Blog number 1418. ಹೋರಾಟದ ದಿನಗಳಲ್ಲಿ ಹೋರಾಟಗಾರರಿಗೆ ನೆರಳಾದ ಸಾಗರದ ಸಭಾಯಿತ್ ಕಟ್ಟಡದ ಹಿಂದಿನ ಬೀದಿಯ ಈ ಮನೆ ಮತ್ರು ಕುಟುಂಬ ಮರೆಯಲುಂಟೆ.
ಅಲ್ಲೆ ಅನೇಕ ಕಾಯ೯ಕ್ರಮದ ರೂಪು ರೇಷೆ ತೀಮಾ೯ನ ಆಗುತ್ತಿತ್ತು.
ಶಿವಮೊಗ್ಗ ತಾಳಗುಪ್ಪ ಗೇಜ್ ಪರಿವತ೯ನೆಗೆ ದೆಹಲಿ ನಿಯೋಗ ಹೋಗುವ ಬಗ್ಗೆ, ಸಾಗರ ರೈಲು ನಿಲ್ದಾಣಕ್ಕೆ ರಾಮ ಮನೋಹರ ಲೋಹಿಯಾರ ನಾಮಕರಣ ಹೀಗೆ ಅನೇಕ ತೀಮಾ೯ನ ತೆಗೆದು ಕೊಂಡ ಜಾಗವಿದು.
ಇದು ರೈತ ಮುಖಂಡ ಸಾಗರದ ವಸಂತ್ ಕುಮಾರರ ಮನೆ ಮತ್ತು ಅವರ ರೈತ ಹೋರಾಟ ಆಪ್ ಸೆಟ್ ಮುದ್ರಾಣಲಯ.
ಇಲ್ಲಿಯೇ ಇವರ ಸಂಪಾದಕತ್ವದಲ್ಲಿ ರೈತ ಹೋರಾಟ ವಾರ ಪತ್ರಿಕೆ ಪ್ರತಿ ವಾರ ಮುದ್ರಣವಾಗಿ ರಾಜ್ಯದಾದ್ಯಂತ ರೈತರಿಗೆ ತಲುಪುತ್ತದೆ.
Comments
Post a Comment