Blog number 1766. ಅವಸಾನದ ಅಂಚಿನಲ್ಲಿದೆ ಮಲೆನಾಡು ಗಿಡ್ಡ ಗೋತಳಿ, ದೇಶಿ ತಳಿ ಜಾನುವಾರು ಸಂರಕ್ಷಣೆ ಯೋಜನೆಯು ಸಾದಿಸಿದ್ದೇನು? ಬ್ಯಾಂಕುಗಳ ಅಸಹಕಾರ ಸರಿಯಾದೀತೆ?
#ಮಲೆನಾಡು_ಗಿಡ್ಡ_ದನದ_ತುಪ್ಪಕ್ಕೆ_ಬಾರೀ_ಬೆಲೆ_ಬಂದಿದೆ
#ಮಲೆನಾಡು_ಗಿಡ್ಡ_ದನದ_ಹಾಲಿನ_A2_ಸೋಪಿಗೆ_ಬಾರೀ_ಬೇಡಿಕೆ
#ಮಲೆನಾಡು_ಗಿಡ್ಡದ_ಸಗಣಿ_ಮೂತ್ರಕ್ಕೂ_ಬೇಡಿಕೆ
#ಮೃತ_ಮಲೆನಾಡು_ಗಿಡ್ದದಿಂದ_ಗೊಬ್ಬರ_ಕೂಡ
#ಮಲೆನಾಡು_ಗಿಡ್ದ_ಇದ್ದರೂ_ಸಾವಿರ_ಸತ್ತರೂ_ಸಾವಿರ_ಎಂಬ_ಗಾದೆ_ಮಾತು.
#ಹೀಗಿದ್ದೂ
#ಮಲೆನಾಡು_ಗಿಡ್ಡ_ತಳಿ_ಉಳಿದೀತೆ?
#ಮಲೆನಾಡು_ಗಿಡ್ಡ_ತಳಿ_ಅವಸಾನದ_ಅಂಚನಲ್ಲಿದೆ.
#ದೇಶಿತಳಿ_ಜಾನುವಾರು_ಸಂರಕ್ಷಣೆಗೆ_ಸರ್ಕಾರದ_ದೊಡ್ಡ_ದೊಡ್ಡ_ಘೋಷಣೆ
#ಆದರೆ_ಬ್ಯಾಂಕುಗಳು_ಮಲೆನಾಡು_ಗಿಡ್ಡಕ್ಕೆ_ಸಾಲ_ನೀಡುವುದಿಲ್ಲ.
ನಮ್ಮ ಬಾಲ್ಯದಲ್ಲಿ ನಮ್ಮ ಕೊಟ್ಟೆಗೆ ತುಂಬಾ ಮಲೆನಾಡು ಗಿಡ್ದ ಜಾನುವಾರುಗಳೇ ತುಂಬಿತ್ತು ಅದರಲ್ಲಿ ಗಿಡ್ಡಿ ಎಂಬ ದನ ತುಂಬಾ ಸಾದು ಅದರ ಎದುರು ಕುಳಿತರೆ ನಮ್ಮ ತಲೆ ನೆಕ್ಕಲು ಪ್ರಾರಂಬಿಸಿ ಕೆಚ್ಚಲಿನಲ್ಲಿ ಹಾಲು ಸುರಿಸುತ್ತಿತ್ತು ಇದರ ಸ್ವಭಾವಕ್ಕೆ ವಿರುದ್ದವಾದ ಬೋಳಿ ಎಂಬ ತುಡುಗಿನ ದನವೂ ಇತ್ತು, ಬೋಳಿ ಅಂತ ಹೆಸರು ಬರಲು ಕಾರಣ ಅದಕ್ಕೆ ಮುರುಟಿಕೊಂಡ ಚಿಕ್ಕ ಕೋಡುಗಳು.
ಆಗೆಲ್ಲ ಈಗಿನ ಕಾಲದಂತ ಬೇಲಿಗಳು ಅಪರೂಪ ರೈತರು ಕಾಡಿನಿಂದ ಮರದ ಗೂಟ, ಬಳ್ಳಿ, ಪರಗಿ ಹಣ್ಣಿನ ಮುಳ್ಳು , ಬಿದಿರು ಮುಳ್ಳು ಸಂಗ್ರಹಿಸಿ ಎತ್ತಿನ ಗಾಡಿಯಲ್ಲಿ ತಂದು ಪ್ರತಿ ವರ್ಷ ಬೇಲಿ ಕಟ್ಟುತ್ತಿದ್ದರು ಅಂತಹ ಬೇಲಿ ಹಾರಿ ನಮ್ಮ ಬೋಳಿ ದನ ಪಸಲು ತಿನ್ನುತ್ತಿತ್ತು, ಏನೇ ಮಾಡಿದರೂ ಅದನ್ನು ಹಿಡಿಯಲು ಸಾಧ್ಯವೇ ಆಗುತ್ತಿರಲಿಲ್ಲ.
