Blog number 2110. ಭಾರತ ದೇಶದಲ್ಲೇ ಅತ್ಯಂತ ಎತ್ತರದ ಜಲಪಾತ ಶಿವಮೊಗ್ಗ ಜಿಲ್ಲೆಯ ವರಾಹಿ ನದಿಯ ಕುಂಚಿಕಲ್ ಪಾಲ್ಸ್ ಎಂಬ ವದಂತಿ ಇದೆ... ಇದು ನಿಗೂಡ ಜಲಪಾತ ಸಾರ್ವಜನಿಕರಿಗೆ ಮಾಹಿತಿ ಇಲ್ಲ ಈ ಬಗ್ಗೆ ವರಾಹಿ ನದಿ ಮೂಲದಲ್ಲಿ ಹುಟ್ಟಿ ಶರಾವತಿ ನದಿ ಮೂಲದಲ್ಲಿ ನೆಲೆಸಿರುವ ಮಲೆನಾಡಿನ ಅದ್ಭುತ ಕಥೆಗಾರ ಪ್ರಬಂಧ ಅOಬು ತೀರ್ಥರ ಅಭಿಪ್ರಾಯಗಳು
#ಕುಂಚಿಕಲ್_ಪಾಲ್ಸ್_ಇರುವುದು_ಸತ್ಯ
#ಎತ್ತರ_1440_ಅಡಿಗಿಂತ_ಎತ್ತರದ_ಘಟ್ಟದ_ಅಂಚಿದೆ
#ಆದರೆ_ಸಾಮಾಜಿಕ_ಜಾಲತಾಣದಲ್ಲಿ_ಹರಿದಾಡುವ_ಪೋಟೋ_ಕುಂಚಿಕಲ್_ಪಾಲ್ಸ್_ನದ್ದಲ್ಲ
#ಅಂತ_ಸಾಹಿತಿ_ಪರಿಸರ_ಪ್ರೇಮಿ_ಪ್ರಬಂದ_ಅಂಬುತೀರ್ಥ_ಬರೆದಿದ್ದಾರೆ.
#ಅವರು_ಬರೆದ_ಕಥೆಗಳು_ಓದಿ_ನಾನವರ_ಫ್ಯಾನ್_ಆಗಿದ್ದೇನೆ.
ಅರುಣ್ ಪ್ರಸಾದ್ ಅವರೆ ಕುಂಚಿಕಲ್ ಪಾಲ್ಸ್ ಇರುವುದು ಸತ್ಯ......
ನಾನು ಹುಟ್ಟಿದ್ದು ವಾರಾಹಿ ನದಿ ಮೂಲದ ಸಮೀಪದ ಕೆದ್ಲುಗುಡ್ಡೆ ಎಂಬ ಊರಿನಲ್ಲಿ.
ನನ್ನ ಅಜ್ಜನ ಮನೆಯಿಂದ ಕೇವಲ ಎರಡು ಕಿಮೀ ದಟ್ಟ ಕಾಡಿನಲ್ಲಿ ವಾರಾಹಿ ನದಿ ಹುಟ್ಟುತ್ತದೆ.
ಜಗತ್ತಿನಲ್ಲಿ ಹುಟ್ಟಿದ ಐದು ಕಿಮೀ ದೂರದೊಳಗೆ ಆಣೆಕಟ್ಟುಯಿಂದ back water ಪ್ರವಹಿಸುವ ಏಕೈಕ ನದಿ ವಾರಾಹಿ ನದಿ ಇರಬಹುದು.
ನಾನು ಒಂದು ವರ್ಷದ ಹಿಂದೆ ವಾರಾಹಿ ನದಿ ಮತ್ತು ವಾರಾಹಿ ಮುಳುಗಡೆ ಸಂತ್ರಸ್ತರ ಬಗ್ಗೆ ಒಂದು ಲೇಖನ ಬರೆದಿದ್ದೆ.
ಒಂದು ವಾರಾಹಿ ನದಿ ಮುಳುಗಡೆ ಮಾಡಿ ಜಗತ್ತಿನ ಅಮೂಲ್ಯ ಅರಣ್ಯ ಸಂಪತ್ತು ನಾಶ ಮಾಡಿ ಇಡೀ ಧಕ್ಷಿಣ ಭಾರತವನ್ನು ಮರುಭೂಮಿ ಯಾಗಿ ಪರಿವರ್ತನೆ ಮಾಡಿದ್ದಾರೆ.
