Blog number 1377. ಸಾಗರ ತಾಲೂಕಿನಲ್ಲಿ ಉಲ್ಬಣಗೊಂಡ ಮಂಗನಕಾಯಿಲೆ, ವೃಕ್ಷ ಲಕ್ಷ ಸಂಸ್ಥೆಯ ಮನವಿ ಒಂದು ದಾಖಲೆಯಾಗಿ ಉಳಿಯಲಿದೆ.
ನಾಡಿನ ಸಮಸ್ತ ಜನರಲ್ಲಿ
ಒಂದು ಮಾನಿವಿಯತೆಯ ಮನವಿ
ಸನ್ಮಾನ್ಯರೇ,
ಸಾಗರ ತಾಲೂಕ ಕಾರ್ಗಲ್ ಬಳಿ ಅರಲಗೋಡು ಗ್ರಾಮದಲ್ಲಿ ಮಂಗನ ಕಾಲೆ ಕಳೆದ ೩ ತಿಂಗಳಿಂದ ವ್ಯಾಪಕವಾಗಿ ೧೭ ಜನ ಸಾವು ಕಂಡಿದ್ದಾರೆ. ಕಾರ್ಗಲ್‌ನಿಂದ ೧೦ ಕಿ.ಮಿ (ಕಾರ್ಗಲ್ ಭಟ್ಕಳ ರಸ್ತೆ) ದೂರದಲ್ಲಿರುವ ಅರಳಗೋಡ ಪಂಚಾಯತ ವ್ಯಾಪ್ತಿಯ ೧೦ ಹಳ್ಳಿಗಳಲ್ಲಿ ಮಂಗನ ಕಾಯಿಲೆ ಇನ್ನೂ ಹೆಚ್ಚುತ್ತಲೇ ಇದೆ.ಜನರಲ್ಲ್ಮಿಮರಣ ಮೃದಂಗ ಛಾಯೆ ದಿನಾ ಕಾಡುತ್ತಿದೆ. ಈವರೆಗೆ ೮೦೦ ಕ್ಕೂ ಹೆಚ್ಚು ಮಂಗಗಳು ಸತ್ತಿವೆ. ಪ್ರತಿದಿನವೂ ಮಂಗ ಸತ್ತ ಘಟನೆ ನಡೆಯುತ್ತಿದೆ. ಅರಲಗೋಡ ಗ್ರಾಮಕ್ಕೆ ವೃಕ್ಷಲಕ್ಷ ಆಂದೋಲನ ಕಾರ್ಯಕರ್ತರ ತಂಡ ದಿನಾಂಕ೧-೪-೨೦೧೯ ರಂದು ಭೇಟಿ ನೀಡಿತು. ಗ್ರಾಮ ಜನತೆಗೆ ಸಾಂತ್ವನ ಹೇಳಿತು. ಅಲ್ಲಿನ ಗಂಭೀರ ಸ್ಥಿತಿಗತಿಗಳ ಮಾಹಿತಿ ಸಂಗ್ರಹಿಸಿತು. ಧಾಮಿಕ-ಸಾಮಾಜಿಕ ಮುಖಂಡರು, ಸಂಸ್ಥೆಗಳು ಮಲೆನಾಡಿನ ಕಗ್ಗಾಡಿನ ಹಳ್ಳಿಯ ಜನರ ನೆರವಿಗೆ ಬರಬೇಕು ಎಂಬ ಕಳಕಳಿಯನ್ನು ನಮ್ಮ ತಂಡ ವ್ಯಕ್ತ ಮಾಡಿದೆ. ಅದಕ್ಕಾಗಿ ತಮ್ಮಲ್ಲಿ ಮನವಿ ಮಾಡುತ್ತೇವೆ, ವಿವರ ನೀಡುತ್ತಿದ್ದೇವೆ.
