#ನಾಳೆ_ಈಸೂರಿನ_ಸ್ವಾತಂತ್ರ್ಯೋತ್ಸವದ_81ನೇ_ದಿನಾಚಾರಣೆ.
#ಶಿಕಾರಿಪುರ_ಸಮೀಪದ_ಈಸೂರು
#ಇಲ್ಲಿನ_ವೀರಭದ್ರೇಶ್ವರ_ದೇವಾಲಯದಲ್ಲಿ_1942ರಲ್ಲಿ_ಸೆಪ್ಟೆಂಬರ್_25ರಂದು_ದೇಶದ_ದ್ವಜಾರೋಹಣ.
#ದೇಶದ_ಮೊದಲ_ಸ್ವಾತಂತ್ರ್ಯ_ಘೋಷಿಸಿದ_ಸರಕಾರ_ಗ್ರಾಮ_ಈಸೂರು
#ಮರುದಿನ_ಈ_ಧ್ವಜ_ತೆಗೆಯಲು_ಬಂದ_ಬ್ರಿಟೀಷ್_ಸರ್ಕಾರದ_ಪೋಲಿಸ್_ಅಧಿಕಾರಿ_ಅಮಾಲ್ದಾರರು_ಜನಾಕ್ರೋಶಕ್ಕೆ_ಬಲಿ
#ನಂತರ_ಐದುಸಾವಿರ_ಬ್ರಿಟೀಷ್_ಸೇನಾ_ತುಕಡಿ_ನಡೆಸಿದ್ದು_ಅಕ್ಷರಶಃ_ಹತ್ಯಾಕಾಂಡ
#ಐದು_ಜನರಿಗೆ_ಗಲ್ಲು_40_ಜನರಿಗೆ_ಜೀವಾವಾದಿ_ನೂರಾರು_ಸಂಸಾರಗಳು_ಊರು_ತೊರೆದರು.
#ಖ್ಯಾತ_ರಂಗಕರ್ಮಿ_ಡಾಕ್ಟರ್_ಸಾಸ್ವೇಹಳ್ಳಿ_ಸತೀಶ್_ನಾಟಕ_ಬರೆದು_ಪ್ರದರ್ಶಿಸಿದ್ದಾರೆ.
ಡಾಕ್ಟರ್ ಸಾಸ್ವೇಹಳ್ಳಿ ಸತೀಶ್ ನಾಡಿನ ಇತಿಹಾಸದ ಮೇಲೆ ಬೆಳಕು ಚೆಲ್ಲಿ ಅದನ್ನು ರಂಗದ ಮೂಲಕ ಮುಂದಿನ ತಲೆಮಾರಿಗೆ ತಿಳಿಸುವ ಕೆಲಸ ಸಮರ್ಪಕವಾಗಿ ಮಾಡುತ್ತಾ ಬಂದಿದ್ದಾರೆ ಇತ್ತೀಚೆಗೆ ಇವರು ಈಸೂರು ಹೋರಾಟವನ್ನು ರಂಗ ಪ್ರಯೋಗ ಮಾಡಿ ಯಶಸ್ವಿ ಆಗಿದ್ದಾರೆ.
ಈಸೂರು ಹೋರಾಟವಾದ "ಏಸೂರು ಕೊಟ್ಟರೂ.. ಈಸೂರು ಕೊಡೆವು" ನಾಟಕ ಇವರು ಬರೆದು ಪ್ರಕಟಿಸಿದ್ದಾರೆ ಅಷ್ಟೇ ಅಲ್ಲ ಈ ಕಾಯ೯ಕ್ರಮದಲ್ಲಿ ಈಸೂರು ಸ್ವಾತಂತ್ರ್ಯ ಹೋರಾಟದ ನೇತಾರ ಸಾಹುಕಾರ್ ಬಸವಣ್ಯಪ್ಪರ ಮೊಮ್ಮಗಳು ಕವಿತಾ ಮತ್ತು ಚಿಂದಿ ಹುಚ್ರಾಯಪ್ಪರ ಮೊಮ್ಮಗಳು ಕಸ್ತೂರಿ ಅವರನ್ನು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಆಹ್ವಾನಿಸಿ ಅವರಿಗೆ ನಾಟಕದ ಪ್ರತಿ ನೀಡುವ ಕೆಲಸ ಮಾಡಿದ್ದಾರೆ.
