Blog number 1399. ಪ್ರತಿ ಊರಿನಲ್ಲೂ Ketto ಮಾದರಿಯ ಕ್ರೌಡ್ ಪಂಡಿಂಗ್ ರಚನೆ ಮಾಡಿಕೊಂಡು ಅಶಕ್ತರಿಗೆ ನೆರವು ನೀಡಲು ಸಾಧ್ಯವಿದೆ.
#ಒಬ್ಬನೆ_ವ್ಯಕ್ತಿ_2_ಲಕ್ಷ_ದೇಣಿಗೆ_ನೀಡುವ_ಜಾಗದಲ್ಲಿ_2_ಲಕ್ಷ_ಜನ_ಸೇರಿ_ತಲಾ_1_ರೂಪಾಯಿ_ನೀಡಿದರೆ...
#Ketto_ಭಾರತೀಯ_ಆನ್ಲೈನ್_ಕ್ರೌಡ್_ಪಂಡಿಂಗ್_ಪ್ಲಾಟ್_ಪಾರಂ .
#ಮೈಸೂರಿನ_ಕನ್ನಡ_ಪ್ರೇಮಿ_ಸ್ಯೆಯದ್_ಇಷಾಕ್_ಗ್ರಂಥಾಲಯ_ಪುನರ್_ನಿಮಾ೯ಣಕ್ಕೆ
#ದಾನಿಗಳಿಂದ_ಸಹಾಯ_ಮಾಡಲು_ಮುಂದೆ_ಬಂದಿತ್ತು.
#ಇಪ್ಪತ್ತು_ಲಕ್ಷ_ಸಂಗ್ರಹಿಸುವ_ಗುರಿಯಲ್ಲಿ_ಸುಮಾರು_12_ಲಕ್ಷ_ಸಂಗ್ರಹಿಸಿತ್ತು
#ಸೈಯದ್_ಇಷಾಕ್_ಆಲಿ_ಹಣ_ನಿರಾಕರಿಸಿದ್ದರಿಂದ_Ketto_ದಾನಿಗಳಿಗೆ_ವಾಪಾಸ್_ಮಾಡಿತು.
#ಇ೦ತಹ_ಕ್ರೌಡ್_ಪಂಡಿಂಗ್_ಪ್ರತಿ_ಊರಲ್ಲೂ_ವ್ಯವಸ್ಥೆ_ಮಾಡಬಹುದು.
#ಇದಕ್ಕೆ_ಉದಾಹರಣೆ_ತೀರ್ಥಹಳ್ಳಿ_ಟಿಕೆ_ರಮೇಶ್_ಶೆಟ್ಟರು_ಸೈಕಲ್_ಕಳೆದು_ಕೊಂಡವರಿಗೆ_ಸೈಕಲ್_ಕೊಡಿಸಿದ್ದು.
ಇಲ್ಲಿ ಎರೆಡು ವಿಚಾರ ಇದೆ ಕನ್ನಡ ಪ್ರೇಮಿ ಮುಸ್ಲಿ೦ ದಮಿ೯ಯರಾದ ಮೈಸೂರಿನ ಪ್ಲಂಬಿಂಗ್ ವೃತ್ತಿಯ ಆದರೆ ಕನ್ನಡ ಗ್ರಂಥಾಲಯ ನಡೆಸುವ ಪ್ರವೃತ್ತಿಯ ಸೈಯದ್ ಇಷಾಕರ ಗ್ರಂಥಾಲಯ ಕಿಡಿಗೇಡಿಗಳು ಸುಟ್ಟಿದ್ದಾರೆ ಇದನ್ನು ಅನೇಕರು ಖಂಡಿಸಿದ್ದಾರೆ ಪುನಃ ಇವರಿಗೆ ಗ್ರಂಥಾಲಯ ಕಟ್ಟಿಸಿ ಕೊಡಬೇಕೆಂದು ಬಯಸಿದ್ದಾರೆ ಆದರೆ ಹೇಗೆ? ಗೊತ್ತಿಲ್ಲ? ಹಣವಂತರು ಮತ್ತು ಸಕಾ೯ರ ಮನಸ್ಸು ಮಾಡಿದರೆ ಮಾತ್ರ ಸಾಧ್ಯ ಎಂದು ನಿಟ್ಟುಸಿರು ನಮ್ಮದೆಲ್ಲ ಅಲ್ಲವೆ?.
