Blog number 2154. ನಾಡಿನ ಪ್ರಖ್ಯಾತ ಪುಣ್ಯ ಕ್ಷೇತ್ರ ಸಿಗಂದೂರು ವ್ಯಾಪ್ತಿಯ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದ ಪರೋಪಕಾರಿ ರಾಜಣ್ಣ ಜೈನ್ ಅವ್ಯವಹಾರ ಬಯಲಿಗೆ ತಂದಿದ್ದರಿಂದ ಅವರನ್ನ ಜೈಲಿಗೆ ಕಳಿಸಿದ್ದ ಕರೂರು ಬಾರಂಗಿ ಹೋಬಳಿಯ 2013 ರ ಸತ್ಯಕಥೆ ನಂತರ ಅವ್ಯವಹಾರ ಮಾಡಿದ ನಿವೃತ್ತ ಭಾರತೀಯ ಸೇನೆಯ ಯೋದ ಅಮಾನತ್ತಾದರು.
#ತುಮರಿ_ಗ್ರಾಮಪಂಚಾಯತ್_ರಾಜ್ಯದ_ಪ್ರಸಿದ್ದ_ಸಿಗಂದೂರು_ಕ್ಷೇತ್ರ
#ಇಲ್ಲಿನ_ಗ್ರಾಮಪಂಚಾಯಿತಿ_ಸದಸ್ಯರಾಗಿದ್ದ
#ಸಾಲೆಕೊಪ್ಪ ರಾಜಣ್ಣ_ಜೈನ್_ಪರೋಪಕಾರಿ_ಶುದ್ಧಹಸ್ತ
#ಅವರ_ಪಂಚಾಯಿತಿ_ಅವ್ಯವಹಾರ_ಬಯಲು_ಮಾಡಿದ್ದರಿಂದ
#ಅವರನ್ನ_ಜೈಲಿಗೆ_ಕಳಿಸಲಾಗಿತ್ತು
#ಇದನ್ನ_ಪ್ರತಿಭಟಿಸಿ_ತುಮರಿಯಲ್ಲಿ_ಪ್ರತಿಭಟನಾ_ಸಭೆ_ನಡೆಸಿದ್ದೆವು
#ಪಿಡಿಓ_ನಿವೃತ್ತ_ಯೋದ_ಅಮಾನತ್ತು_ಆಗಿ_ಸುಖಾಂತ್ಯ_ಆಯಿತು.
ಒಂದು ಕಾಲದಲ್ಲಿ ಶರಾವತಿ ಹಿನ್ನೀರಿನ ಪ್ರದೇಶ ಕರಾರು ಬಾರಂಗಿ ಹೋಬಳಿ ರಿಪಬ್ಲಿಕ್ ಎಂದೇ ಕರೆಯಬಹುದಾದ ಪ್ರದೇಶ ಆಗಿತ್ತು ಅಲ್ಲಿಗೆ ಬರುವ ಅನುದಾನಗಳು ಲೂಟಿ ಕೋರರ ಖಜಾನೆಗೆ ಸೇರುತ್ತಿತ್ತು ಮತ್ತು ಅದಕ್ಕೆ ಸಾಗರದ ಆಡಳಿತರೂಡರ ಮೊಹರು ಬೀಳುತ್ತಿತ್ತು.
ವಿರೋಧಿಸಿದರೆ ಸುಳ್ಳು ಕೇಸಿನಲ್ಲಿ ಜೈಲು ಗ್ಯಾರಂಟಿ ಇಂತಹದೇ ಪ್ರಸಂಗ 2012ರಲ್ಲಿ ತುಮರಿ ಗ್ರಾಮ ಪಂಚಾಯಿತಿ ಸದಸ್ಯ ಸಾಲೆಕೊಪ್ಪ ರಾಜಣ್ಣ ಜೈನ್ ಅವರ ಜೀವನದಲ್ಲಿ ನಡೆದ ಘಟನೆ ಇಲ್ಲಿ ನಮೂದಿಸಿದ್ದೇನೆ.
ತುಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿ ನಾಡಿನ ಪ್ರಸಿದ್ದ ಧಾರ್ಮಿಕ ಕ್ಷೇತ್ರ ಸಿಗಂದೂರು ದೇವಸ್ಥಾನದ ತನಕ ಇದೆ ಈ ಕ್ಷೇತ್ರದ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆ ಆಗಿದ್ದವರು ತುಮರಿಯ ಸಮಾಜ ಸೇವಕ ಜೈನ ಧರ್ಮದ ಸಾಲೆಕೊಪ್ಪ ರಾಜಣ್ಣ ಜೈನ್ ಇವರು ತುಮರಿ ಯಲ್ಲಿ ಯಾರಿಗಾದರು ಆರೋಗ್ಯ ಏರುಪೇರಾದರೆ ತಮ್ಮ ವಾಹನದಲ್ಲಿ ಸಾಗರ ಆಸ್ಪತ್ರೆಗೆ ಸೇರುಸುವುದರಿಂದ ತುಮರಿ ಸರ್ಕಲ್ ನಲ್ಲಿ ನಾಯಿ ಸತ್ತು ಬಿದ್ದರೂ ಅದರ ವಿಲೇವಾರಿ ಮಾಡುವ ಪರೋಪಕಾರಿ ರಾಜಣ್ಣ ಜೈನರು.
ತುಮರಿ ಗ್ರಾಮ ಪಂಚಾಯಿತಿ ಪಿಡಿಓ ನಿವೃತ್ತ ಯೋದರೊಬ್ಬರು ಬಂದಾಗ ಸಂಭ್ರಮಿಸಿದವರಲ್ಲಿ ಗ್ರಾ.ಪಂ. ಸದಸ್ಯರಾದ ರಾಜಣ್ಣ ಜೈನರು ಮೊದಲಿಗರು ಆದರೆ ನಂತರ ನಡೆದದ್ದು ತುಮರಿ ರಿಪಬ್ಲಿಕ್, ಸರ್ಕಾರದ ಅನುದಾನಗಳ ಲೂಟಿ ಇದನ್ನು ಪ್ರತಿಭಟಿಸಿದ ಗ್ರಾ. ಪಂ. ಸದಸ್ಯರಾದ ರಾಜಣ್ಣ ಜೈನರನ್ನೆ ಜೈಲಿಗೆ ಕಳಿಸಿದ ಪಿ. ಡಿ. ಓ ವಿರುದ್ದ ನನ್ನ ಹೋರಾಟ ನಡೆಯಿತು.
ಜೈಲಲ್ಲಿ ಸಾಲೆಕೊಪ್ಪ ರಾಜಣ್ಣ ಜೈನರ ಬೇಟಿ ಮಾಡಿ ದೈರ್ಯ ನೀಡಿದೆ ನಂತರ ತುಮರಿ ಯಲ್ಲಿ ಪ್ರತಿಭಟನಾ ಸಭೆ ನಡೆಸಿದೆವು ಅಲ್ಲಿ ಜಿ.ಟಿ. ಸತ್ಯನಾರಾಯಣರ ತಂದೆ ತಿಮ್ಮಣ್ಣ (ಅಪ್ಪಯ್ಯ ಆತ್ಮಚರಿತ್ರೆ ಕಥಾನಾಯಕರು) ನಮ್ಮ ಜೊತೆ ಭಾಗಿಯಾಗಿದ್ದರು ನಂತರ ಭಾರತೀಯ ಸೈನ್ಯದಲ್ಲಿ ಯೋದನಾಗಿ ತುಮರಿ ಗ್ರಾ.ಪಂ. ಪಿಡಿಓ ಅವ್ಯವಹಾರ ಸಾಬೀತಾಗಿ ಅಮಾನತ್ತಾದರು.
Comments
Post a Comment