Blog number 1770. ಪರಿಶುದ್ಧ ಅರಿಶಿಣದ ಹೆಸರಲ್ಲಿ ವಿಷಕಾರಿ ರಾಸಾಯ ಬಣ್ಣ ಮೆಟಾನಿಲ್ ಯೆಲ್ಲೋ ಸೀಮೆ ಸುಣ್ಣದ ಪುಡಿಯ ಕಲಬೆರಕೆ ಅರಿಶಿಣ ಪುಡಿ ಮಾರಾಟ ಮತ್ತು ಬಳಕೆಯಲ್ಲಿದೆ.
https://youtube.com/shorts/YTpObN0dRcA?feature=shared
#ಕಲಬೆರಕೆ_ಅರಿಶಿಣ_ಪರೀಕ್ಷೆಯ_ಸುಲಭ_ವಿಧಾನ_ಇಲ್ಲಿದೆ
#ಅರಿಶಿಣಪುಡಿಯಿಂದ_ಆರೋಗ್ಯ_ಆದರೆ
#ಮಾರುಕಟ್ಟೆಯಲ್ಲಿರುವುದು_ಕಲಬೆರಕೆ_ಅರಿಶಿಣಪುಡಿ
#ಸೀಮೆಸುಣ್ಣದ_ಪುಡಿ_ಮೆಟಾನಿಲ್_ಯಲ್ಲೋ_ಸೇರಿಸಿದ_ಅರಿಶಿಣಪುಡಿ_ಬಳಕೆಯಲ್ಲಿದೆ.
#ನಾವು_ನಮ್ಮ_ಮಲ್ಲಿಕಾವೆಜ್_ರೆಸ್ಟೋರೆಂಟನಲ್ಲಿ_ಬಳಸುವುದು_ಪರಿಶುದ್ಧ_ಅರಿಶಿಣಪುಡಿ.
#ಅರಿಶಿಣಪುಡಿ_ತುಪ್ಪ_ಬೆಲ್ಲ_ಮಿಶ್ರಿತ_ಗೋಲ್ಡನ್_ವಿಶ್ವವಿಖ್ಯಾತವಾಗಿದೆ.
ಭಾರತೀಯ ಆಹಾರೋದ್ಯಮದಲ್ಲಿ ಕಲಬೆರಕೆ ಸಂಪೂರ್ಣ ನಿಷೇದ ಯಾವ ಕಾಯಿದೆಯಿಂದಲೂ ಸಾಧ್ಯವಿಲ್ಲ ಎಂಬುದು ನನ್ನ ಅಭಿಪ್ರಾಯ ಯಾಕೆಂದರೆ ನಾವು ಬೆಳೆಯುವ ಬೆಳೆಯಲ್ಲಿ ಸೇರುವ ಔಷದ ಮತ್ತು ಗೊಬ್ಬರದ ವಿಷ ಒಂದು ಕಡೆ ಆದರೆ ಮಾರಾಟಗಾರರು ಮಾರುವ ಸಿದ್ದಪಡಿಸಿದ ಆಹಾರ ಉತ್ಪನ್ನಗಳಲ್ಲಿ ಮಾಡುವ ಕಲಬೆರಕೆ ಇನ್ನೊಂದು ವಿಷದ್ದು ಇದನ್ನು ಬಳಸುವ ಗ್ರಾಹಕನಿಗೆ ಡಬಲ್ ವಿಷದ ದಮಾಕಾ!!...