ಮನೆಯಲ್ಲೂ ನಮ್ಮ ತಾಯಿ ಬಿಟ್ಟು ಬೇರೆಯವರಿಗೆ ಹಾಲು ಕರೆಯಲು ಬಿಡುತ್ತಿರಲಿಲ್ಲ,ಒದೆಯುವ ಹವ್ಯಾಸ ಅದರದ್ದು ಒಮ್ಮೆ ನಮ್ಮ ಊರಿನ ಬಾಬುಲ್ ಸಾಹೇಬರ ತಂದೆ ನಮ್ಮ ಮನೆ ಹತ್ತಿರ ಬಂದು ನಿಮ್ಮ ಬೋಳಿ ದನ ಬಂದೋ ಬಸ್ತು ಮಾಡ್ತಿರೋ ಇಲ್ವೋ? ಅಂತ ಗಲಾಟೆ ಶುರು ಮಾಡಿದ್ದರು.
ಪ್ರತಿದಿನ ಸಂಜೆ ನಮ್ಮ ಜಾನುವಾರುಗಳನ್ನು ಕೊಟ್ಟಿಗೆಯಲ್ಲಿ ಕಟ್ಟುವ ಕೆಲಸ ನನ್ನದೆ ಆದ್ದರಿಂದ ಬೋಳಿ ದನ ನಾನು ಕಟ್ಟಿ ಹಾಕಿದ್ದ ನೆನಪು ಆದರೆ ಸಾಹೇಬರು ನನ್ನ ಸಮರ್ಥನೆ ಒಪ್ಪಲೇ ಇಲ್ಲ "ನಡಿ ತೋರಿಸು ನಿನ್ನ ಕೊಟ್ಟಿಗೆ" ಅಂದಾಗ ಅವರನ್ನು ನಮ್ಮ ಕೊಟ್ಟಿಗೆಗೆ ಕರೆದುಕೊಂಡು ಹೋಗಿದ್ದೆ.
ಅಲ್ಲಿ ನಮ್ಮ ಬೋಳಿ ಒಣ ಹುಲ್ಲು ಮೆಲಕು ಹಾಕುತ್ತಾ ಮಲಗಿತ್ತು ಇದನ್ನು ನೋಡಿ ಸಾಹೇಬರು ಈಗಷ್ಟೆ ಬೋಳಿ ದನ ಹಿಡಿದು ಕಟ್ಟಿಹಾಕಿದ್ದೆ ಅಧ್ಯಾವುದು? ಅಂತ ತಲೆ ಕೆರೆದು ಕೊಂಡರು ಅವರು ಹಿಡಿದು ಹಾಕಿದ್ದು ನಮ್ಮ ಬೋಳಿ ತದ್ರೂಪದ ಬೇರೆ ದನ.
ಶರಾವತಿ ನದಿ ಆಣೆಕಟ್ಟಿನಿಂದ ನಿರಾಶ್ರಿತರಾದ ಕುಟುಂಬಗಳು ಬೇರೆ ಊರಿಗೆ ಸ್ಥಳಾಂತರ ಆಗುವಾಗ ಈ ಮಲೆನಾಡು ಗಿಡ್ದ ಸ್ಥಳಾಂತರಕ್ಕೆ ತುಂಬಾ ಕಷ್ಟ ಪಟ್ಟಿದ್ದರು ಅವುಗಳಲ್ಲಿ ಸ್ಥಳಾಂತರಿಸಲು ಸಾಧ್ಯವಾಗದೆ ಉಳಿದದ್ದು ಆಣೆ ಕಟ್ಟಿನ ಹಿನ್ನಿರಿನ ನಡುಗಡ್ಡೆಗಳಲ್ಲಿ ಕಾಡು ದನಗಳಾಗಿ ಉಳಿದುಬಿಟ್ಟಿದೆ.
