Skip to main content

Blog number 3342. ನನ್ನ ಇಷ್ಟದ ಕತೆಗಾರ ಪ್ರಭಂದ ಅಂಬೂತೀರ್ಥ

#ಪ್ರಬಂದಅಂಬುತೀರ್ಥ.

ಇದು ಸ್ತನ ಕ್ಯಾನ್ಸರ್ ಗೆದ್ದ ಮಹಿಳೆಯ ಕಥೆ

ಮಾಯವಾಗುತ್ತಿರುವ ಮಲೆನಾಡಿನ ಕೊಟ್ಟಿಗೆಗಳು

ನಾನು ಇಷ್ಟ ಪಡುವ ಎಲೆ ಮರೆಯ ಕಾಯಿಯ೦ತ ಕಥೆಗಾರ 

   ಪ್ರಬಂದ ಅಂಬುತೀಥ೯ ನಮ್ಮ ಶರಾವತಿ ಹುಟ್ಟುವ ತೀಥ೯ಹಳ್ಳಿ ತಾಲ್ಲೂಕಿನ ಅಂಬುತೀಥ೯ದವರು, ನನ್ನ FB ಗೆಳೆಯರು ಮುಖತಃ ಭೇಟಿ ಆಗಿಲ್ಲ ಇವರು FB ಯಲ್ಲಿ ಬರೆಯುವ ಕಥೆ ತಪ್ಪದೇ ಓದುತ್ತೇನೆ. 

ಅವರ ಕೃಷಿ ಕೆಲಸದ ಬಿಡುವಿನಲ್ಲಿ ಅವರ ಸಂಪರ್ಕ ಸಂಖ್ಯೆ ವಾಟ್ಸಪ್ 9481801869


#malenadu #westernghats #westernghatsofindia #thirthahalli #sringeri #koppa #cancerawareness #cancertreatment #cancersurvivor #cancerrecovery #cancercare #Cancer #breastcancersurvivor #ಶಿವಮೊಗ್ಗ #ShivamoggaNews 

   ಎಲೆ ಮರೆಯ ಕಾಯಿಯಂತಹ ಈ ಉದಯೋನ್ಮುಖ ಕಥೆಗಾರ ಅನೇಕ ಕಥೆ ಬರೆದಿದ್ದಾರೆ, ಪುಸ್ತಕವಾಗಿ ಪ್ರಕಟಿಸಲು ಯೋಗ್ಯವಾಗಿದೆ.       

     ಇವರು ಬರೆದ ಕಥೆಗಳಾದ ನೇಗಿಲೋಣಿ, ಸುಕುOಟು೦ಭ, ಪ್ರಥಮ ಪ್ರೀತಿ, ಶಿಕ್ಷೆ, ಹುತಾತ್ಮ, ಒಂಶಾಂತಿ, ಸ್ವರತಿ, ದಂಡಕಾರಣ್ಯ ಹೊಂ ಸ್ಟೇ, ನಾವುಡರ ಪ್ರೇಮ ಪ್ರಸಂಗ, ಸೀನು ರೆಡ್ಡಿ ಡಿಸ್ಕವರಿ, ವಕ್ಷಸ್ಥಲೆ, ಮರು, ಮೂಲ, ರುತುಮಾನ, ಭಾರತಿ ಪುರ, ಕನಕತ್ತೆ ಸ್ಟಾಟಿಸ್ಟಿಕ್, ನಾಗಮಂಡಲ, ವೇಣು ನಾಗನ, ಕೌಸಲ್ಯ ಬಾತ್, ಅನ್ನಪ್ರಸಾದ ಕೇಟರರ್ಸ್, ಅಕೇಶಿಯಾ ಕೊಪ್ಪ.... ಹೀಗೆ ಸಾಲು ಸಾಲು ಕಥೆ ಬರೆದಿದ್ದಾರೆ.

       ಅವರು ಬರೆದ ಒಂದು ಕಥೆ ಇಲ್ಲಿದೆ ಓದಿ.

#ಲೇಖಕಕರ_ವಿನಂತಿ....

ವಂದನೆಗಳು.
   ಆತ್ಮೀಯ ಓದುಗರಲ್ಲಿ ಇಲ್ಲಿ ನ ಈ ಕಥೆಯ ಬರಹದಲ್ಲಿ ಕೆಲವು ಪದಗಳ ಬಳಕೆಯ ಬಗ್ಗೆ ಕ್ಷಮೆಯಾಚಿಸುತ್ತಿದ್ದೇನೆ‌.