ಇವತ್ತು ಹೋಟೆಲ್ ಮಾಲಿಕರುಗಳ ಮೇಲೆ ಗ್ರಾಹಕರು ಕಡಿಮೆ ಬೆಲೆಯಲ್ಲಿ ಆಹಾರ ನೀಡಲಿ ಎಂಬ ಒತ್ತಡ ಮತ್ತು ಹೋಟೆಲ್ ಮಾಲಿಕರುಗಳು ದುರಾಸೆಯಿಂದ ಕಡಿಮೆ ಬೆಲೆಯ ಎಣ್ಣೆ, ಚಹಾಪುಡಿ, ಕೃತಕ ಬಣ್ಣ, ಟೇಸ್ಟಿಂಗ್ ಪೌಡರ್, ಮಸಾಲೆ ಪುಡಿಯನ್ನು ಬಳಸುತ್ತಾರೆ ಕಡಿಮೆ ಬೆಲೆ ಅಂದರೆ ಅದು ಕಲಬೆರಕೆಯೇ ಆಗಿರುತ್ತದೆ.
ಅರಿಶಿಣ ಪುಡಿ ಭಾರತೀಯರಿಗೆ ಪುರಾಣ ಕಾಲದಿಂದ ಹರಿದ್ರಾ ಎಂಬ ಹೆಸರಲ್ಲಿ ಆರೋಗ್ಯಕ್ಕಾಗಿ, ರುಚಿಗಾಗಿ, ಸುವಾಸನೆಯಾಗಿ ಬಳಕೆಯಲ್ಲಿದೆ.
ಇದು ಹೃದಯ ಸಂಬಂದಿಕಾಯಿಲೆಗಳಿಗೆ, ಕ್ಯಾನ್ಸರ್, ಆಲ್ಜಿಮರ್ ಕಾಯಿಲೆಗಳಿಗೆ ರಾಮಬಾಣ ಕಾರಣ ಇದರಲ್ಲಿರುವ ಕುರ್ಕುಮಿನ್ ಎಂಬ ರಾಸಾಯನಿಕ ದೇಹದಲ್ಲಿ ಆಂಟಿ ಇನ್ ಪ್ಲೇಮಟರಿ ಗುಣಗಳನ್ನು ಹೆಚ್ಚಿಸುವುದರಿಂದ ಹಲವಾರು ರೋಗಳಿಗೆ ಇದು ಶಮನಕಾರಿ ಆಗಿ ಕೆಲಸ ಮಾಡುತ್ತದೆ.
ಅರಿಶಿಣದಲ್ಲಿ ತಮಿಳುನಾಡಿನಲ್ಲಿ ಪ್ರಸಿಧ್ಧಿ ಪಡೆದ ಮದ್ರಾಸ್ ಅರಿಶಿಣ ಮತ್ತು ಕೇರಳದಲ್ಲಿ ಬೆಳೆದು ಮಾರಾಟ ಆಗುವ ಅಲೆಪ್ಪಿ ಅರಿಶಿಣ ಮಾರುಕಟ್ಟೆಯಲ್ಲಿ ಪ್ರಸಿದ್ಧಿ ಪಡೆದಿದೆ.
ಅರಿಶಿಣಕ್ಕಿರುವ ಬೇಡಿಕೆಯಿಂದ ಕಲಬೆರಕೆ ಮಾಡಿ ಅರಿಶಿಣ ಮಾರಾಟ ಮಾಡುವ ಮಧ್ಯವರ್ತಿ ಸಂಸ್ಥೆಗಳು ಈಗ ಎಲ್ಲಾ ಕಡೆ ಇದೆ.