ಆದರೆ ಇದಕ್ಕೆಲ್ಲ ಪರಿಹಾರ ಸಾಧ್ಯ ಅಂತ ಅದನ್ನು ಸಾದಿಸಿ ತೋರಿಸುವ ಅನೇಕ ಕ್ರೌಡ್ ಪಂಡಿಂಗ್ ಸಂಸ್ಥೆಗಳು ಭಾರತದಲ್ಲಿದೆ ಇದರಲ್ಲಿ Ketto ಎಂಬ ಆನ್ ಲೈನ್ ಕ್ರೌಡ್ ಪಂಡಿಂಗ್ ಪ್ಲಾಟ್ ಪಾರಂ ನ ಕೆಲಸ ಗಮನಾರ್ಹ.
ಮುಂಬೈ ಕೇಂದ್ರ ಕಛೇರಿ ಹೊಂದಿರುವ ಈ ಸಂಸ್ಥೆಗೆ 55 ಲಕ್ಷಕ್ಕೂ ಹೆಚ್ಚಿನ ದಾನಿಗಳಿದ್ದಾರೆ, ಈವರೆಗೆ ಇದು ಸಾಮಾಜಿಕ ಕಳಕಳಿಗಾಗಿ ಸಂಗ್ರಹಿಸಿ ನೀಡಿದ ಮೊತ್ತ 1100 ಕೋಟಿಗೂ ಹೆಚ್ಚು ಅಂದರೆ ಅಥ೯ವಾಗುತ್ತದೆ.
ಇದನ್ನು ಸ್ಥಾಪಿಸಿದವರು ವರುಣ್ ಶೇತ್ ಮತ್ತು ಚಲನಚಿತ್ರ ನಟ ಕುನಾಲ್ ಕಪೂರ್,ketto online ventures Pvt Ltd ಸಂಸ್ಥೆ CEO ವರುಣ್ ಶೇತ್ ಮತ್ತು CTO ಜಾಹೀರ್ ಅಡೆನ್ ವಾಲಾ ಈ ಸಂಸ್ಥೆ 2012ರ ಡಿಸೆಂಬರ್ 12ರಂದು ಸ್ಥಾಪಿಸಿದ್ದರು.
ಈಗ 75 ದೇಶಗಳಲ್ಲಿ ದಾನಿಗಳಿದ್ದಾರೆ, ಸಾವಿರಾರು ರೋಗಿಗಳಿಗೆ, ಮಕ್ಕಳಿಗೆ, ಅಶಸಕ್ತರಿಗೆ ಈ ಸಂಸ್ಥೆಯ ಸಹಾಯ ಸಿಕ್ಕಿದೆ.
ಈ ಸಂಸ್ಥೆ ಮೈಸೂರಿನ ಕನ್ನಡಾಭಿಮಾನಿಯ ಭಸ್ಮವಾದ ಕನ್ನಡ ಪುಸ್ತಕಗಳ ಗ್ರಂಥಾಲಯಕ್ಕೆ ಕ್ರೌಡ್ ಪಂಡಿಂಗ್ ಮೂಲಕ ಸಹಾಯ ಮಾಡಲು ಮುಂದೆ ಬಂದಿದ್ದು ಸಮಸ್ತ ಕನ್ನಡಿಗರ ಅಭಿನಂದನೆಗೆ ಕಾರಣ ಆಗಿದೆ.