ಆಗೆಲ್ಲ ಬೆಳಿಗ್ಗೆ ಹಾಲು ಕರೆದು ಕೊಟ್ಟಿಗೆಯಿಂದ ಹೊರಬಿಟ್ಟರೆ ಕಾಡಿನಲ್ಲಿ ಹುಲ್ಲು ಮೇಯ್ದು ಸಂಜೆ ಕೊಟ್ಟಿಗೆ ಸೇರಿ ಹಾಲು ನೀಡುವ ಮಲೆನಾಡು ಗಿಡ್ಡ ದನಗಳು ಕೆಲವೊಮ್ಮೆ ಕಾಡಿನಲ್ಲಿ ಕರ ಹಾಕಿದರೆ ಮರುದಿನ ಕರುವಿನ ಜೊತೆ ಊರು ಸೇರುವ ಮಲೆನಾಡು ಗಿಡ್ದ ತಾಯಿ ಕರು ನೋಡುವುದೇ ಒಂದು ಸೊಗಸು ಆಗಿರುತ್ತಿತ್ತು.
1990 ರಲ್ಲಿ ಈ ಮಲೆನಾಡು ಗಿಡ್ಡದಿಂದ ಪ್ರಯೋಜನ ಇಲ್ಲ ಮಲೆನಾಡು ಗಿಡ್ದಕ್ಕೆ ಕೃತಕ ಗರ್ಭಧಾರಣೆ ಮಾಡಿ ಜೆರ್ಸಿ ತಳಿ ಅಭಿವೃದ್ಧಿ ಮಾಡಿ ಹಾಲಿನ ಉತ್ಪಾದನೆಯಿಂದ ಲಾಭ ಪಡೆಯಲು ರೈತರಿಗೆ ಪ್ರೋತ್ಸಾಹಿಸುವ ನಮ್ಮ ಊರಿನ ಮುಂಬಾಳಿನ ಗೋಕುಲ್ ಪಾರಂನ ಫಾದರ್ ಡಾಕ್ಟರ್ ಜೋಸೆಪ್ ಯೋಜನೆಯೊಂದು ಪ್ರಾರಂಬಿಸಿ ಉಚಿತ ಕೃತಕದಾರಣೆ ಕೇಂದ್ರ ಪ್ರಾರಂಬಿಸಿದ್ದಾಗ ನಾನು "ಮಲೆನಾಡು ಗಿಡ್ದ ತಳಿ ಉಳಿಯಲಿ" ಎಂಬ ಒಕ್ಕಣೆಯ ಕರ ಪತ್ರ ಪ್ರಕಟಿಸಿ ಹಂಚಿದ್ದೆ.
ಈಗ ದೇಶಿ ತಳಿ ಸಂವರ್ಧನಾ ಕಾರ್ಯಕ್ರಮ ಸರ್ಕಾರ ಘೋಷಿಸಿ ಕೆಲ ವರ್ಷಗಳಾಗಿದೆ ಆದರೆ ರಾಷ್ಟ್ರೀಕೃತ ಬ್ಯಾಂಕ್ ಗಳು ದೇಶಿ ತಳಿ ಮಲೆನಾಡು ಗಿಡ್ಡ ಸಾಕಲು ಸಾಲ ನೀಡುವುದಿಲ್ಲ !!.
ಪಶ್ಚಿಮ ಘಟ್ಟದ ಶಿವಮೊಗ್ಗ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ, ಚಿಕ್ಕಮಗಳೂರು ಜಿಲ್ಲೆಯ ಈ ವಿಶೇಷ ತಳಿಯ ಜಾನುವಾರಿಗೆ ಅವುಗಳ ಸಣ್ಣ ಆಕೃತಿಗಾಗಿ ಸ್ಥಳಿಯರು #ಮಲೆನಾಡು_ಗಿಡ್ಡ ಎಂದೇ ಕರೆಯುತ್ತಿದ್ದರಿಂದ ಇದೇ ಹೆಸರು ಈ ತಳಿಗೆ ಉಳಿಯಿತು ಮತ್ತು ನ್ಯಾಷನಲ್ ಬ್ಯೂರೋ ಆಫ್ ಎನಿಮಲ್ ಜೆನಿಟಿಕ್ ಸಿಸೋರ್ಸ್ಸ್ ಪಟ್ಟಿಯಲ್ಲಿ ಕೂಡ ಮಲೆನಾಡು ಗಿಡ್ಡ ತಳಿ ಎಂದೇ ನಮೂದಾಗಿದೆ.
