https://www.facebook.com/share/p/15pjBrQzia/
*#ಆನಂದಪುರಂ_ಆನೆ_ಕಾರಿಡಾರ್_ಅಪ್ಡೇಟ್*
*10-ಡಿಸೆಂಬರ್ - 2024 ಮಂಗಳವಾರ ಮತ್ತು 11-ಡಿಸೆಂಬರ್-2024ರ ರಾತ್ರಿ 10ರ ತನಕದ ಮಾಹಿತಿ.*
*ನಿನ್ನೆ ರಾತ್ರಿ ಕಾಡಾನೆಗಳು (11 ಡಿಸೆಂಬರ್ 2024 ಬುಧವಾರ) ರಾತ್ರಿ 8 ಗಂಟೆಗೆಆನಂದಪುರಂ ಹೋಬಳಿಯ ಆಚಾಪುರ ಗ್ರಾಮ ಪಂಚಾಯಿತಿಯ ತಂಗಳವಾಡಿ ಸಮೀಪದ ಚಂದಾಳಗೆರೆ ಭಾಗದಲ್ಲಿ ಕಂಡುಬಂದಿತ್ತು*
*ರಾತ್ರಿ 8:00 ಸಮಯದಲ್ಲಿ ರೈತರೊಬ್ಬರು ತಮ್ಮ ತೋಟದ ಬೋರ್ವೆಲ್ ನೀರಿನ ಪೈಪ್ ವಾಲ್ ತಿರುಗಿಸಲು ಹೋದಾಗ ಅವರ ತೋಟದ ಮೇಲ್ಭಾಗದಲ್ಲಿ ಆನೆಗಳು ಇರುವುದು ಗೊತ್ತಾಗಿ ಊರವರಿಗೆಲ್ಲಾ ಫೋನ್ ಮಾಡಿ ಕರೆದಿದ್ದಾರೆ ನಂತರ ಊರವರೆಲ್ಲ ಸೇರಿ ಶಬ್ದ ಮಾಡಿ ಪಟಾಕಿ ಸಿಡಿಸಿದ್ದರಿಂದ ಆ ಭಾಗದಿಂದ ಆನೆಗಳು ಉದನೂರು ಕಾಡಿನ ಭಾಗಕ್ಕೆ ಹೋಗಿರುತ್ತದೆ.*
*ಇದೇ ಸಂದರ್ಭದಲ್ಲಿ ಈ ಊರಿನ ಚೆನ್ನಪ್ಪ ಗೌಡರ ತೋಟವನ್ನು ಹಾದು ಹೋಗಿರುತ್ತದೆ.*
*ಸೋಮವಾರ ರಾತ್ರಿ ಅಥವಾ ಮಂಗಳವಾರದ ಬೆಳಿಗಿನ ಜಾವ ಗೌತಮಪುರ ಗ್ರಾಮ ಪಂಚಾಯಿತಿಯ ಹೊಸಕೊಪ್ಪದ ಭಾಗದಲ್ಲಿ ಈ ಆನೆಗಳು ಸಂಚರಿಸಿದೆ, ಬೆಳಗಿನ ಜಾವ ಹೊಸಕೊಪ್ಪದ ರೈತ ಶಿವಾನಂದರ ಮನೆ ಪಕ್ಕದ ಗುಮ್ಮನಾಳ ಕೆರೆಗೆ ಬಂದಿದ್ದ ಆನೆಗಳು ಆ ಕೆರೆಯಲ್ಲಿ ನೀರು ಕುಡಿದು ಅಲ್ಲಿ ಲದ್ದಿಗಳನ್ನು ಹಾಕಿ ಹೋಗಿದೆ.*
*ಈ ಆನೆಗಳ ತಂಡದಲ್ಲಿ ಒಟ್ಟು ಐದು ಆನೆಗಳಿದೆ, ಒಂದು ಹೆಣ್ಣಾನೆ ಈ ಆನೆ ತಂಡದ ನಾಯಕಿಯಾಗಿದೆ.*
*ಚಂದಾಳಗೆರೆ 5 ರಿಂದ 6 ಎಕರೆ ವಿಸ್ತೀರ್ಣ ಇದ್ದು ವರ್ಷಪೂರ್ತಿ ನೀರು ಇರುತ್ತದೆ, ಅಕ್ಕ ಪಕ್ಕದ ಉದನೂರು ಗುಡ್ಡದ ಕಾಡಿನಿಂದ ಮಳೆಗಾಲ ನೀರು ಹರಿದು ಬರುತ್ತದೆ ಇದೆ ಈ ಕೆರೆಯಿಂದ 300 ಮೀಟರ್ ದೂರದಲ್ಲಿ ಆಲಗೇರಿ ಮಂಡ್ರಿಯ ಚೆನ್ನಮ್ಮಾಜಿ ಶಾಲೆಯ ನಿವೃತ್ತ ಉದ್ಯೋಗಿ ರಂಗನಾಥ ಅವರ ಮನೆ ಇದೆ ಅಕ್ಕ ಪಕ್ಕದಲ್ಲಿ ಇವರ ಸಹೋದರ ಸಂಬಂದಿಗಳ ಮನೆ ತೋಟಗಳಿದೆ.*