ಈಸೂರಿನ ಹೋರಾಟ ಮತ್ತು ಹೋರಾಟದ ವಂಶಸ್ಥರನ್ನು ಜನ ಮಾನಸದಲ್ಲಿ ಚಿರಸ್ಥಾಯಿಗೊಳಿಸುವ ಡಾಕ್ಟರ್ ಸಾಸ್ವೆಹಳ್ಳಿ ಸತೀಶರ ಮಹತ್ಕಾಯ೯ ಸ್ತುತ್ಯಾರ್ಹ ಮತ್ತು ವೈಯಕ್ತಿಕವಾಗಿ ನಾನು ಅವರನ್ನು ಅಭಿನಂದಿಸುತ್ತೇನೆ.
1995ರಲ್ಲಿ ನಾನು ಈಸೂರಿನ ಸ್ವಾತಂತ್ರ್ಯ ಹೋರಾಟದ ಆರು ಪುಟಗಳ ಕೈಪಿಡಿ ಮಾಡಿ ಜಿಲ್ಲೆಯ ಶಾಲೆಗಳಿಗೆ ಉಚಿತವಾಗಿ ಹಂಚಿದ್ದೆ ಮತ್ತು ಶಾಲಾ ವಿಶೇಷ ಕಾರ್ಯಕ್ರಮದಲ್ಲಿ ಇದನ್ನು ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಓದಿಸಿ ಮನನ ಮಾಡಲು ವಿನಂತಿಸಿದ್ದೆ ಒಂದೆರೆಡು ವರ್ಷ ಕೆಲ ಪ್ರಗತಿ ಪರ ಶಿಕ್ಷಕರು ಇದನ್ನು ಪಾಲಿಸಿದ್ದರು.
ಆಗಿನ ಶಿವಮೊಗ್ಗ ಜಿಲ್ಲಾ ಪಂಚಾಯತ್ ನಲ್ಲಿ ಸುವರ್ಣ ಸ್ವಾತಂತ್ರೋತ್ಸವದ ಅಂಗವಾಗಿ ಆಗಸ್ಟ್ 14 ರ ಮಧ್ಯರಾತ್ರಿ ಜಿಲ್ಲಾ ಪಂಚಾಯತ್ ಸಭೆ ನಡೆಸಿದಾಗ ಈ ಈಸೂರು ಸ್ವಾತಂತ್ರ್ಯ ಹೋರಾಟದ ಕೈಪಿಡಿ ಅವತ್ತಿನ ಸಭೆಯಲ್ಲಿ ಭಾಗವಹಿಸಿದ ಎಲ್ಲಾ ಜಿಲ್ಲಾ ಪಂಚಾಯತ್ ಸದಸ್ಯರಿಗೆ ಮತ್ತು ಸಿಬ್ಬಂದಿ ವರ್ಗಕ್ಕೆ ನೀಡಿದ್ದೆ.
ಈ ಚರಿತ್ರಾರ್ಹ ಸದಾ ಸ್ಮರಣೆ ಮಾಡುವಂತ ಜಿಲ್ಲಾ ಪಂಚಾಯತ್ ಮದ್ಯರಾತ್ರಿಯ ಸಭೆಯಲ್ಲಿ ನನಗೆ ಈಸೂರು ಸ್ವಾತಂತ್ರ್ಯ ಹೋರಾಟ ಸ್ಮರಿಸುವ ಮಾತನಾಡುವ ಅವಕಾಶ ಲಭಿಸಿತ್ತು ಮತ್ತು ಶಿವಮೊಗ್ಗ ಜಿಲ್ಲಾ ಪಂಚಾಯತ್ ಈಸೂರಿನಲ್ಲಿ ಸ್ಮಾರಕ ಭವನ ನಿರ್ಮಿಸಿತ್ತು.
ಶಿವಮೊಗ್ಗ ಜಿಲ್ಲೆಯ ಸ್ವಾತಂತ್ರ್ಯ ಹೋರಾಟವಾದ "ಏಸೂರು ಕೊಟ್ಟರು ಈಸೂರು ಕೊಡೆವು" ಎಂಬ ಜನಪ್ರಿಯ ಘೋಷಣೆಯೊಂದಿಗೆ 25 - ಸೆಪ್ಟೆಂಬರ್ -1942 ರಲ್ಲಿ ಶಿಕಾರಿಪುರ ತಾಲ್ಲೂಕಿನ ಈಸೂರು ಗ್ರಾಮದಲ್ಲಿ ವೀರ ಸ್ವಾತಂತ್ರ್ಯ ಸೇನಾನಿ ಸಾಹುಕಾರ್ ಬಸವಣ್ಯಪ್ಪನವರ ನೇತೃದಲ್ಲಿ ಊರಿನ ವೀರಭದ್ರೇಶ್ವರ ದೇವಾಲಯದಲ್ಲಿ ದೇಶದ ಭಾವುಟ ಹಾರಿಸಿ ಈಸೂರು ಸ್ವಾತಂತ್ರ್ಯವಾಯಿತೆಂದು ಘೋಷಿಸುತ್ತಾರೆ.
