Blog number 1362. ಶಿವಮೊಗ್ಗದ ವಿದ್ಯಾವಂತ ದಂಪತಿಗಳ ಆಹಾರ ಉದ್ಯಮದ ಸಾಹಸ ಸೋದರಿ ಪುಡ್ ಪ್ರಾಡಕ್ಟ್ಸ್ ಶುಚಿ-ರುಚಿ - ಮತ್ತು ಅತ್ಯುತ್ತಮ ಪ್ಯಾಕಿಂಗ್ ಗ್ರಾಹಕ ಪ್ರೇಮಿ ಉತ್ಪನ್ನಗಳು.
https://youtu.be/LlXSdDsJVeA
#ಇವತ್ತಿನ_ನನ್ನ_ವಿಶೇಷ_ಅತಿಥಿಗಳು
#ಡಾಕ್ಟರ್_ರೋಹಿಣಿ_ಮತ್ತು_ಶ್ರೀನಾಥ್_ದ೦ಪತಿಗಳು
#ಶ್ರೀಮತಿರೋಹಿಣಿ_ಶಿವಮೊಗ್ಗ_ನ್ಯಾಷನಲ್_ಕಾನೂನು_ಕಾಲೇಜ್_ಪ್ರೋಪೆಸರ್_ಆಗಿದ್ದವರು
#ಶ್ರೀನಾಥ್_ಕಾರ್ಪೋರೇಷನ್_ಬ್ಯಾಂಕ್_ವ್ಯವಸ್ಥಾಪಕರಾಗಿದ್ದವರು.
#ಇಬ್ಬರೂ_ಸ್ವಯ೦_ನಿವೃತ್ತಿ_ಪಡೆದು_ಹೊಸ_ಉದ್ಯಮ_ಪ್ರಾರಂಬಿಸಿದ್ದಾರೆ
#ಸೋದರಿ_ಪುಡ್_ಪ್ರಾಡಕ್ಟ್ಸ_ಬ್ರಾಂಡಿನ_ಉದ್ಯಮ
#ಶುಚಿ_ರುಚಿ_ಮತ್ತು_ಉತ್ಕೃಷ್ಟ_ಪ್ಯಾಕಿಂಗ್.
ಶ್ರೀಮತಿ ರೋಹಿಣಿ ಶ್ರೀನಾಥ್, ಡಾಕ್ಟರ್ ರೋಹಿಣಿ ಶಿವಮೊಗ್ಗದ ನ್ಯಾಷನಲ್ ಕಾನೂನು ಕಾಲೇಜಿನ ಪ್ರೋಪೆಸರ್ ಆಗಿದ್ದವರು ಈಗ ಸ್ವಯಂ ನಿವೃತ್ತಿ ಹೊ೦ದಿದ್ದಾರೆ.
ಇವರ ನೂರಾರು ವಿದ್ಯಾರ್ಥಿಗಳು ರಾಜ್ಯ - ದೇಶ-ವಿದೇಶಗಳಲ್ಲಿದ್ದಾರೆ ಇವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಬಸವಾನಿಯ ಸ್ವಾತಂತ್ಯ ಹೋರಾಟಗಾರರು, ತೀರ್ಥಹಳ್ಳಿಯ ಆ ಕಾಲದ ಬಟ್ಟೆ ವ್ಯಾಪಾರಿ ಬಸವಾನಿ ಮಂಜಪ್ಪರ ಮೊಮ್ಮಗಳು.
ಇವರ ಪತಿ ಶ್ರೀನಾಥರು ಕಾರ್ಪೋರೇಷನ್ ಬ್ಯಾಂಕ್ ವ್ಯವಸ್ಥಾಪಕರಾಗಿ ಸಾಗರದ ಎಪಿಎಂಸಿ ಬ್ರಾ೦ಚ್ ನಲ್ಲಿದ್ದವರು ದೆಹಲಿ - ಗೋವಾದಲ್ಲಿ ಕೆಲಸ ನಿರ್ವಹಿಸಿದವರು.
ಇಬ್ಬರೂ ತಮ್ಮ ತಮ್ಮ ಉದ್ಯೋಗದಲ್ಲಿ ಸ್ವಯಂ ನಿವೃತ್ತಿ ಪಡೆದು ಈಗ ಸ್ವ೦ತ ಉದ್ಯಮ ಪ್ರಾರಂಬಿಸಿದ್ದಾರೆ.
ಇವರ ಉದ್ಯಮದ ಬ್ರಾಂಡ್ ನೇಮ್ #ಸೋದರಿ_ಪುಡ್_ಪ್ರಾಡಕ್ಟ್ ಇದು ಅತ್ಯುತ್ತಮ ಆಕರ್ಷಕ ಪ್ಯಾಕಿಂಗ್ ನಲ್ಲಿ ಶುಚಿ-ರುಚಿಯ ಆಹಾರಗಳು ಆಗಿದೆ.
ವಿಶೇಷ ಸಂದರ್ಭಗಳಿಗಾಗಿ ಆಕರ್ಷಕ ಸಿಹಿ ತಿಂಡಿಗಳ ಗಿಫ್ಟ್ ಪ್ಯಾಕ್ ಕೂಡ ಇವರಲ್ಲಿ ಲಭ್ಯವಿದೆ ಮುಂದಿನ ದಿನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಪ್ರಾಡಕ್ಟ್ ಗಳು ಇವರ ಉತ್ಪನ್ನಗಳ ಪಟ್ಟಿಯಲ್ಲಿ ಸೇರಲಿದೆ.
ಇನ್ನೂ ಆಕರ್ಷಕ ಮತ್ತು ಎಕೋ ಪ್ರೆಂಡ್ಲಿ ಪ್ಯಾಕ್ ಗಳಲ್ಲಿ ಇವರ ಉತ್ಪನ್ನಗಳು ಗ್ರಾಹಕರಿಗೆ ತಲುಪಿಸಲು ಈ ದಂಪತಿಗಳು ಮುಂದಾಗಿದ್ದಾರೆ.
ನನ್ನ ಕನಸಿನ #Explore_the_western_ghats ಪ್ರಾಜೆಕ್ಟ್ಸ್ ಪೈಲಟ್ ಪ್ರಾಜೆಕ್ಟ್ ಮುಂದಿನ ತಿಂಗಳು ಲಾ೦ಚ್ ಆಗಲಿದೆ ಅದರ ಪ್ರತಿ ಔಟ್ ಲೆಟ್ ನಲ್ಲಿ #Golden_Basket ಎಂಬ ನನ್ನದೇ ಬ್ರಾಂಡ್ ನ ಡಿಸ್ಪ್ಲೇ ಶೋಕೇಸ್ ನಲ್ಲಿ ಇವರ ಪ್ರಾಡಕ್ಟ್ ಗಳಿಗೆ ಜಾಗ ನಿಗದಿ ಆಗಿದೆ ಈ ಬಗ್ಗೆ ಅಂತಿಮ ಮಾತುಕತೆಗೆ ಬಂದಾಗ ಈ ಸಂದಶ೯ನದ ವಿಡಿಯೋ ಇಲ್ಲಿದೆ.
Comments
Post a Comment