೧) ಶರಾವತಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಬರುವ ಅರಲಗೋಡ ನೆಲ್ಲಿಮಕ್ಕಿ, ಮರಬಿಡಿ, ಮರಾಠಿಕೇರಿ, ಜೀಗಳ, ಸಂಪ, ಬಣ್ಣುಮನೆ, ಕಾಳಮಂಜಿ, ಇಟಿಗೆ, ಐತುಮನೆ, ದೊಂಬೆಕೈ ಹಳ್ಳಿಗಳ ೧೮೦ ಕುಟುಂಬಗಳು, ಸುಮಾರು ೧೮೦೦ ರೈತರು, ಮಹಿಳೆಯರು, ವನವಾಸಿಗಳು ಮಂಗನ ಕಾಯಿಲೆಯ ಸಂತ್ರಸ್ತರಾಗಿದ್ದಾರೆ.
೨) ಅರಲಗೊಡಿನ ಮಂಗಲ ಕಾಯಿಲೆ ಆಸ್ಪತ್ರೆ (ಪ್ರಾಥಮಿಕ ಆರೋಗ್ಯ ಕೇಂದ್ರ) ಯಲ್ಲಿ ಈಗಲೂ ಹಳ್ಳಿಗಳ ಜನ ತಪಾಸಣೆಗೆ ಕ್ಯೂ ನಿಂತಿದ್ದಾರೆ.
೩) ಮಣಿಪಾಲಕ್ಕೆ ಹೋಗಿ, ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗಾಕ್ಕೆ ಹೋಗಿ ಜ್ವರ ಕಡಿಮೆ ಆಗಿ ಅರಲಗೋಡ ಗ್ರಾಮಕ್ಕೆ ಹಿಂತಿರುಗಿದ ನೂರಾರು ಜನ ಎದ್ದು ಓಡಾಡುವ ಸ್ಥಿತಿಯಲ್ಲಿ ಇಲ್ಲ.
೪) ಈ ಹಳ್ಳಿಗಳ ರೈತರು ಬೆಳೆ ಕೊಯ್ಯಲೂ ಆಗಿಲ್ಲ, ಕೃಷಿಕೆಲಸ ಪೂರ್ಣ ನಿಂತು ಹೋಗಿದೆ.
೫) ಮಕ್ಕಳು, ಮಹಿಳೆಯರು, ಗಂಡಸರು ಸೇರಿ ೨೫% ಜನ ಸದ್ಯ ಊರು ತೊರೆದು ದೂರದ ಹಳ್ಳಿಗಳಲ್ಲಿ ಇದ್ದಾರೆ. ಇವರ್ಯಾಳರಿಗೂ ಮಂಗನ ಕಾಯಿಲೆ ಬಂದಿಲ್ಲ ಎಂಬುದನ್ನು ಗಮನಿಸಬೇಕಿದೆ.
೬) ಜಾನುವಾರು, ದನಕರು, ಇದ್ದ ಸ್ವಲ್ಪ ಗದ್ದೆ, ತೊಟ, ಮನೆ ಬಿಟ್ಟು ಎಲ್ಲಿಗೆ ಹೋಗುವುದು ಎಂಬ ಅತಂತ್ರ ಸ್ಥಿತಿಯಲ್ಲಿ ಜನರಿದ್ದಾರೆ. ಊರಲ್ಲೇ ಇದ್ದರೆ ಮಂಗನ ಕಾಯಿಲೆ ಬಂದು ಸಾಯುತ್ತೇವೆ ಎಂಬ ಅರಿವಿದ್ದರೂ ಬಿಟ್ಟು ಎಲ್ಲಿಗೆ ಹೋಗುವುದು ಎಂಬ ಪ್ರಶ್ನೆ.
೭) ಸರ್ಕಾರ ವೈದ್ಯಕೀಯ ಸೌಲಭ್ಯ ನಿಡಿದೆ. ಆದರೆ ಪರಿಹಾರ ನೀಡಿಲ್ಲ. ಚುನಾವಣೆ, ನೀತಿಸಂಹಿತೆ ಇತ್ಯಾದಿ ಕಾರಣಗಳಿಂದ ಜೂನವರೆಗೆ ಸರ್ಕಾರದ ಸಹಾಯವೂ ಇಲ್ಲ.