ಮಹಾತ್ಮಾ ಗಾಂಧೀಜಿ ಅವರ ಪ್ರೇರಣೆಯಿಂದ 1942 ರಲ್ಲಿ ಪ್ರಾರಂಭವಾದ ಕ್ವಿಟ್ ಇಂಡಿಯಾ ಚಳುವಳಿ ಈಸೂರು ಹೋರಾಟಕ್ಕೆ ಕಾರಣವಾಯಿತು.
ಬ್ರಿಟಿಷ್ ಸರ್ಕಾರದ ಅಮಾಲ್ದಾರ್ ಚೆನ್ನಕೃಷ್ಣಪ್ಪ ಮತ್ತು ಪೋಲಿಸ್ ಅಧಿಕಾರಿ ಕೆಂಚೆಗೌಡ ತಮ್ಮ ಸಿಬ್ಬಂದಿಗಳ ಜೊತೆ ಈಸೂರಿನ ವೀರಭದ್ರೇಶ್ವರ ದೇವಾಲಯ ಪ್ರವೇಶಿಸಿ ದಪ೯ದಿಂದ ದೇಶದ ಬಾವುಟ ತೆಗೆಯಲು ಪ್ರಯತ್ನಿಸಿದ್ದರಿಂದ ನಡೆದ ಘರ್ಷಣೆಯಲ್ಲಿ ಇವರಿಬ್ಬರು ಜೀವ ಕಳೆದುಕೊಳ್ಳುತ್ತಾರೆ.
ಮರುದಿನ ಸುಮಾರು ಐದು ಸಾವಿರ ಯೋದರ ಬ್ರಿಟೀಶ್ ಸೈನ್ಯ ಸಂಪೂರ್ಣ ಈಸೂರು ಗ್ರಾಮ ಮುತ್ತಿಗೆ ಹಾಕಿ ಎಲ್ಲಾ ರೀತಿಯ ಅನಾಚಾರ ನಡೆಸುತ್ತದೆ ಈ ಹೋರಾಟದ ವೀರ ಸ್ವಾತಂತ್ರ್ಯ ಸೇನಾನಿ ಸಾಹುಕಾರ್ ಬಸವಣ್ಯಪ್ಪನವರ ಮನೆ ಬೆಳೆ ಎಲ್ಲಾ ಬ್ರಿಟೀಶರು ಸುಟ್ಟು ಬೂದಿ ಮಾಡುತ್ತಾರೆ.
ಸಾಹುಕಾರ್ ಬಸವಣ್ಯಪ್ಪನವರು ತಮ್ಮ ಅಜ್ಞಾತವಾಸದಲ್ಲೇ ಜೀವ ತ್ಯಾಗ ಮಾಡುತ್ತಾರೆ ಈ ಬಗ್ಗೆ 1997 ರಲ್ಲಿ ಆನಂದಪುರಂಗೆ ಆಗಮಿಸಿದ್ದ ಸುಭಾಷ್ ಚಂದ್ರ ಬೋಸರ ಅನುಯಾಯಿ INA ರಾಮರಾವ್ ನೇತೃತ್ವದ ಸುವರ್ಣ ಸ್ವಾತಂತ್ರ್ಯ ಜೋತಿ ಸ್ವಾಗತ ಕಾರ್ಯಕ್ರಮದಲ್ಲಿ ನಮ್ಮ ಆನಂದಪುರಂನ ಸ್ವಾತಂತ್ರ್ಯ ಹೋರಾಟಗಾರರಾದ ಜನ ಪ್ರೀತಿಯಿಂದ ಕರೆಯುತ್ತಿದ್ದ ಟೈಲರ್ ರಾಮಣ್ಣ (ರಾಮರಾವ್) ಈಸೂರು ಹೋರಾಟದ ನೇತಾರರನ್ನು ಆನಂದಪುರಂನ ಇನಾಂದಾರ ಕುಟುಂಬದ ಬದರಿನಾರಾಯಣ ಅಯ್ಯಂಗಾರ್ (ನಂತರ ಮಂತ್ರಿ ಸಂಸದರಾಗುತ್ತಾರೆ) ಸೂಚನೆ ಮೇಲೆ ಅವರಿಗೆ ಆಶ್ರಯ ನೀಡಿ ತೀರ್ಥಹಳ್ಳಿಯ ರಹಸ್ಯ ಸ್ಥಾನಕ್ಕೆ ತಲುಪಿಸಿದ್ದಾಗಿ ಈ ರಹಸ್ಯ ಇಷ್ಟು ವರ್ಷ ಎಲ್ಲೂ ಬಹಿರಂಗ ಪಡಿಸಿರಲಿಲ್ಲ ಕಾರಣ ಈ ವಿಚಾರ ಬ್ರಿಟಿಷ್ ಸರ್ಕಾರಕ್ಕೆ ಗೊತ್ತಾಗಿದ್ದರೆ ನೇಣು ಕಂಬಕ್ಕೇರಿಸದೆ ಬಿಡುತ್ತಿರಲಿಲ್ಲ ಎಂದು ಆನಂದಪುರ೦ ಬಸ್ ನಿಲ್ದಾಣದಲ್ಲಿ ನಡೆದ ಬಹಿರಂಗ ಸಭೆಯಲ್ಲಿ INA ರಾಮರಾವ್ ಎದುರು ಬಹಿರಂಗ ಮಾಡಿದ್ದರು.
ಈ ಕಾರ್ಯಕ್ರಮದ ಚಿತ್ರ ಮತ್ತು ಸ್ವಾತಂತ್ರ್ಯ ಹೋರಾಟಗಾರ ಆನಂದಪುರಂ ರಾಮ ರಾವ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ ನೋಡಿ
ಇದಕ್ಕೆ ಕಾರಣ ಈಸೂರು ಹೋರಾಟ ಶ್ಲಾಘಿಸಿ ನೇತಾಜಿ ಸುಭಾಷ್ ಚಂದ್ರ ಬೋಸರು ಬರ್ಲಿನ್ ನಿಂದ (ರಷ್ಯಾ) ರೇಡಿಯೋದಲ್ಲಿ ಭಾಷಣ ಮಾಡಿದ್ದರಂತೆ.
ಆನಂದಪುರಂನ ಬದರಿನಾರಾಯಣ ಅಯ್ಯಂಗಾರರೂ ಸ್ವಾತಂತ್ರ್ಯ ಹೋರಾಟಗಾರರು ಮತ್ತು ವಕೀಲರೂ ಆಗಿದ್ದವರು ಅದೇ ರೀತಿ ತೀರ್ಥಹಳ್ಳಿಯ ಕಡಿದಾಳು ಮಂಜಪ್ಪನವರು ಸ್ವಾತಂತ್ರ್ಯ ಹೋರಾಟಗಾರರು ವಕೀಲರು ಆಗಿದ್ದರು ಮತ್ತು ಕಡಿದಾಳು ಮಂಜಪ್ಪನವರು ಬದರಿನಾರಾಯಣ ಅಯ್ಯಂಗಾರರ ತಂದೆ ರಾಮಕೃಷ್ಣ ಅಯ್ಯಂಗಾರರ ಕಾನೂನು ಸಲಹೆಗಾರರೂ ಆಗಿದ್ದರು ಆದ್ದರಿಂದ ಈಸೂರು ಹೋರಾಟದ ವೀರ ಸೇನಾನಿ ಸಾಹುಕಾರ್ ಬಸವಣ್ಯಪ್ಪನವರು ಮಲೆನಾಡಿನ ತೀರ್ಥಹಳ್ಳಿಯ ರಹಸ್ಯ ಜಾಗದಲ್ಲಿ ಆಶ್ರಯ ಪಡೆದರು ಎ೦ಬ ವಿಚಾರ ಸರಿ ಇರಬಹುದು ಆದರೆ ಇದು ಬ್ರಿಟೀಷ್ ಸರ್ಕಾರಕ್ಕೆ ಗೊತ್ತಾಗಿದ್ದರೆ ಮಾತ್ರ ಸಹಾಯ ಮಾಡಿದ ಎಲ್ಲರಿಗೂ ಘನ ಘೋರ ಶಿಕ್ಷೆ ಮಾತ್ರ ತಪ್ಪುತ್ತಿರಲಿಲ್ಲ.
Comments
Post a Comment