ಮನುಷ್ಯ ದೇಹಕ್ಕೆ ಬೇಕಾದ ಲ್ಯಾಕ್ಟೋಪೆರಿಸ್ ಈ ತಳಿಯಲ್ಲಿ ಯಥೇಚ್ಚವಾಗಿರುವುದು, ಇದರ ಸಂಗೋಪನ ವೆಚ್ಚ ಅತ್ಯಂತ ಕಡಿಮೆ, ಹೆಚ್ಚು ವರ್ಷ ಬದುಕುವ ಹೆಚ್ಚು ಕರು ಹಾಕುವ ಈ ತಳಿಯ ಸಂರಕ್ಷಣೆಗೆ ಸಕಾ೯ರ ಸಂಘ ಸಂಸ್ಥೆಗಳು ಮತ್ತು ಮಠಾದೀಶರು ಹೆಚ್ಚು ಪ್ರಚಾರ ನೀಡುತ್ತಿದ್ದಾರೆ.
ಆದರೆ 2007ರಲ್ಲಿ ಜಾನುವಾರು ಗಣತಿಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 6 ಲಕ್ಷದಷ್ಟಿದ್ದ ಮಲೆನಾಡು ಗಿಡ್ದ,2012ರ ಜಾನುವಾರು ಸಮೀಕ್ಷೆಯಲ್ಲಿ 4.45 ಲಕ್ಷಕ್ಕೆ ಇಳಿದಿದೆ ಅಷ್ಟೇ ಅಲ್ಲ ಪ್ರತಿ ವರ್ಷ 50 ಸಾವಿರ ಕಡಿಮೆ ಆಗುತ್ತಿದೆ ಎಂಬ ಮಾಹಿತಿ ಇದೆ.
ಕರಾವಳಿಯ ಗೆಳೆಯರೋರ್ವರ #ತ್ರಿಮದುರಾ_ದೇಶಿಯಾ_ಪಾರ್ಮ್ (ಸಂಪರ್ಕ7353329900)
ಮಲೆನಾಡು ಗಿಡ್ಡ ಜಾನುವಾರುಗಳಿಂದ ಅತ್ಯುತ್ತಮ ಗುಣಮಟ್ಟದ ಗೋಉತ್ಪನ್ನಗಳನ್ನು ದೇಶದಾದ್ಯಂತ ಮಾರುಕಟ್ಟೆಗೆ ಅತ್ಯುತ್ತಮ ಪ್ಯಾಕಿಂಗ್ ನಲ್ಲಿ ಪರಿಚಯಿಸುತ್ತಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
https://arunprasadhombuja.blogspot.com/2023/08/blog-number-1711.html
ಇದಕ್ಕಾಗಿ ಮಲೆನಾಡು ಗಿಡ್ಡ ಸಂಗೋಪನೆಗೆ ಆಸಕ್ತರು ಮುಂದೆ ಬರುತ್ತಿದ್ದಾರೆ, ಈ ತಳಿಯ ಮೂತ್ರ, ಸಗಣಿ ಕೂಡ ಸದ್ಬಳಕೆ ಮಾಡುತ್ತಾರೆ.
ಆದರೆ ಅವರು ನಿನ್ನೆ ಹೇಳಿದ್ದು ಕೇಳಿ ಆಶ್ಚಯ೯ ಆಯಿತು ಏನೆಂದರೆ ಬ್ಯಾಂಕ್ ಗಳು ಡೈರಿಗಾಗಿ ಈ ತಳಿ ಸಾಗಾಣಿಕೆಗಾಗಿ ಸಾಲ ಮಾತ್ರ ನೀಡುವುದಿಲ್ಲವಂತೆ, ಮಲೆನಾಡು ಗಿಡ್ಡ ತಳಿ ಸಂರಕ್ಷಣೆ ಇತ್ಯಾದಿಗಳೆಲ್ಲ ಬರೀ ಪ್ರಚಾರಕ್ಕಾಗಿ ಸೀಮಿತವಾಗಿದೆ ಎಂಬುದು ಇದರಲ್ಲಿ ಅರ್ಥವಾಗುತ್ತದೆ, ಇದರಿಂದಲೇ ಉತ್ಕೃಷ್ಟವಾದ ನಮ್ಮ ಮಲೆನಾಡು ಗಿಡ್ಡ ತಳಿ ಕಣ್ಮರೆ ಆಗುತ್ತಿದೆ.
Comments
Post a Comment