Blog number 1033. ನಮ್ಮ ಆಸ್ಥಾನ ಜೋತಿಷಿ ಕೆರೆಹಿತ್ತಲು ಕಲ್ಮಕ್ಕಿ ಬೂದ್ಯಪ್ಪ ಗೌಡರು ನಮ್ಮ ಮಲ್ಲಿಕಾ ವೆಜ್ ಪ್ರಾರಂಭದ ಪೂಜೆ ಮಾಡಿದವರು ಮತ್ತು ಪ್ರತಿವರ್ಷ ಲಕ್ಷ್ಮೀ ಪೂಜೆ ಮಾಡುವವರು ಇವರು ಹೇಳಿದ ನನ್ನ ಭವಿಷ್ಯಗಳು ಯಾವುದೂ ಸುಳ್ಳಾಗಿಲ್ಲ
#ಮಲ್ಲಿಕಾ_ವೆಜ್_ಹತ್ತನೇ_ವರ್ಷದ_ಲಕ್ಷ್ಮೀಪೂಜೆ
#ನಮ್ಮ_ಬೂದ್ಯಪ್ಪ_ಗೌಡರ_ಸಂಬಂದಕ್ಕೆ_ಮೂವತ್ತು_ವರ್ಷ
#ಇವರು_ನನಗೆ_ಹೇಳಿದ_ಭವಿಷ್ಯಗಳೆಲ್ಲ_ಸತ್ಯವಾಗಿದೆ.
#ಇವತ್ತಿನ_ಲಕ್ಷ್ಮೀ_ಪೂಜೆ_ಅವರಿಂದ
ಪ್ರಖ್ಯಾತ ಜೋತಿಷಿಗಳಾದ ಡಾ.ಎನ್.ಎಸ್.ವಿಶ್ವಪತಿ ಶಾಸ್ತ್ರೀಗಳು(ದೇವೇಗೌಡರು ಪ್ರದಾನಿ ಆಗುತ್ತಾರೆಂದು ಜೋತಿಷ್ಯ ಹೇಳಿದವರು)ನನ್ನ ಮಾರ್ಗದರ್ಶಕರು, ನಮ್ಮ ಊರಿನ ವರಸಿದ್ಧಿ ವಿನಾಯಕ ಸ್ವಾಮಿ ದೇವಾಲಯ ನಿರ್ಮಿಸುವ ಬಾಗ್ಯ ನನ್ನ ಪೂರ್ವಿಕರ ಪುಣ್ಯದಿಂದ ನನಗೆ ಲಭಿಸಿದಾಗ ಅದರ ನಿರ್ಮಾಣ ಮತ್ತು ಪ್ರತಿಷ್ಟಾಪನೆಯ ನೇತೃತ್ವ ವಹಿಸಿದವರು ಅವರು ಆನಂದಪುರಂ ಹೋಬಳಿ ತ್ಯಾಗತಿ೯ಯ ಇನಾಂದಾರರ ಅಳಿಯ, ನನ್ನ ತಂದೆ ತಾಯಿ ಹೆಸರಲ್ಲಿ 23-ಡಿಸೆಂಬರ್ - 2007 ರಲ್ಲಿ ಕಲ್ಯಾಣ ಮಂಟಪ ಇವರ ವಾಸ್ತು ಪ್ರಕಾರವೇ ನಿರ್ಮಿಸಿದೆ, ನಮ್ಮ ತಂದೆ ಕೃಷ್ಣಪ್ಪ ಮತ್ತು ನಮ್ಮ ತಾಯಿ ಸರಸಮ್ಮರ ಹೆಸರು ಸೇರಿಸಿ ಶ್ರೀ ಕೃಷ್ಣ ಸರಸ ಕನ್ವೆನ್ಷನ್ ಹಾಲ್ ಎಂದು ನಾಮಕರಣ ಮಾಡಿದವರು ಶಾಸ್ತ್ರೀಗಳು.
ಇವರ ಪ್ರೇರಣೆಯಿಂದಲೇ 2012 ಜನವರಿ 26 ರಂದು ನಮ್ಮ ಮೊದಲಿನ ಲಾಡ್ಜ್ ಹೊಂಬುಜ ರೆಸಿಡೆನ್ಸಿ ಪ್ರಾರಂಬಿಸಿದ ನಂತರ ನಮಗೆ ದೊಡ್ಡ ಸವಾಲು ಅತಿಥಿಗಳಿಗೆ ಊಟ-ಉಪಹಾರ ಸರಬರಾಜು.
