೊಳಿಸಿತು.
ತೀರಾ ಇತ್ತೀಚಿನ ನಿಷೇಧವನ್ನು ಬಾಂಬೆ ಹೈಕೋರ್ಟ್ 15 ಸೆಪ್ಟೆಂಬರ್ 2012 ರಂದು ಎತ್ತಿಹಿಡಿದಿದೆ.
ಮಣಿಪುರ
ಮಿಜೋರಾಂ 18 ಅಕ್ಟೋಬರ್.
ನಾಗಾಲ್ಯಾಂಡ್
ಒಡಿಶಾ 1 ಜನವರಿ 2013 .
ಪಂಜಾಬ್ 26 ಆಗಸ್ಟ್ 2012.
ರಾಜಸ್ಥಾನ 18 ಜುಲೈ 2012 .
ಸಿಕ್ಕಿಂ 17 ಸೆಪ್ಟೆಂಬರ್ 2012
ತಮಿಳುನಾಡು 8 ಮೇ 2013.
ಉತ್ತರ ಪ್ರದೇಶ 1 ಏಪ್ರಿಲ್ 2013.
ಉತ್ತರಾಖಂಡ 1 ಜನವರಿ 2013.
ಪಶ್ಚಿಮ ಬಂಗಾಳ 1 ಮೇ 2013.
Comments
Post a Comment