೮) ಮಳೆ ಬಿದ್ದರೆ ಮಂಗನ ಕಾಲೆ ನಿಲ್ಲಬಹುದು ಎಂದು ತಜ್ಞರು ಹೇಳುತ್ತಾರೆ. ಆದರೆ ಮಳೆ ಬಂದೇ ಇಲ್ಲ. ಜೂನ್‌ವರೆಗೆ ೨ ತಿಂಗಳು ಇದೇ ರೀತಿ ಮಂಗ ಸಾಯುವುದು, ಕಾಲೆ ಜನ ಸಾಯುವುದು ಎಂಬ ಸ್ಥಿತಿ ಇದೆ.
ಈ ಹಿನ್ನೆಲೆಯಲ್ಲಿ ನಾಡಿನ ಸಂಘ, ಸಂಸ್ಥೆ, ಧಾಮಿಕ ಮುಖಂಡರು, ಅರಲಗೋಡ ಗ್ರಾಮದ ಸಂಕಷ್ಟಗಳಿಗೆ ಸ್ಪಂದಿಸಬೇಕು ಎಂದು ಕೋರುತ್ತೇವೆ.
೧) ಅರಲಗೋಡ ಪ್ರದೇಶದ ಮಂಗನ ಕಾಯಿಲೆಂದ ಸಾವಿಗೀಡಾದವರ ಕುಟುಂಬಗಳಿಗೆ ಪರಿಹಾರ ಒದಗಿಸಲು ಕೋರುತ್ತೇವೆ.
೨) ಮಂಗನ ಕಾಯಿಲೆ ಜ್ವರಕ್ಕೆ ತುತ್ತಾಗಿ, ಸಾಯದೇ ಉಳಿದ ಜನರ ಪರಿಸ್ಥಿತಿ ಸಹಾ ಗಂಭೀರವೇ ಆಗಿದೆ. ಈ ಕುಟುಂಬಗಳಿಗೂ ನೆರವು ನೀಡಬೇಕಾದ ತೀರಾ ಅವಶ್ಯಕತೆ ಇದೆ.
೩) ಈ ಹಳ್ಳಿಗಳ ಸುಮಾರು ೧೩೦೦ ಜಾನುವಾರು, ದನ, ಕರುಗಳನ್ನು ಪ್ರತ್ಯೇಕ ಗೋಶಾಲೆ ನಿಮಿಸಿ ಕಟ್ಟಿ ಸಾಕಬೇಕಾದ ಅನಿವಾರ್ಯತೆ ಇದೆ. ಇದಕ್ಕೂ ಧಾಮಿಕ ಮುಖಂಡರು, ಸಾಮಾಜಿಕ ಸಂಸ್ಥೆಗಳು ಅಭಯ ಹಸ್ತ ನೀಡಲು ಕೋರುತ್ತೆವೆ.
೪) ಇಷ್ಟೆಲ್ಲಾ ಸಾವು, ಯಾತನೆ, ರೋಗ ಭಯದಲ್ಲೇ ಇರುವ ಅರಲಗೋಡ ಜನತೆಗೆ ಧಾಮಿಕ ಮುಖಂಡರು ಆಗಮಿಸಿ ಧೈರ್ಯ ತುಂಬುವ ಕೆಲಸ ಆಗಬೇಕಿದೆ. ಈ ಕುರಿತೂ ಮನವಿ ಮಾಡುತ್ತೇವೆ.
೫) ಅರಲಗೋಡ ಗ್ರಾಮ ಬಿಟ್ಟು ಬೇರೆಡೆ ೨ ತಿಂಗಳು ವಾಸ ಮಾಡಲು ತಾತ್ಕಾಲಿಕ ಪುನರ್ ವಸತಿ ಕೇಂದ್ರದ ಅವಶ್ಯಕತೆ ತುರ್ತಾಗಿದೆ. ಮಠ, ಆಶ್ರಮ, ಮನೆಗಳಲ್ಲಿ ಉಳಿದುಕೊಳ್ಳಲು ಅಗತ್ಯ ವ್ಯವಸ್ಥೆ ಕಲ್ಪಿಸಲು ಕೋರುತ್ತೇವೆ.