ಈ ಸಂದರ್ಭದಲ್ಲಿ ಅನಿವಾರ್ಯವಾಗಿ ವೆಜ್ ರೆಸ್ಟೋರೆಂಟ್ ನಾವೇ ಪ್ರಾರಂಬಿಸಬೇಕಾಯಿತು ಹೀಗೆ 28- ಸೆಪ್ಟೆಂಬರ್ -2012 ರಲ್ಲಿ ನಮ್ಮ ಕಲ್ಮಕ್ಕಿ ಬೂದ್ಯಪ್ಪ ಗೌಡರಿಂದ ಪೂಜೆಯ ಮೂಲಕ ಪ್ರಾರಂಬಿಸಿ ಎರೆಡು ತಿಂಗಳ ನಂತರವೇ ರೆಸ್ಟೋರೆಂಟ್ ಗೆ ಗೋವಾದ ಕಾನಕೋಣ್ ದ ಗಾಂವ್ಡೊಂಗ್ರಿಂನ ಅಸ್ಲಿ ಮಲ್ಲಿಕಾರ್ಜುನ ದೇವರಲ್ಲಿ ಪ್ರಾರ್ಥನೆ ಮಾಡಿ ಮಲ್ಲಿಕಾ ವೆಜ್ ಎಂಬ ಬೋರ್ಡ್ ಹಾಕಿದೆವು.
ಅವತ್ತಿಂದ ಇವತ್ತಿನವರೆಗೆ ಪ್ರತಿವರ್ಷ ಮಲ್ಲಿಕಾ ವೆಜ್ ನ ಲಕ್ಷ್ಮೀ ಪೂಜೆ ಮಾಡುವುದು ಬೂದ್ಯಪ್ಪ ಗೌಡರೆ, ಇವರು ಜೋತಿಷಿಗಳು ಆದರೆ ಎಲ್ಲೂ ಪೂಜೆ ಮಾಡುವವರಲ್ಲ ಆದರೆ ಪ್ರತಿ ವರ್ಷ ನಮ್ಮಲ್ಲಿ ಪೂಜೆ ಅವರದ್ದೇ , ಪೂಜಾ ಕ್ರಮ ಅವರು ಕಲಿತಿಲ್ಲದಿದ್ದರೂ ಅವರಿಂದನೇ ನಾನು ಪೂಜೆ ಮಾಡಿಸಲು ಕಾರಣ ಅವರ ಆತ್ಮಶುದ್ದ ಮತ್ತು ಅವರ ಪ್ರಾಮಾಣಿಕವಾಗಿ ನಮ್ಮ ಉದ್ಯಮದ ಶ್ರೇಯೋಭಿವೃದ್ಧಿಗಾಗಿ ಹಾರೈಸುವ ಹಾರೈಕೆ ನನಗೆ ಮುಖ್ಯ.
ನಮ್ಮ ಅವರ ಗೆಳೆತನಕ್ಕೆ 30ನೇ ವಾರ್ಷಿಕೋತ್ಸವ ಇವರ ತಂದೆ ಕಲ್ಮಕ್ಕಿ ಕೆಂಜಿಗಪ್ಪ ಗೌಡರು ನಮ್ಮ ತಂದೆಯ ಗೆಳೆಯರು, ಅವರ ಕಿವಿಗಳು ದೊಡ್ಡದು ನಾನು ಚಿಕ್ಕವನಾಗಿದ್ದಾಗ ನಮ್ಮ ಮನೆಗೆ ಬಂದಾಗೆಲ್ಲ ನನಗೆ ಚಾರ್ಲಿ ಅಂತ ತಮಾಷೆಗೆ ಕರೆಯುತ್ತಿದ್ದರು ನಾನು ಅವರಿಗೆ ಆನೆ ಕಿವಿ ಗೌಡರು ಅಂತಿದ್ದೆ ಅಷ್ಟು ವಿಶ್ವಾಸ ನಮ್ಮ ತಂದೆ ಮತ್ತು ಅವರದ್ದು.
ಬೂದ್ಯಪ್ಪ ಗೌಡರು ಕಳೆದ 30 ವರ್ಷದಲ್ಲಿ ನಮ್ಮ ಕಷ್ಟ ಮತ್ತು ಸುಖದಲ್ಲಿ ಜೊತೆಯಾಗಿದ್ದಾರೆ ಮತ್ತು ಅವರು ನಮ್ಮ ಭವಿಷ್ಯಗಳನ್ನು ಹೇಳಿದ್ದೆಲ್ಲ ಯಾವಾಗಲೂ ಸುಳ್ಳಾಗಲಿಲ್ಲ, ನನ್ನ ಮಕ್ಕಳ ಜಾತಕ ಬರೆದವರು ಇವರು ಆದ್ದರಿಂದನೇ ನಾವು ಕಲ್ಮಕ್ಕಿ ಬೂದ್ಯಪ್ಪ ಗೌಡರನ್ನು ಆಸ್ಥಾನ ಜೋತಿಷಿಗಳೆಂದೆ ಕರೆಯುವುದು.
Comments
Post a Comment