ಸುಮಾರು 20 ಲಕ್ಷ ಅಥಿ೯ಕ ಸಹಾಯದ ಗುರಿಯಲ್ಲಿ ಈಗಾಗಲೇ 12 ಲಕ್ಷಕ್ಕೂ ಹೆಚ್ಚು (ಈ ಲೇಖನ ಬರೆಯುವ ಕ್ಷಣದಲ್ಲಿ) ಸಂಗ್ರಹಿಸಿರುವುದು ಗ್ರಂಥಾಲಯ ಪುನರ್ ನಿಮಾ೯ಣಕ್ಕೆ ನಾಂದಿ ಆಗಲಿತ್ತು.
ಲಕ್ಷಾಂತರ ಜನ ತಲಾ ಒಂದು ರೂಪಾಯಿ ದಾನ ಮಾಡಿದರೂ ದೊಡ್ಡ ಮೊತ್ತ ಸಂಗ್ರಹ ಸಾಧ್ಯ ಮತ್ತು ಅದು ಉದ್ದೇಶಿತ ಕಾಯ೯ ಪೂಣ೯ಗೊಳಿಸಲು ಸಾಧ್ಯ ಎನ್ನುವ ಸಹಕಾರಿ ತತ್ವದ ದಾನಿಗಳನ್ನು ಪ್ರೇರೇಪಿಸಿ ಹಣ ಸಂಗ್ರಹಿಸಿ ಸಂಬಂದ ಪಟ್ಟವರಿಗೆ (ಪಾರದರ್ಶಕವಾಗಿ ವ್ಯವಹರಿಸಿ) ತಲುಪಿಸುವ ketto ಅಂತಹ ಸಂಸ್ಥೆಗಳಿಗೆ ನಾವು ನೀಡುವ ಒ0ದು ರೂಪಾಯಿ ದಾನ ಕೂಡ ಸದ್ವಿನಿಯೋಗ ಆಗುತ್ತದೆ.
ಆದರೆ ಈ ಹಣ ಸಹಾಯವನ್ನು ಏಕೋ ಗೊತ್ತಿಲ್ಲ ಸೈಯದ್ ಇಷಾಕ್ ನಿರಾಕರಿಸಿ ಬೇರೆ ರೂಪದ ಸಹಾಯದಲ್ಲಿ ಗ್ರಂಥಾಲಯ ಪುನರ್ ನಿರ್ಮಾಣ ಮಾಡಿದ್ದಾರೆ ಆದ್ದರಿಂದ Ketto ಸಂಗ್ರಹಿಸಿದ್ದ ಸುಮಾರು 12 ಲಕ್ಷ ಹಣ ದಾನಿಗಳಿಗೆ ವಾಪಾಸು ಮಾಡಿದ ಪಾರದರ್ಶಕ ಮಾಹಿತಿ ನೀಡಿದೆ.
ಇತ್ತೀಚಿಗೆ ನಮ್ಮ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಬಡ ಕೂಲಿ ಕಾರ್ಮಿಕರೋರ್ವರ ಸೈಕಲ್ ಕಳ್ಳತನವಾದ ಬಗ್ಗೆ ತೀರ್ಥಹಳ್ಳಿ ತಾಲೂಕ್ ಸಾಹಿತ್ಯ ಪರಿಷತ್ ಅಧ್ಯಕ್ಷರು ಮತ್ತು ಪತ್ರಕರ್ತರಾದ ಟಿ.ಕೆ.ರಮೇಶ್ ಶೆಟ್ಟರು ಪೇಸ್ ಬುಕ್ ನಲ್ಲಿ ಪ್ರಕಟಿಸಿದ್ದರು ಮತ್ತು ಅವರು ಅವರಿಗೆ ಸೈಕಲ್ ಖರೀದಿಸಲು ತಮ್ಮ ವೈಯಕ್ತಿಕ ದೇಣಿಗೆ ನೀಡುವ ಬಗ್ಗೆ ಬರೆದಿದ್ದರು.
