Blog number 1002. ನನ್ನ ಬ್ಲಾಗ್ ಲೇಖನಗಳ ಸಂಖ್ಯೆ ಸಾವಿರ ದಾಟಿದ ಸಂಭ್ರಮದಲ್ಲಿ ಎಲ್ಲಾ ಸಾಮಾಜಿಕ ಜಾಲ ತಾಣದ ಬರಹಗಾರರಿಗೆ ನನ್ನ ವಿನಂತಿ ನಿಮ್ಮದೇ ಬ್ಲಾಗ್ ಮಾಡಿಕೊಳ್ಳಿ ಅದರಲ್ಲಿ ನಿಮ್ಮ ಲೇಖನ ಸುರಕ್ಷಿತವಾಗಿರಲಿ.
#ಆಲ್_ಇಂಡಿಯಾ_ರೇಡಿಯೋ_ಸುದೀ೦ದ್ರರು_ಸಾವಿರ_ಲೇಖನಕ್ಕೆ_ಮೊದಲಿಗೆ_ಶುಭಹಾರೈಸಿದ್ದರು.
#ನಾನು_ಬ್ಲಾಗಲ್ಲಿ_ಬರೆಯಲು_ಪ್ರಾರಂಬಿಸಿದ್ದು_1_ಜನವರಿ_2017.
#ಪೇಸ್_ಬುಕ್_2010ರಿಂದ_ಲ್ಯಾಪ್_ಟಾಪಲ್ಲಿ_ಪ್ರಾರಂಬಿಸಿದ್ದೆ.
2010ರಲ್ಲಿ ಪೇಸ್ ಬುಕ್ ಆಗ ಈಗಿನಷ್ಟು ಸುಲಭವಾಗಿ ಸೆಲ್ ಫೋನಿನಲ್ಲಿ ಬಳಸಲಾಗುತ್ತಿರಲಿಲ್ಲ ಆದ್ದರಿಂದ ಲ್ಯಾಪ್ ಟಾಪ್ ನಲ್ಲಿ ನಾನು ಪೇಸ್ ಬುಕ್ ಬರವಣಿಗೆ ಪ್ರಾರಂಬಿಸಿ 22 ವರ್ಷ ಆಯಿತು.
ಆದರೆ ಕಳೆದ 22 ವಷ೯ದಲ್ಲಿ ಬರೆದ ಲೇಖನ ಲಗತ್ತಿಸಿದ ಪೋಟೋಗಳು ಕೆಲ ಸಾವಿರ ಆಗಿರಬಹುದು ಆದರೆ ಅದನ್ನೆಲ್ಲ ಬೇಕೆಂದರೆ ಸಿಗುವುದಿಲ್ಲ ಕೆಲವೊಮ್ಮೆ ಮೆಮೋರಿಸ್ ನಲ್ಲಿ ಪೇಸ್ ಬುಕ್ ಅನುಗ್ರಹಿಸಿದರೆ ನಾನು ಗಬಕ್ಕೆಂದು ಹಿಡಿದಿಡುವ ಕೆಲಸ ಮಾಡುತ್ತೇನೆ.
ಸಮಯ - ಶ್ರಮ ಮತ್ತು ಸಂಯಮಗಳನ್ನು ಕಳೆದುಕೊಂಡು ಬರೆದದ್ದಾದರೂ ಏಕೆ? ಎಂಬ ಪ್ರಶ್ನೆ ಮಾಡಿಕೊಂಡರೆ ಎಲ್ಲಾ ಸಾಮಾಜಿಕ ತಾಣದ ಬರಹಗಾರರಿಗೆ ಅರ್ಥವಾದೀತು ಈ ಎಲ್ಲಾ ಲೇಖನ ಖಾಯಂ ಆಗಿ ರಕ್ಷಿಸಿದ್ದರೆ ಬೇಕೆಂದಾಗ ಅದನ್ನು ತೆರೆದು ನೋಡಬಹುದಾಗಿತ್ತು ಅಂತ.
