#ಶಿವಮೊಗ್ಗದಲ್ಲಿ_1974ರಲ್ಲಿ_ನಡೆದ_ರಣಜಿ_ಟ್ರೋಪಿ
#ನೆಹರೂ_ಸ್ಟೇಡಿಯಂನಲ್ಲಿ_ಮೂರು_ದಿನ_ನಡೆದಿತ್ತು.
#ದೇಶದ_ಟೆಸ್ಟ್_ಅರ್ದ_ತಂಡ_ರಣಜಿ_ತಂಡವಾಗಿತ್ತು
#ಅದೇ_ವರ್ಷ_ಜೈಪುರದಲ್ಲಿ_ರಣಜಿ_ಫೈನಲ್_ಟ್ರೋಪಿ_ಈ_ತಂಡ_ಗೆದ್ದಿತ್ತು.
#ಪ್ರಸನ್ನ_ಕ್ಯಾಪ್ಟನ್
#ಪ್ರಸನ್ನ_ಜಿ_ಆರ್_ವಿಶ್ವನಾಥರು_ಶಿವಮೊಗ್ಗದವರು.
#Cricket #Ranaji #Shivamogga #Nehrustadium
1974ರ ನವೆಂಬರ್ ನಲ್ಲಿ ಶಿವಮೊಗ್ಗದಲ್ಲಿ ನಡೆದ ರಣಜಿ ಟ್ರೋಪಿ ನನ್ನ 10ನೇ ವಯಸ್ಸಿನಲ್ಲಿ ನೋಡಿದ್ದು ನನ್ನ ವಿಶೇಷ ಅನುಭವ.
ಅವತ್ತಿನ ರಣಜಿ ತಂಡದಲ್ಲಿ ಕರ್ನಾಟಕ ಪ್ರತಿನಿಧಿಸಿದ ಬಹುತೇಕರು ನಮ್ಮ ದೇಶದ ಟೆಸ್ಟ್ ಕ್ರಿಕೆಟ್ ತಂಡದಲ್ಲಿದ್ದರು.
ಅದೇ ವರ್ಷ ಜೈಪುರದಲ್ಲಿ ನಡೆದ ರಣಜಿ ಫೈನಲ್ ನಲ್ಲಿ ಕರ್ನಾಟಕ ಟ್ರೋಪಿ ಗೆದ್ದಿತ್ತು.
ಟ್ರೋಪಿಯೊಂದಿಗೆ ಕರ್ನಾಟಕ ತಂಡ ರಾಜಸ್ಥಾನದ ಜೈಪುರದಿಂದ ದ್ವಿತಿಯ ದರ್ಜೆ ರೈಲು ಡಬ್ಬಿಯಲ್ಲಿ ಪ್ರಯಾಣಿಸಿ ಬೆಂಗಳೂರು ತಲುಪಿತ್ತು.
ಇನ್ನೊಂದು ವಿಶೇಷ ಅಂದರೆ 1974ರಲ್ಲಿ ಶಿವಮೊಗ್ಗದಲ್ಲಿ ಜ್ಯೂವೆಲ್ ರಾಕ್ ಹೋಟೆಲ್ ಕಾರ್ಯಾರಂಭ ಮಾಡಿತ್ತು ಆದರೆ ಅದರ ಬಾಡಿಗೆ ದುಬಾರಿ ಎಂದು ಇಡೀ ರಣಜಿ ತಂಡವನ್ನು ಶಿವಮೊಗ್ಗದ ದುರ್ಗಾ ಲಾಡ್ಜ್ ನಲ್ಲಿ ಉಳಿಸಿದ್ದರಂತೆ.
ಅವತ್ತಿನ ಪಂದ್ಯದ ಪ್ರವೇಶ ದರ ಎರೆಡು ರೂಪಾಯಿ, ಮೂರು ದಿನದ ಪಂದ್ಯದ ಸೀಸನ್ ಟಿಕೇಟ್ ದರ ಐದು ರೂಪಾಯಿ.
ನನ್ನ ಲೇಖನ ಓದಿದ ಕೆಲವರ ಪ್ರತಿಕ್ರಿಯೆ ಇನ್ನೊಮ್ಮೆ
#ರವೀಶ್_ನಿಟ್ಟೂರು ಪ್ರತಿಕ್ರಿಯೆ...
ನಾನು , ನನ್ನ ಚಿಕ್ಕಪ್ಪ , ಅವರ ಮಗ ಮೂರೂ ದಿನ ನೋಡಿದ್ದೆವು . ಮೂರನೇ ದಿನ ಬೇಗ ಮುಗಿದಿತ್ತು 👍
#ತುಂಬೆಸುಬ್ರಾಯರ_ಮೊಮ್ಮಗ ನಿವೃತ್ತ ಪ್ರಿನ್ಸಿಪಾಲ್ #ನರಹರಿ ಪ್ರತಿಕ್ರಿಯೆ...
ಆ ಪಂದ್ಯಕ್ಕೆ ನಾನೂ ಹೋಗಿದ್ದೆ.
ಸಾಗರದ ಖ್ಯಾತ ಕ್ರಿಕೆಟ್ ಪಟು #ನಾಗೇಂದ್ರ_ಪಂಡಿತ್ ಪ್ರತಿಕ್ರಿಯೆ...
I watched that match for all the three days.
ನಿವೃತ್ತ DFO #ಲಕ್ಷ್ಮಿನಾರಾಯಣರ ಪ್ರತಿ ಕ್ರಿಯೆ....
ಆಗಷ್ಟೇ jewel rock hotel ಶುರುವಾಗಿತ್ತು ಅದು costly ಅಂತ ಆಟಗಾರರು ದುರ್ಗಾ ಲಾಡ್ಜಿನಲ್ಲಿ ತಂಗಿದ್ದರು.
#ಪ್ರಶಾಂತ್_ಹೆಗಡೆ ಪ್ರಸಿದ್ದ ಜಾದೂಗಾರರ ಪ್ರತಿಕ್ರಿಯೆ...
ನಾನು ನೋಡಿದ್ದೆ,
ಒಂದು ದಿನದ ಟಿಕೆಟ್ ಗೆ ಎರಡು ರೂ ಸೀಜನ್ ಟಿಕೆಟ್ ಗೆ ಐದು ರೂ ಇತ್ತು.
ನಾನು ಸೀಜನ್ ಟಿಕೆಟ್ ಖರೀದಿ ಮಾಡಿ ನೋಡಿದ್ದೆ,ಕರ್ನಾಟಕ ರಣಜಿ ತಂಡದಲ್ಲಿ ಅರ್ದಕ್ಕೂ ಹೆಚ್ಚು ಜನ ಇಂಡಿಯಾ ತಂಡದ ಟೆಸ್ಟ್ ಮ್ಯಾಚ್ ನ ಆಟಗಾರರು ಇದ್ದರು. ಆಗಿನ ಕಾಲದಲ್ಲಿ ಹೆಚ್ಚಾಗಿ ನಮ್ಮ ಕರ್ನಾಟಕದವರೇ ಟೆಸ್ಟ್ ಮ್ಯಾಚ್ ತಂಡದಲ್ಲಿ ಇದ್ದರು.
Comments
Post a Comment