ಸಂವೇದನೀಯವಾದ ಈ ಲೇಖನ ಓದಿದವರು ಹಣ ಸಹಾಯ ಮಾಡಲು ಮುಂದೆ ಬಂದರು, ಅವರಿಗೆ ಹಣ ಪಾವತಿಗೆ ಗೂಗಲ್ ಪೇ ನಂಬರ್ ತಿಳಿಸಿದಾಗ ನಾನೂ ಒಂದು ಸಾವಿರ ಪಾವತಿ ಮಾಡಿದ್ದೆ ನಂತರ ಎಲ್ಲರ ದೇಣಿಗೆಯಲ್ಲಿ ಹೊಸ ಸೈಕಲ್ ಕೊಡಿಸಿಯೂ ಉಳಿದ ಹೆಚ್ಚುವರಿ ಹಣ ಆ ಬಡ ದಂಪತಿಗಳಿಗೆ ರಮೇಶ್ ಶೆಟ್ಟರು ವಿತರಿಸಿದರು.(ರಮೇಶ್ ಶೆಟ್ಟರ ಮನವಿಗೆ 22 ಸಾವಿರ ಹಣ ಸಂಗ್ರಹವಾಗಿತ್ತು).
ಇಂತಹ ಅನೇಕ ಘಟನೆಗಳು ನಮ್ಮ ಸುತ್ತಮುತ್ತಲು ನಿತ್ಯ ನಡೆಯುತ್ತಿವೆ ಆದರೆ ನಮಗೆ ವೈಯಕ್ತಿಕ ಸಹಾಯ ಮಾಡಬೇಕೆಂದರೂ ನಮಗೆ ದೊಡ್ಡ ಮೊತ್ತ ಹೊಂದಿಸುವುದು ಸಾಧ್ಯವಾಗುವುದಿಲ್ಲ, ಪದೇ ಪದೇ ದಾನಿಗಳಿಗೆ ಹಿಂಸೆ ಕೊಡುವುದು ಏಕೆ ಅನ್ನಿಸುತ್ತದೆ ಆದರೆ ಪ್ರತಿ ಜಿಲ್ಲೆ ತಾಲೂಕಿನಲ್ಲಿ Ketto ಮಾದರಿಯಲ್ಲಿ ಕ್ರೌಡ್ ಪಂಡಿಂಗ್ ವ್ಯವಸ್ಥೆ ಮಾಡಿದರೆ ಇಂತಹ ನೂರಾರು ಜನರಿಗೆ ಸುಲಭವಾಗಿ ಸಹಾಯ ಮಾಡಲು ಸಾಧ್ಯವಿದೆ.
ಪ್ರತಿ ಜಿಲ್ಲೆಯಲ್ಲಿ ಕನಿಷ್ಟ 2 ಲಕ್ಷ ದಾನಿಗಳು ಸೇರಿ 1 ರೂಪಾಯಿ ದೇಣಿಗೆ ನೀಡಿದರೂ 2 ಲಕ್ಷ ಹಣ ಅವಶ್ಯವಿರುವ ರೋಗಿಗೆ, ವಿದ್ಯಾಬ್ಯಾಸ ಮಾಡುವ ಅಸಹಾಯಕ ವಿದ್ಯಾರ್ಥಿಗೆ ಅಥವ ಇನ್ನಾವುದೋ ಪ್ರಾಕೃತಿಕ ವಿಪತ್ತುವಿನಿಂದ ನೊಂದವರಿಗೆ ಪರಿಹಾರ ನೀಡಲು ಸಾಧ್ಯವಿದೆ.
ಬುದ್ಧಿವಂತ ಯುವ ಸಮಾಜ ಈ ದಿಕ್ಕಿನಲ್ಲಿ ಕಾರ್ಯಪ್ರವೃತ್ತರಾಗಬಾರದೇಕೆ?
Comments
Post a Comment