#ಕೊರಾನಾ_ಲಾಕ್_ಡೌನ್_ಡೈರಿ_2020
#ಲೆಟರ್_ನಂ_13.
#ದಿನಾ೦ಕ_13_ಏಪ್ರಿಲ್_2020.
#ಅಶಿಕ್ಷಿತ_ಜ್ಞಾನಿ V/S ಎಜುಕೇಟೆಡ್ ಈಡಿಯೇಟ್ಸ್
ಕಳೆದ ಮಾಚ್೯ 24ರಿಂದ ಇಡೀ ದೇಶದಲ್ಲಿ ಕೊರಾನಾ ವೈರಸ್ ಸಾ೦ಕ್ರಮಿಕವಾಗಿ ಹರಡದಂತೆ ತಡೆಯಲು ಸಕಾ೯ರ ತೆಗೆದುಕೊಳ್ಳಬೇಕಾದ ಮು೦ಜಾಗೃತೆ ಕ್ರಮಗಳನ್ನ ಸಾವ೯ಜನಿಕರಿಗೆ ಎಲ್ಲಾ ಮಾಧ್ಯಮಗಳ ಮೂಲಕ ಪ್ರಚಾರ ಮಾಡಿದೆ.
ಈ ಕಾಯಿಲೆಯಿ೦ದ ಮು೦ದುವರಿದ ದೇಶಗಳೇ ತತ್ತರಿಸಿದೆ ಎಂಬ ಪ್ರತಿ ಕ್ಷಣದ ಮಾಹಿತಿ ಸೋಷಿಯಲ್ ಮೀಡಿಯಾದಲ್ಲಿ ನೋಡುತ್ತಿದ್ದೇವೆ.
ಇದರಲ್ಲಿ ಬಹುಮುಖ್ಯವಾದದ್ದು ಸಾಮಾಜಿಕ ಅಂತರ ಕಾಪಾಡುವುದು ಆದರೆ ಜನರನ್ನ ಎಷ್ಟು ಜಾಗೃತಿ ಮಾಡಿದರೂ ಸಾಮಾಜಿಕ ಅಂತರ ಕಾಪಾಡುತ್ತಿಲ್ಲ ಬಹುಶಃ ಇದೇ ಮುಂದಿನ ದಿನದಲ್ಲಿ ದೊಡ್ಡ ದುರಂತಕ್ಕೆ ಕಾರಣವಾದೀತು.
ತರಕಾರಿ ಖರೀದಿ ಸ್ಥಳ, ದಿನಸಿ ಖರೀದಿ ಸ್ಥಳದಲ್ಲಿ ಒಬ್ಬರನ್ನೊಬ್ಬರು ತಾಗಿಯೇ ಇರುತ್ತಾರೆ.
ಅಮೆರಿಕಾ ಲಂಡನ್ ನಲ್ಲಿ ವಿದ್ಯಾವಂತರು ಈ ಮುಂಜಾಗೃತಿಯನ್ನ ಕಡೆಗಾಣಿಸಿ ವೀಕ್ ಎಂಡ್, ಬಾರ್ ಗಳಲ್ಲಿ ಕಳೆದದ್ದೇ ಇವತ್ತಿನ ಸಾವಿರಾರು ಸಾವಿಗೆ ಕಾರಣ.
ಶಿವಮೊಗ್ಗ ಪಟ್ಟಣದಲ್ಲಿ ಈ ಕಾಯಿಲೆ ಹರಡದಂತೆ ತಡೆಯಲು ವಿದ್ಯಾವಂತ ಯುವ ಜನತೆಯನ್ನ ಸ್ವಯಂ ಹೆಸರು ನೋಂದಾಯಿಸಿ ಸಾವ೯ಜನಿಕರಿಗೆ ಸಹಾಯ ಮಾಡಲು ಸ್ವಯಂ ಸೇವಕರಾಗಿ ಸೇವೆ ಮಾಡಲು ಅವಕಾಶ ನೀಡಿ ತರಬೇತಿ ನೀಡಲಾಗಿದೆ.
ಮೊನ್ನೆ ಶಿವಮೊಗ್ಗದ ಪೆಟ್ರೋಲ್ ಪಂಪ್ ಮಾಲಿಕರು ಈ ಸ್ವಯಂ ಸೇವಕರ ಮೊಟಾರ್ ಬೈಕ್ ಗೆ ತಲಾ ಒಂದು ಲೀಟರ್ ಪೆಟ್ರೋಲ್ ದಾನ ನೀಡುವುದಾಗಿ ಘೋಷಿಸಿದ್ದರು 70 ರೂಪಾಯಿ ಬೆಲೆಯ ಈ ಕೊಡುಗೆ ಪಡೆಯಲು ನೂರಾರು ಸ್ವಯಂ ಸೇವಕರು ಸ್ವಯಂ ಶಿಸ್ತು ಪಾಲಿಸದೇ ದುರಾಸೆಯಿ೦ದ ಒಬ್ಬರ ಮೇಲೆ ಒಬ್ಬರು ಬಿದ್ದ೦ತೆ ಸಾಮಾಜಿಕ ಅಂತರ ಕಾಪಾಡದೇ ಪೆಟ್ರೋಲ್ ಗೆ ಮುಗಿ ಬಿದ್ದದ್ದು ನೋಡಿದರೆ ಹೇಸಿಗೆ ಅನ್ನಿಸಿತು ಮತ್ತು ಇವರೇ ಹೀಗಾದರೆ ಇವರು ಯಾರಿಗೆ ಯಾವ ರೀತಿ ಮಾಗ೯ದಶ೯ನ ನೀಡುವ ಸ್ವಯಂ ಸೇವಕರಾದಾರು?
ಇದಿಷ್ಟೆ ಅಲ್ಲ ಸಕಾ೯ರದ ಉಚಿತ ಹಾಲಿನ ಸಾಲಿನಲ್ಲಿ ನಿಲ್ಲುವ ಸಕಾ೯ರಿ ನೌಕರರು, ಲಕ್ಷಾ೦ತರ ಬಾಡಿಗೆ ಬರುವ ಶ್ರೀಮ೦ತರು ಏನನ್ನ ತೋರಿಸುತ್ತದೆ?
ಅಶಿಕ್ಷಿತರೇ ಜ್ಞಾನಿಗಳಂತೆ ಸಕಾ೯ರದ ನೀತಿ ನಿಯಮ ಪಾಲಿಸುತ್ತಿದ್ದಾರೆ,ಬಡವರ ಪಾಲು ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ ಆದರೆ ವಿದ್ಯಾವಂತರು ಮಾಡುತ್ತಿರುವ ಅಪವಸ್ಯಕ್ಕೆ ಮಾತ್ರ ಕ್ಷಮೆ ಇಲ್ಲ.
ನಮ್ಮ ದೇಶದಲ್ಲಿನ ವಿದ್ಯೆಯಲ್ಲಿ ಸಂಸ್ಕಾರ ಕಲಿಸುತ್ತಿಲ್ಲವೆ? ಹಾಗಾದರೆ ಸಮಗ್ರ ವಿದ್ಯಾ ನೀತಿ ಬದಲಾಗಬೇಕೆ? ಎಂಬ ಪ್ರಶ್ನೆ ಎಲ್ಲರನ್ನ ಕಾಡುತ್ತಿದೆ.
Comments
Post a Comment