*ನಿನ್ನೆ ರಾತ್ರಿ 10 ಗಂಟೆಗೆ (11 - ಡಿಸೆಂಬರ್ -2024) ರಂಗನಾಥರು ಪೋನ್ ಮಾಡಿ ಈ ವಿಚಾರ ತಿಳಿಸಿದ್ದರು*
*ನಿನ್ನೆ ಬೆಳಿಗ್ಗೆ (11-ಡಿಸೆಂಬರ್- 2024 ) ಬುಧವಾರ ಬೆಳಗ್ಗೆ ಅವರ ಊರಿನ ಕುಂಬಾರಹೊಂಡದ ಗದ್ದೆಯಲ್ಲಿ ಆನೆ ಸಾಗು ಹೋಗಿದ್ದ ಹೆಜ್ಜೆ ಗುರುತುಗಳನ್ನು ಗುರುತಿಸಿ ಅರಣ್ಯ ಇಲಾಖೆಯವರು ಈ ಭಾಗದವರಿಗೆ ಎಚ್ಚರದಿಂದಿರಲು ತಿಳಿಸಿದ್ದರಂತೆ.*
*ಸೋಮವಾರ ರಾತ್ರಿ ಈ ಭಾಗದಲ್ಲಿ ಚಲಿಸಿದ ಆನೆಗಳ ಗುಂಪು ಹೊಸಕೊಪ್ಪದಲ್ಲಿ ಕಂಡುಬಂದಿದ್ದು ಪುನಃ ಬುಧವಾರ ರಾತ್ರಿ ಚಂದಾಳಗೆರೆಯಲ್ಲಿ ಕಾಣಿಸಿಕೊಂಡಿದೆ,ಇಲ್ಲಿಗೆ ಸಮೀಪದಲ್ಲಿ #ಕೊಲ್ಲಿಬಚ್ಚಲು ನೀರಾವರಿ ಡ್ಯಾಮ್ ಇರುವುದು ಈ ಆನೆಗಳಿಗೆ ತಂಗಲು ಅನುಕೂಲವಾಗಿರಬಹುದು ಎಂದು ತಿಳಿಸಿದ್ದಾರೆ.*
*50 ವರ್ಷದ ಹಿಂದೆ (ಅಂದಾಜು 1975) ಇವರು ಸಣ್ಣ ಬಾಲಕನಾಗಿದ್ದಾಗ ಎರಡು ಆನೆಗಳು ಚೆಂದಾಲಗೆರೆಯ ಇವರ ಜಮೀನಿನಲ್ಲಿ ಹಾದು ಹೋಗಿದ್ದು ನೋಡಿದ್ದರಂತೆ ಅದರ ಮರು ವರ್ಷವೂ ಆ ಎರಡು ಆನೆ ಬಂದಿತ್ತಂತೆ ನಂತರದ ವರ್ಷ ಆನೆಗಳು ಬರಲಿಲ್ಲ ಆಗ ಈ ವಿಚಾರಗಳು ಎಲ್ಲೂ ಸುದ್ದಿ ಆಗಲಿಲ್ಲ ಎನ್ನುತ್ತಾರೆ.*
*ಅದರ ನಂತರ ಆನೆ ಈ ಭಾಗದಲ್ಲಿ ಮೊದಲು ಕಾಣಿಸಿದ್ದು ಕಳೆದ ವರ್ಷ ಮತ್ತು ಈ ವರ್ಷ ಎನ್ನುತ್ತಾರೆ.*
*ಗುರುವಾರ ರಾತ್ರಿ (12-ಡಿಸೆಂಬರ್- 2024) ಮತ್ತು ಶುಕ್ರವಾರ (13-ಡಿಸೆಂಬರ್-2024 ) ಬೆಳಿಗ್ಗೆ ಈ ಆನೆಗಳ ಸುದ್ದಿಗಾಗಿ ಕಾಯುತ್ತಿದ್ದೇವೆ.*
Comments
Post a Comment