Blog number 1450. ಮಂಕಿ ಪ್ರೂಟ್ ಎಂಬ ಹೆಸರಲ್ಲಿ ಕರೆಯುವ ಮಂಗಗಳ ಪ್ರಿಯವಾದ ವಾಟೆ ಹಣ್ಣಿನಿಂದ ಮಾಡುವ ವಾಟೆ ಹುಳಿ ಎಂಬ ಸಂಪ್ರದಾಯಿಕ ಬಳಕೆಯ ಹುಳಿ
https://youtu.be/yK5HJ6YhpmU
#ಈ_ವರ್ಷದ_ಬಳಕೆಗೆ_ವಾಟೆ_ಹುಳಿ_ಬಂದಿದೆ.
#ವಾಟೆಹುಳಿಗೆ_Monkeyjack_Monkeyfruit_ಅಂತಲು_ಕರೆಯುತ್ತಾರೆ
#ಮಂಗಗಳಿಗೆ_ವಾಟೆಹಣ್ಣು_ತುಂಬಾ_ಇಷ್ಟದ್ದು
#ಟೊಮಾಟಾ_ವಿನೆಗರ್_ಬಳಕೆಯಿಂದ_ಸಂಪ್ರದಾಯಿಕ_ಹುಳಿಗಳು_ಅಪರಿಚಿತವಾಗುತ್ತಿದೆ.
#ಮ೦ಗಗಳ_ಕಾಟ_ನಿವಾರಿಸಲು_ವಾಟೆಮರ_ಅರಣ್ಯಗಳಲ್ಲಿ_ತೋಟದ_ಅಂಚಿನಲ್ಲಿ_ಬೆಳೆಸಿದರೆ_ಪರಿಹಾರ_ಸಿಗಬಹುದಾ?
ಹುಣುಸೆ ಹಣ್ಣು, ಮಾವಿನ ಹುಳಿ, ಉಪ್ಪಾಗೆ ಹುಳಿ, ಕವಳಿಕಾಯಿ ಹುಳಿ, ಮುರುಗನ ಹುಳಿ ಮತ್ತು ವಾಟೆ ಹುಳಿಗಳು ಪಶ್ಚಿಮ ಘಟ್ಟದ ಮಲೆನಾಡಿನಲ್ಲಿ ಹೆಚ್ಚು ಬಳಕೆ ಮಾಡುವ ಸಂಪ್ರದಾಯಿಕ ಹುಳಿಗಳಾಗಿದೆ.
ಕೊಡಗಿನ ಪುನರ್ಪುಳಿ ಹುಳಿ ಅಲ್ಲಿನ ಸ್ಥಳೀಯ ಸಿಗ್ನೇಚರ್ ಪುಡ್ ಪಂದಿ ಕರಿಯಲ್ಲಿ ಬಳಸುವುದರಿಂದ ಅಲ್ಲಿನ ಪುನರ್ಪುಳಿಯ ಸಾಸ್ ಗೆ ದೇಶ ವಿದೇಶಗಳಲ್ಲಿ ಬೇಡಿಕೆ ಬಂದಿದೆ.
ಆದುನಿಕ ಪಾಕ ವಿಧಾನಗಳಲ್ಲಿ ಟೊಮೊಟಾ, ವಿನಿಗರ್ ಬಳಕೆಯಿಂದ ಸಂಪ್ರದಾಯಿಕ ಹುಳಿಗಳ ಬಳಕೆ ತುಂಬಾ ಕಡಿಮೆ ಆಗಿದೆ.
ಮಲೆನಾಡಿನಲ್ಲಿ ಯಥೇಚವಾಗಿ ನೈಸರ್ಗಿಕವಾಗಿ ಬೆಳೆಯುತ್ತಿದ್ದ ಮಾವಿನಕಾಯಿ ಸಿಪ್ಪೆ ತೆಗೆದು ಉದ್ದದ ಹೋಳುಗಳನ್ನು ಒಣಗಿಸಿ ವರ್ಷ ಪೂರ್ತಿ ಅಡುಗೆಗೆ ಬಳಸುತ್ತಿದ್ದರು ಇದೇ ರೀತಿ ಉಪ್ಪಾಗೆ, ಮುರುಗನ ಹುಳಿ ಮತ್ತು ವಾಟೆ ಹುಳಿಗಳು ಬಳಸುತ್ತಿದ್ದ ಕಾಲ ಈಗ ಇಲ್ಲ.
ನಾನು ಪ್ರತಿ ವರ್ಷ ಸ್ವಲ್ಪ ವಾಟೆ ಹುಳಿ ಖರೀದಿಸುತ್ತೇನೆ ಆದರೆ ವಾಟೆ ಹಣ್ಣಿನ ಮರಗಳು ನಮ್ಮ ಭಾಗದಲ್ಲಿ ಅತಿ ವಿರಳವಾಗಿದೆ ಕೆಲವೆ ಕೆಲವರ ಮನೆಗಳಲ್ಲಿ ಇದೆ ಆದರೂ ವೇಗದ ಜೀವನ ಶೈಲಿಯಲ್ಲಿ ವಾಟೆ ಕಾಯಿ ಸ೦ಗ್ರಹಿಸಿ ತೆಳುವಾಗಿ ಹೋಳಿನ ಬಾಗಗಳಾಗಿ ಕತ್ತರಿಸಿ ಅದರ ಬೀಜಗಳನ್ನು ತೆಗೆದು, ಉಪ್ಪಿನ ನೀರಲ್ಲಿ ಮುಳುಗಿಸಿ ಅನೇಕ ದಿನ ಸೂರ್ಯನ ಬಿಸಿಲಲ್ಲಿ ಒಣಗಿಸುವ ವ್ಯವದಾನ ಇರುವುದಿಲ್ಲ ಅಥವ ಹೆಚ್ಚು ಮಾನವ ದಿನದ ಶ್ರಮದ ಲೆಖ್ಖದಿಂದ ಇದು ದುಭಾರಿ ಆಗುವುದೂ ಒಂದು ಕಾರಣವಾಗಿರಬಹುದು.
ವಾಟೆ ಹುಳಿಯಲ್ಲಿ ಅನೇಕ ಆರೋಗ್ಯ ಸಂಬಂದಿ ಔಷದದ ಗುಣವಿದೆ, ಕಾಳು ಮೆಣಸು ಮತ್ತು ವಾಟೆ ಹುಳಿ ಶೀಥ ಕೆಮ್ಮು ನಿವಾರಕವಾಗಿ ಬಳಸುತ್ತಾರೆ.
Comments
Post a Comment