 ದಯಮಾಡಿ ಈ ಕಥೆಯ ಅನಿವಾರ್ಯ ಗಮನಿಸಿ, ಸ್ತನ ಕ್ಯಾನ್ಸರ್ ಬಗ್ಗೆ ಎಲ್ಲಾ ಮಹಿಳೆಯರು ಜಾಗೃತ ರಾಗಿ, ಸೌಂದರ್ಯದ ಕಾರಣಕ್ಕಾಗಿ ಮಕ್ಕಳಿಗೆ ಪೂರ್ತಿ ಹಾಲುಡಿಸದಿರಬೇಡಿ.

   ನಲವತ್ತರ ನಂತರ ಪ್ರತಿ ಮಹಿಳೆಯರೂ ತಮ್ಮ ಸ್ತನ ದ ಕುರಿತು ಗಮನಹರಿಸಲಿ... ಇದು ಗುಣ ಪಡಿಸ ಬಹುದಾದ ಕಾಯಿಲೆ. 

  ಯಾವುದೇ ಗಂಟು ಗೆಡ್ಡೆಯನ್ನು ಬೆಳೆಯಬಿಡಬೇಡಿ, ದಯಮಾಡಿ ನನ್ನ ಎಲ್ಲಾ ತಾಯಂದಿರು ಸಹೋದರಿಯರು ಜಾಗೃತರಾಗಿ.

ಸೌಂದರ್ಯ ಕ್ಕಿಂತ
ಆರೋಗ್ಯ ಮುಖ್ಯ.
ಮತ್ತೊಮ್ಮೆ ನಮಸ್ಕಾರ.
.......................ಪ್ರಬಂಧಅಂಬುತೀರ್ಥ.

#ವಕ್ಷಸ್ಥಲೆ.......

ಅದು ಬೆಳಿಗ್ಗೆ ಜಾಮ ಐದುವರೆ....
ಕಟ್ಟಿನಮಡಿಕೆ ಗಣೇಶ ಭಟ್ರ ಕೊಟ್ಟಿಗೆ.
ವಸುಧಮ್ಮ ಜೋರಾಗಿ " ಗಂಗೆ ನಿಂಗೆ ಅವಳೂ ಮಗಳೂ ಕಣೆ... ತಸಾರ ಮಾಡಕಾಗದು..‌ ಒಂಚೂರು ಅವಳಿಗೂ ಮುರ ಕೊಡು....
ಕಿಟ್ಟು ಕಾಲುಮೆಟ್ಟಬ್ಯಾಡ ಕಣೋ..
ಅಯ್ಯೋ ದಾಸಿ ನಿಂಗೀ ಬೆಳಿಗ್ಗೆ ಕುತ್ತಿಗೆ ತೊರ್ಸುತಾ ಕೂತರೆ ಆಯಿತು ನನ್ನ ಕಥೆ
ಆಮೇಲ ನೋಡೋಣ.... ಭಾಗಿ ನಿನ್ನ ದೊಡ್ಡ ಮಗಳು  ಶಾರಿಗೆ ಗುಡ್ಡ ದಲ್ಲಿ ಹಾಲು ಕೊಟ್ಟಕೊಂಡು ಬರ್ಬ್ಯಾಡ್ಯೆ‌ ಮಾರಾಯ್ತಿ.... ಮನೇಲಿ ಒಬ್ಬ ನಿನ್ನ ತುಡು ಕಾಯ್ತಿರೋ ಮಗ ಇದ್ದ.....
....... ಹೀಗೆ ಮಾತಡ್ತಾ ಇರೋದು ಆ ಕೊಟ್ಟಿಗೆಗೆ ಲಕ್ಷಣ‌.
ಈವತ್ತು ಹೆಚ್ ಎಫ್ ಜೆರ್ಸಿ ದನಗಳೆಂಬ ಹಾಲು ಕೊಡುವ ಯಂತ್ರ ಬಂದ ಮೇಲೆ ಮಲೆನಾಡಿನ ಗ್ರಾಮೀಣ ತಳಿ ಮಲೆನಾಡು ಗಿಡ್ಡ ಹಸು ಗಳು ಅನುತ್ಪಾದಕ ಆಸ್ತಿಯಾಗಿ , ಲೀಟರ್ ಗಟ್ಟಲೆ ಹಾಲು ಕೊಡುವ ದನಗಳ ಮದ್ಯೆ ಕಾಲು ಲೀಟರ್ ಅರ್ದಲೀಟರ್
ಮಿಳ್ಳೆಗಳಲ್ಲಿ ಹಾಲು ಕೊಡುವ ಮಲೆನಾಡು ಗಿಡ್ಡ ಹಸುಗಳು ಗುಜರಿ ಯಾಗಿ ಆಪೆ ಗೂಡ್ಸ್ ಆಟೋ ಹತ್ತಿ ಆಹಾರದ ಹಕ್ಕಾಗಿ ಹೊಟ್ಟೆ ಸೇರಿದವು.‌ ಮಲೆನಾಡಿನ ಕೊಟ್ಟಿಗೆ ತುಂಬಾ ಮಲೆನಾಡು ಗಿಡ್ಡ ತಳಿಯ ಇಪ್ಪತ್ತು ಐವತ್ತು ನೂರು ಬಾಲಗಳಿದ್ದವು(ದನಗಳು). ಈ ಜಾಗ ಈಗ ಕಾಲಿ ಕಾಲಿ . ಒಂದು ಕಾಲದ ವಿಜಯನಗರ  ಸಾಮ್ರಾಜ್ಯದ ಕಾಲದ ಚಿನ್ನ ಬೆಳ್ಳಿ ಸೇರಿನಲ್ಲಿ ಅಳೆದು ಮಾರಿದ  ಹಂಪೆ ಇಂದು ಹಾಳು ಹಂಪೆ. ಅದೇ ರೀತಿ ಯಲ್ಲಿ ಮಲೆನಾಡಿನ ಕೊಟ್ಟಿಗೆ .