ಸೀಮೆಸುಣ್ಣದ ಪುಡಿ ಮತ್ತು ಸಿಂಥೆಟಿಕ್ ಕಲರ್ ಡೈ ಹಳದಿ ಆಸಿಡ್ ಆಗಿರುವ ಮೆಟಾನಿಲ್ ಯೆಲ್ಲೊ ಬಳಕೆ ಜಾಸ್ತಿ ಆಗಿದೆ ಇದು ನಿಜ ಅರಿಶಿಣದಲ್ಲ ಅರಿಶಿಣದ ಬಣ್ಣದ ವಿಷ ಆದರೆ ಬಳಕೆದಾರನಿಗೆ ಆಯ್ಕೆ ಇಲ್ಲ ಅವನು ಅನಿವಾರ್ಯವಾಗಿ ಇದನ್ನು ಖರೀದಿಸಲೇ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕಲಬೆರಕೆ ಅರಿಶಿಣ ಮತ್ತು ಪರಿಶುದ್ಧ ಅರಿಶಿಣದ ಸುಲಭ ಪರೀಕ್ಷೆ ಮನೆಯಲ್ಲೇ ಮಾಡಬಹುದು ಒಂದು ಲೋಟ ನೀರಿಗೆ ಒಂದು ಟೀ ಚಮಚ ಅರಿಶಿಣ ಪುಡಿ ಹಾಕಿ 10 ರಿಂದ 15 ನಿಮಿಷ ಬಿಡಿ ನಂತರ ನೋಡಿದಾಗ ಅರಿಶಿಣ ಪುಡಿ ಗ್ಲಾಸಿನ ಕೆಳಗೆ ಸಂಗ್ರಹವಾಗಿದ್ದರೆ ಲೋಟದ ನೀರು ಶುದ್ಧವಾಗಿ ಉಳಿದರೆ ಅದು ಪರಿಶುದ್ಧ ಅರಿಶಿಣ, ಕಲಬೆರಕೆ ಅರಿಶಿಣವಾದರೆ ಲೋಟದ ನೀರು ಹಳದಿ ಬಣ್ಣವಾಗಿ ಪುಡಿ ತಳದಲ್ಲಿ ಶೇಖರವಾಗದಿದ್ದರೆ ಅದು ಕಲಬೆರಕೆ ಅರಿಶಿಣ
ನಾನು ನಮ್ಮ ಹೋಟೆಲ್ ಉದ್ಯಮದಲ್ಲಿ ಪರಿಶುದ್ಧವಾದ ಎಲ್ಲಾ ರೀತಿಯ ಮಸಾಲೆ ಪದಾರ್ಥ ಪರೀಕ್ಷಿಸಿ ಸಂಗ್ರಹಿಸಿ ಬಳಸುತ್ತೇನೆ ಇದೇ ರೀತಿ ಎಲ್ಲಾ ಹೋಟೆಲ್ ಮಾಲಿಕರು, ಅಡುಗೆ ಭಟ್ಟರು ಕಲಬೆರಕೆ ಆಹಾರ ಉತ್ಪನ್ನಗಳನ್ನು ಬಳಸಬಾರದಾಗಿ ವಿನಂತಿಸುತ್ತೇನೆ.
ಯಾರಿಗಾದರೂ ಈ ಪರಿಶುದ್ಧ ಅರಿಶಿಣ ಪುಡಿ ಬೇಕಾಗಿದ್ದರೆ ನನ್ನ 9449253788 ಗೆ ನಿಮ್ಮ ವಿಳಾಸ ವಾಟ್ಸಪ್ ಮಾಡಿ ಪರಿಶುದ್ಧ ಅರಿಶಿಣದ ಪುಡಿ ಬೆಲೆ ಮತ್ತು ಅದರ ಅಂಚೆ ವೆಚ್ಚ ಪಾವತಿಸಿದರೆ ಅವರ ವಿಳಾಸಕ್ಕೆ ತಲುಪಿಸ ಬಹುದು ಮಾರುಕಟ್ಟೆಯಲ್ಲಿ ದೊರೆಯುವ ಅರಿಶಿಣ ಪುಡಿಗಿಂತ ಕೊಂಚ ಬೆಲೆ ಜಾಸ್ತಿ ಮತ್ತು ಇದು ಪರಿಶುದ್ಧ ಅರಿಶಿಣ ಪುಡಿ ಆಗಿರುವುದರಿಂದ ನೀವು ಬೇಡಿಕೆ ನೀಡಿದ ದಿನ ಅವತ್ತಿನ ಬೆಲೆಯಲ್ಲಿ ಕಳಿಸಲಾಗುವುದು.
Comments
Post a Comment