https://youtu.be/aTfwCMwJqBk?feature=shared
#ಸರ್ವರಿಗೂ_ಗೌರಿ_ಗಣೇಶ_ಹಬ್ಬದ_ಶುಭಾಷಯಗಳು.
#ನಮ್ಮ_ಲಾಡ್ಜಿನ_ಶಿಲಾಮಯ_ಗಣಪತಿ
#ಶಿಲಾ_ಗಣಪತಿ_ನೀಡಿದವರು_ಡಾಕ್ಟರ್_ವಿಶ್ವಪತಿ_ಶಾಸ್ತ್ರೀಜಿ_ಬೆಂಗಳೂರು.
#ಕಳೆದ_ಹದಿನೈದು_ವರ್ಷದಿಂದ_ಪೂಜಿಸುತ್ತಿದ್ದೇವೆ.
ನಮ್ಮ ಹೊಂಬುಜ ಲಾಡ್ಜ್ ಮುಖ್ಯ ದ್ವಾರದ ಬಲಭಾಗದಲ್ಲಿ ಇರುವ ಶಿಲಾಮಯ ಗಣಪತಿ ನೀಡಿದವರು ಸದಾ ನಮ್ಮ ಅಭಿವೃದ್ಧಿಗೆ ಕಾಳಜಿ ವಹಿಸಿರುವ ಡಾಕ್ಟರ್ ಎನ್.ಎಸ್. ವಿಶ್ವಪತಿ ಶಾಸ್ತ್ರೀಗಳು ದೈವಜ್ಞ ಜೋತಿಷಿಗಳು ವಿಜಯ ನಗರ ಬೆಂಗಳೂರು.
ದೇಶ ವಿದೇಶದಲ್ಲಿ ನೂರಾರು ದೇವಾಲಯ ಪ್ರತಿಷ್ಟಾಪನೆಯ ನೇತೃತ್ವ ವಹಿಸಿದ್ದ ವಿಶ್ವಪತಿ ಶಾಸ್ತ್ರಿಗಳು ತ್ಯಾಗರ್ತಿಯ ವಿವೇಕಾನಂದ ಪ್ರೌಢ ಶಾಲೆ ನಿರ್ಮಿಸಿ ಊರಿಗೆ ಅರ್ಪಿಸಿದ್ದ ಇನಾಂದಾರರಾಗಿದ್ದ ಗುರುಮೂರ್ತಿರಾಯರ ಕಿರಿಯ ಪುತ್ರಿ ಶ್ರೀಮತಿ ಸುಧಾಮಣಿ ಅವರ ಪತಿ.
ನೆಲಮಂಗಲದಲ್ಲಿ ಇವರ ತಂದೆ ನಿರ್ಮಿಸಿರುವ ಅಡಿಕೆ ಗಣಪತಿ ದೇವಾಲಯ ಸುಪ್ರಸಿದ್ಧ, ಹಿಂದಿನ ಆದಿಚುಂಚನಗಿರಿ ಸ್ವಾಮಿಗಳ ಅವಧಿಯಲ್ಲಿ ಇವರು ಪ್ರಕಟಿಸುತ್ತಿದ್ದ ಪಂಚಾಂಗ ಈಗ ಇವರ ಅನೋರೋಗ್ಯ ಮತ್ತು ವಯೋಸಹಜ ಸಮಸ್ಯೆಯಿಂದ ಪ್ರಕಟವಾಗುತ್ತಿಲ್ಲ ಆದರೆ ಆನ್ ಲೈನ್ ನಲ್ಲಿ ಲಭ್ಯವಿದೆ.
ನಮ್ಮ ಯಡೇಹಳ್ಳಿಯ ಶ್ರೀವರ ಸಿದ್ದಿ ವಿನಾಯಕ ದೇವಸ್ಥಾನ ನಿರ್ಮಿಸಿ ಪ್ರತಿಷ್ಟಾಪಿಸಿ ಊರಿಗೆ ಸಮರ್ಪಿಸುವ ಭಾಗ್ಯ ನನ್ನ ತಂದೆ- ತಾಯಿ ಮತ್ತು ಪೂರ್ವಿಕರ ಅನುಗ್ರಹದಿಂದ ನನಗೆ ಬಂದಾಗ ಅದಕ್ಕೆ ಎಲ್ಲಾ ರೀತಿಯ ಸಲಹೆ ಸಹಕಾರದ ನೇತೃತ್ವ ವಹಿಸಿದ್ದವರು ಶ್ರೀ ವಿಶ್ವಪತಿ ಶಾಸ್ತ್ರೀಗಳು.
ದೇವಾಲಯದ ಶಿಖರ ಗೋಪುರದ ಕಲಶ, ಪಂಚಲೋಹದ ಉತ್ಸವ ಮೂರ್ತಿ ಮತ್ತು ಕಳೆದ ವರ್ಷ ಇವರು ನಿಮಿ೯ಸಿ ಅರ್ಪಿಸಿದ ಪಾಕಶಾಲೆಗಳು ನಮ್ಮ ಊರಿಗೆ ಇವರು ನೀಡಿದ ಕೊಡುಗೆಗಳು.
Comments
Post a Comment