ಈ ಕುಂಚಿಕಲ್ಲು ಜಲಪಾತದ ಸಮೀಪದ ತನಕ ಹೋಗಿ ಜಲಪಾತದ ಸದ್ದು ಕೇಳಿ ಕೊಂಡು ಬಂದಿದ್ದಾರೆ ಕೆಲವರು
ಕುಂಚಿಕಲ್ಲು ಜಲಪಾತ ನಿಗೂಢವಾಗೇ ಇರಲಿ ಈ ಜಲಪಾತದ ಚಾರಣ ಪ್ರವಾಸ ಅಂತ ಅಲ್ಲೊಂದಷ್ಟು ದುಷ್ಟ ಮನುಷ್ಯರ ದುಷ್ಟ ಮನಸ್ಸು ನೈರ್ಮಲ್ಯ ಹಾಳು ಮಾಡದಿರಲಿ.
#ಮೇಲುಸುಂಕ_ಅಮ್ಮನವರ_ದೇವಸ್ಥಾನ.
ಅಲ್ಲಿ ನೂರು ವರ್ಷಗಳ ಹಿಂದೆ ಧಕ್ಷಿಣ ಕನ್ನಡ ಮತ್ತು ಮಲೆನಾಡಿನ ನಡುವೆ ಎರಡು ಚೆಕ್ ಪೋಸ್ಟ್ ಇತ್ತು.
ಮೇಲು ಸುಂಕ ಮಲೆನಾಡಿನ ಚೆಕ್ ಪೋಸ್ಟ್ ಆದರೆ ಘಟ್ಟದ ಕೆಳಗೆ ಬಹುಶಃ ಹಾಲಾಡಿ ಸಮೀಪ ಇರಬೇಕು "ಕೆಳ ಸುಂಕ" ಎಂಬ ಊರಿದೆ....
ನಿಮಗೆ ಗೊತ್ತಿರುವ ಶೀರ್ನಾಳಿ ಕುಟುಂಬ (ಶೀರ್ನಾಳಿ ಚಂದ್ರಶೇಖರ್) ಈ ದೇವಸ್ಥಾನದ ಪೂಜೆ ಗೆ ಬಂದವರು. ಈಗ ನನ್ನ ಅಜ್ಜನ ಕುಟುಂಬದವರು ಆ ದೇವಸ್ಥಾನದ ಪೂಜೆ ಮಾಡುತ್ತಾರೆ.
ಸಮಯಾವಕಾಶ ಇದ್ದಿದ್ದರೆ ಜಲಪಾತದ ತನಕ ಹೋಗಿ ಬರ ಬಹುದಿತ್ತು ಸಾರ್. ಅದನ್ನು ನೋಡಿ ಬರುವಷ್ಟು ಸಮಯ ನನ್ನ ಬಳಿ ತುಟ್ಟಿ ಯಾಗಿದೆ ಸಾರ್..
ಇಲ್ಲಿನ ಚಿತ್ರ ಆ ಜಲಪಾತದ್ದು ಬಹುತೇಕ ಅಲ್ಲ. ಎತ್ತರ ಖಂಡಿತವಾಗಿಯೂ ಇರುತ್ತದೆ. ಆದರೆ ಬಲ್ಲವರ ಪ್ರಕಾರ ಅದು ದಟ್ಟವಾದ ಕಾಡಿನಿಂದ ಸುತ್ತುವರಿದ ಜಾಗದಲ್ಲಿದೆ.
ಒಂದಿನ ಇಡಿ ಸಮಯ ಮಾಡಿಕೊಂಡು ಹೋಗಬೇಕು.
ಯಾರೇ ಅಲ್ಲಿಗೆ ಹೋಗುವುದಾದರೆ ಏಪ್ರಿಲ್ ಮೇ ಎರಡು ತಿಂಗಳಲ್ಲಿ ಅಲ್ಲಿಗೆ ಹೋಗಿಬರಬಹುದು.
ಉಳಿದ ಸಮಯದಲ್ಲಿ ಇಂಬುಳ ಗಳ ವಿಪರೀತ ಕಾಟ ಇರುತ್ತದೆ.
ನನಗೆ ಈ ಬಗ್ಗೆ ಬಹಳ ಆಸಕ್ತಿ ಇದೆ...