ಆದ್ದರಿಂದಲೇ 2017 ಜನವರಿ 1 ರಿಂದ ನಾನು ನನ್ನ ಲೇಖನಗಳನ್ನು ಪೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ ನಂತರ ಆ ಲೇಖನಗಳನ್ನು ನನ್ನ ಬ್ಲಾಗ್ ನಲ್ಲೂ ಪ್ರಕಟಿಸಲು ಪ್ರಾರಂಬಿಸಿದೆ ಇದರಿಂದ ಇವತ್ತಿನವರೆಗೆ 1001 ಲೇಖನ ಮತ್ತು ಅಮೂಲ್ಯ ಚಿತ್ರಗಳು ನನ್ನ ಬ್ಲಾಗ್ ನಲ್ಲಿ ಭದ್ರವಾಗಿ ಸಂರಕ್ಷಿಸಲ್ಪಟ್ಟಿದೆ.
ಕಳೆದ ಜೂನ್ ತಿಂಗಳ 29ಕ್ಕೆ 900 ಲೇಖನಗಳಾಗಿತ್ತು ಇವತ್ತು 6 ಅಕ್ಟೋಬರ್ ಗೆ ಬ್ಲಾಗ್ ಲೇಖನಗಳ ಸಂಖ್ಯೆ 1000 ತಲುಪಿದೆ.
https.//arunprasadhombuja.blogspot.comಎಂಬ ಬ್ಲಾಗ್ ಮಾಡಿಕೊಟ್ಟವರು ಐಟಿ ತಂತ್ರಜ್ಞ ನವೀನ್ ರವರು.
ಮೊನ್ನೆ ಬ್ಲಾಗ್ ಲೇಖನ 1000 ಕ್ಕೆ ತಲುಪುತ್ತಿರುವ ಬಗ್ಗೆ ಮತ್ತು 1000 ದ ಲೇಖನ ಯಾವುದಾಗಬಹುದು? ಎಂದು ಅಡ್ವಾನ್ಸ್ ಶುಭ ಹಾರೈಕೆ ಮಾಡಿದವರು #ಆಲ್_ಇಂಡಿಯಾ_ರೇಡಿಯೋದ_ಸುದೀಂದ್ರರು.
#ನನ್ನ_ಬ್ಲಾಗ್_ನ_999 ನೇ ಲೇಖನ ಒಂದು ಕಾಲದಲ್ಲಿ ಕಾಡುತ್ತಿದ್ದ ಕಜ್ಜಿ ಬಗ್ಗೆಯದಾದರೆ https://arunprasadhombuja.blogspot.com/2022/10/blog-number-999-1970.html.
#1000ದ_ಲೇಖನ ಜಾನಪದ ಅಕಾಡೆಮಿ ಪ್ರಶಸ್ತಿ ಪಡೆದಿದ್ದ ನಮ್ಮೂರಿನ ಬಡ ಕಿನ್ನರಿ ಜೋಗಿ ನಿಂಗಪ್ಪರದ್ದುhttps://arunprasadhombuja.blogspot.com/2022/10/blog-number-1000-2016.html.
#ಸಾವಿರ_ದಾಟಿದ_1001 ನೇ ಲೇಖನ ನಾನು ಕೃಷಿ ವಿಜ್ಞಾನಿ ಎಂದೇ ಕರೆಯುವ ನಾಗೇಂದ್ರ ಸಾಗರ್ ದು .https://arunprasadhombuja.blogspot.com/2022/10/blog-number-1001.html
ಸಾಮಾಜಿಕ ಜಾಲ ತಾಣದಲ್ಲಿ ಮಾಹಿತಿಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೇ, ಲಕ್ಷಾಂತರ ಬರಹಗಾರರು ಸೃಷ್ಟಿ ಆಗಿದ್ದಾರೆ ಅವರೆಲ್ಲರ ಲೇಖನ ಓದಲು ಕೊಟ್ಯಾಂತರ ಓದುಗರ ವೇದಿಕೆ ಉಂಟಾಗಿದೆ ಆದ್ದರಿಂದ ಬರಹಗಾರರ ಪ್ರತಿಯೊಂದು ಲೇಖನವೂ ಸಂಗ್ರಹ ಯೋಗ್ಯವಾದ್ದರಿಂದ #ಎಲ್ಲಾ_ಬರಹಗಾರರಿಗೆ_ನನ್ನ_ವಿನಂತಿ ನಿಮ್ಮದೇ ಒಂದು ಬ್ಲಾಗ್ ಇರಲಿ ಅದರಲ್ಲಿ ನಿಮ್ಮ ಎಲ್ಲಾ ಪೇಸ್ ಬುಕ್ ಲೇಖನವೂ ಸುರಕ್ಷಿತವಾಗಿರಲಿ.
Comments
Post a Comment