ತಮ್ಮ ಪೂರ್ಣ ಸಹಾಯಕ್ಕೆ ಪ್ರಾರ್ಥಿಸುತ್ತೇವೆ.
ವಂದನೆಗಳು,
ತಮ್ಮ ವಿಶ್ವಾಸಿಗಳು
ಅನಂತ ಹೆಗಡೆ ಅಶೀಸರ
ಅಧ್ಯಕ್ಷರು ವೃಕ್ಷಲಕ್ಷ ಆಂದೋಲನ, : 9481135153 ,: 08384-279445
ಕೆ. ವೆಂಕಟೇಶ,ಕವಲಕೋಡು
ಕಾರ್ಯದರ್ಶಿ ಗ್ರಾಮಾಂತರ ಸಮುದಾಯ ವಿಜ್ಞಾನ ಕೇಂದ್ರ ಸಾಗರ, ಮೊ: 9844277772
ಮಹಾಬಲ ಗಿರಿ ಅರಲಗೋಡು, ಮೊ: 9481091503
ಆನೆಗೊಳಿ ಸುಬ್ಬರಾವ್,ಗಿಡಮೂಲಿಕ ಪಂಡಿತರು
ಬಿ. ಹೆಚ್. ರಾಘವೇಂದ್ರ ,ಸಹಕಾರಿಗಳು
ಮಂಜಯ್ಯ ಜೈನ್ ಅರಲಗೋಡು,ಗ್ರಾಮದ ಹಿರಿಯರು
ಹೊ.ಭಾ.ಅಶೋಕ,ಸಾಮಾಜಿಕ ಕಾರ್ಯಕರ್ತರು, ಕಾರ್ಗಲ್, 9481253463
**************************************************************************************
ಅರಲಗೋಡ ಗ್ರಾಮದಲ್ಲಿ ಮಂಗನ ಕಾಯಿಲೆಯಿಂದ ಸಾವಿಗೀಡಾದ ವ್ಯಕ್ತಿಗಳ ಹೆಸರು
೧) ಪಾರ್ಶ್ವನಾಥ ಮಂಡವಳ್ಳಿ
೨) ಕೃಷ್ಣಪ್ಪ ವಾಟೆಮಕ್ಕಿ
೩) ಮಂಜುನಾಥ ಕಂಚಿಕೈ
೪) ಲೋಕರಾಜ ಮರಗುಡಿ
೫) ರಾಯಮ್ಮ ಕಂಚಿಕೈ
೬) ಶ್ವೇತಾ ಜೈನ್- ಜೇಗಳ
೭) ಸವಿತಾ ವಾಟೆಮಕ್ಕಿ ಹಸ್ಲರ್
೮) ಲಕ್ಷ್ಮೀದೇವಿ ದೊಂಬೆಕೈ
೯) ಪಾರ್ಶ್ವನಾಥ ಕುಳಕಾರು
೧೦) ಪೂರ್ಣಿಮಾ ಕೃಷ್ಣಮೂರ್ತಿ
೧೧) ಸೀತಮ್ಮ ಕೊಪ್ಪರಿಗೆ ಪೂಜಾರಿ
೧೨) ಚಂದ್ರಪ್ಪ ಹಸ್ಲರ್- ಬಣ್ಣುಮನೆ
೧೩) ಕನ್ನಮ್ಮ ಕಾಳಮಂಜಿ ಹಸ್ಲರ್
೧೪) ಹಾಲಪ್ಪ ಕಂಬಿಕೈ ಹಸ್ಲರ್
೧೫) ಮಂಜಪ್ಪ ಕುಳಕಾರ್
೧೬) ಸಿದ್ಧಾರ್ಥ ಗೌಡ್ರು ಜೇಗಳ
Comments
Post a Comment