ಈ ಜಲಪಾತದ ಸಮೀಪದಲ್ಲಿ ನಮಗೆ ಸಂಬಂಧಿಸಿದ ಒಂದು ಅಮ್ಮನವರ ದೇವಸ್ಥಾನವಿದೆ.
https://youtu.be/Zg3wvASaUZk?feature=shared
ಹಾಗಾಗಿ ನಮಗೆ ಆ ಜಲಪಾತದ ಬಗ್ಗೆ ಸ್ವಲ್ಪಮಟ್ಟಿಗೆ ಮಾಹಿತಿ ಇದೆ....
ಅರಣ್ಯ ಇಲಾಖೆಯ ಭಯಕ್ಕೆ ಜನ ಅಲ್ಲಿಗೆ ಹೋಗಲು ಭಯ ಪಡುತ್ತಾರೆ...
ಇದು ಒಂದು ರೀತಿಯಲ್ಲಿ ಒಳ್ಳೆಯದಾಗಿದೆ..
ಈ ಭಾಗದಲ್ಲಿ ಹತ್ತು ವರ್ಷಗಳ ಹಿಂದಿನ ತನಕವೂ ವಾಟೆ ಬೆತ್ತ ತರಲು ಕಾಡು ಕಾಳುಮೆಣಸು , ಏಲಕ್ಕಿ ತರಲು ಅಲ್ಲಿನ ಕಾಡು ಜನರು ಹೋಗುತ್ತಿದ್ದರು.
ಆದರೆ ಅದೂ ಪ್ಲಾಸ್ಟಿಕ್ ಪರ್ಯಾಯ ಬಂದ ಮೇಲೆ ನಿಂತು ಹೋಗಿದೆ.
ನಕ್ಸಲ್ ಚಟುವಟಿಕೆ ಶುರುವಾದ ಮೇಲೆ ಈ ಜನಗಳಿಗೆ ಕಾಡು ಓಡಾಟ ನಿರ್ಬಂಧ ವಾಗಿ ಕಾಡೀಗ ಅಭೇದ್ಯವಾಗಿದೆ...
ಬಹುಶಃ ಒಮ್ಮೆ ಈ ಜಲಪಾತ ಹೊರ ಜಗತ್ತಿಗೆ ಬಂದರೆ ಮತ್ತೆ ಆ ಜಾಗದಲ್ಲಿ ರೋಪ್ ವೇ, ರಸ್ತೆ , ಹೋಟೆಲ್, ರೆಸಾರ್ಟ್
ಅಲ್ವಾ ಸಾರ್..
ನಮ್ಮ ಬಂಡವಾಳ ಶಾಹಿ ವ್ಯವಸ್ಥೆ ಇದಕ್ಕೆ ಕಾಯ್ತಿರುತ್ತದೆ.
ಹಾಗಾಗಿ ಈ ಜಲಪಾತ ತೆರೆ ಮರೆಯಲ್ಲೇ ಇರಲಿ ಎಂಬುದು ನನ್ನ ಅಭಿಪ್ರಾಯ ಸಾರ್.
ಅಂದಾಜು ಎಂಟು ಕಿಮೀ ಯೊಳಗೆ..
ಫಾಲ್ಸ್ ಘಟ್ಟದ ಅಂಚಿನಲ್ಲಿದೆ ಮಾಣಿ ಆಣೆಕಟ್ಟುಯಿಂದ ಒಂದು ನೀರು ಹೊಸಂಗಡಿಗೆ ಹೋದರೆ ಒಂದು ನೀರು ಜಲಪಾತ ದಲ್ಲಿ ಧುಮ್ಮಿಕ್ಕುತ್ತದೆ ಅದರ ಹತ್ತಿರ ಹೋಗಿದ್ದೇವೆ ಎನ್ನುತ್ತಾರೆ ಕೆಲವರು ನೋಡೋಣ..
ಸದ್ಯದಲ್ಲೇ ಆ ಭಾಗಕ್ಕೆ ಹೋಗುವನಿದ್ದೇನೆ. ಸ್ಥಳೀಯ ರಿಂದ ಮಾಹಿತಿ ಪಡೆದು ನಿಮಗೆ ತಿಳಿಸುವೆ..
ವಂದನೆಗಳು ಅರುಣ್ ಪ್ರಸಾದ್ ಅವರಿಗೆ
#ಪ್ರಬಂಧ_ಅಂಬುತೀರ್ಥ
Comments
Post a Comment