Blog number 1371. ನಮ್ಮ ರಾಟ್ ವೀಲರ್ ಶಂಭೂರಾಮ ಮಾವಿನ ಹಣ್ಣು ಪ್ರಿಯ ಈ ವಷ೯ದ ಮೊದಲ ಮಾವಿನ ಹಣ್ಣು ಪಸಲು ಆಲ್ಪಾನ್ಸ್ ತಿಂದು ಗೊರಟು ಒಗೆದು ಹೋದ.
#ಆಲ್ಪೋನ್ಸ್_ಮಾವು_ತಿಂದು_ಗೊರಟು_ಒಗೆದ
#ನಮ್ಮ_ಪ್ರೀತಿಯ_ಶಂಭೂರಾಮಣ್ಣನವರು.
https://youtu.be/-wtyX-YaWyM
ಮಲೆನಾಡ ಭಾಗದಲ್ಲಿ ಮಾವಿನ ಪಸಲು ಈ ವರ್ಷದ ಹವಾಮಾನ ವೈಪರಿತದಿಂದ ತುಂಬಾ ಕಡಿಮೆ ಮತ್ತು ತುಂಬಾ ವಿಳಂಬವಾಗಿದೆ.
ಉಪ್ಪಿನ ಕಾಯಿಗೆ ಮಾವಿನ ಮಿಡಿಯೇ ಬಂದಿಲ್ಲ ಆದರೆ ಬೆಳಗಾಂ ಭಾಗದಲ್ಲಿನ ಮಾವಿನ ತೋಟದಲ್ಲಿ ರತ್ನಗಿರಿ ಆಲ್ಪಾನ್ಸ್ ತಳಿಗಳು ಹಣ್ಣಾಗಿ ಮಾರಾಟಕ್ಕೆ ಬಂದಿದೆ.
ಇವತ್ತು ನಮ್ಮ ರಾಟ್ ವೀಲರ್ ಶಂಭೂರಾಮು ಜೊತೆ ಒಂದು ಗಂಟೆ ವಾಕಿಂಗ್ ಮಾಡಿ ಬಂದವನು, ಮಾವಿನ ಹಣ್ಣು ಪ್ರಿಯನಾದ ಶಂಭೂರಾಮನಿಗೆ ಮೊದಲ ಮಾವಿನ ಹಣ್ಣು ಅವನಿಗೆ ನೀಡಿ ಅವನು ತಿಂದ ನಂತರ ನನ್ನ ಪಾಲಿನ ಮಾವಿನ ಹಣ್ಣು ನಾನು ತಿನ್ನುವುದೆಂದು ತೀರ್ಮಾನಿಸಿದೆ. ಇದೇ ಮೊದಲ ಬಾರಿ ಇಡೀ ಮಾವಿನ ಹಣ್ಣು ನೀಡಿದೆ (ಮಾವಿನ ಹಣ್ಣು ತುಂಡರಿಸಿ ಕೊಡುವ ಅಭ್ಯಾಸ) ಅವನು ಮನೆಯಲ್ಲಿ ಅವನಿಷ್ಟದ ಬಾಳೆ ಹಣ್ನು - ಮಾವಿನ ಹಣ್ಣು - ಸೌತೆಕಾಯಿ ಸುತ್ತಲೂ ಓಡಾಡಿದರೂ ಬಾಯಿ ಹಾಕುವುದಿಲ್ಲ, ಕದ್ದು ತಿನ್ನುವುದಿಲ್ಲ,ಅವನಿಗೆ ಅಂತ ತೋರಿಸಿ ಕರೆದು ಕೊಟ್ಟರೆ ಮಾತ್ರ ತಿನ್ನುವ ತರಬೇತಿ ಪಡೆದಿದ್ದಾನೆ.
ಇಡೀ ಮಾವಿನ ಹಣ್ಣು ಕೊಟ್ಟರೆ ತಿನ್ನಲಿಲ್ಲ, ಮಾವಿನ ಹಣ್ಣು ತುಂಡು ಮಾಡಿ ಕೊಟ್ಟ ಮೇಲೆಯೂ ಅವನಿಗೆ ಅನುಮಾನ ಇಡೀ ಒಂದು ಮಾವಿನ ಹಣ್ಣು ಇದೇ ಮೊದಲು ಅವನಿಗೆ ನೀಡಿದ್ದರಿಂದ, ಒತ್ತಾಯ ಮಾಡಿದ ಮೇಲೆ ಪೂರ್ತಿ ಹಣ್ಣು ತಿಂದು ಆಲ್ಪಾನ್ಸ್ ಮಾವಿನ ಹಣ್ಣಿನ ಗೊರಟೆ ಒಗಿದು ಹೋದ ನಮ್ಮ ಶಂಭೂರಾಮಣ್ಣ.
Comments
Post a Comment