ವಸುದಮ್ಮ ನ ಕಥೆ ಬೇರೆ. ಎಂದಿನ ಕೊಟ್ಟಿಗೆ ಡ್ಯೂಟಿಯಲ್ಲಿದ್ದಾಗ ಗಂಗೆಯ
ಕೆತ್ತಲಿನ ಹತ್ತಿ ರದ ಉಣುಗು ತೆಗೆಯಲು ವಸುಧಮ್ಮ ಕೈ ಹಾಕಿದರು.ತೀರಾ ಅನಿರೀಕ್ಷಿತ ವಾಗಿ
ಗಂಗೆ ಜಾಡಿಸಿ ಒದ್ದದ್ದು ವಸುಧಮ್ಮನ ಎದೆಯ ಮೇಲೆ.ಅಮ್ಮಾ.... ಅಯ್ಯೋ
ಸತ್ತೇ..... ಅಂತ ಸೊಪ್ಪಿನ ಕೊಟ್ಟಿಗೆಯ ಮೂಲೆಯಲ್ಲಿ ಆಯ ತಪ್ಪಿ ಬಿದ್ದಿದ್ದರು
ವಸುದಮ್ಮ. ಅಡಿಗೆ ಮನೆಯಲ್ಲಿ ಬೆಲ್ಲದ ನೀರಿನ ಒಲೆಯ ಕಟ್ಟಿಗೆ ದೂಡು ತ್ತಾ ಕಾಪಿ ಕುಡಿಯುತ್ತಾ ಕೂತ ಗಣೇಶ ಭಟ್ರಿಗೆ ಈ ಛೀತ್ಕಾರ ಕೇಳಿ ಗಾಭರಿಯಾಗಿ ಕೊಟ್ಟಿಗೆ ಓಡಿದರು. ಅವರಿಬ್ಬರೂ ಹುಟ್ಟಿದಾರಭ್ಯ ಕೊಟ್ಟಿಗೆಯ ಒಡನಾಡಿ ದವರು. ಮಲೆನಾಡು ಗಿಡ್ಡ ತಳಿ ಯ ಹಸುಗಳು ಜೆರ್ಸಿ ದನಗಳಂತಲ್ಲ...
ತುಂಬಾ ಸೂಕ್ಷ್ಮ ಸಂವೇದನೆಯ ಜೀವಿ‌ಗಳು‌‌. ಅವಕ್ಕೆ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಯಿದೆ.
ಮಾತು ಅರ್ಥ ಮಾಡ್ಕೊತಾವೆ.
ಭಟ್ರು ಕೊಟ್ಟಿಗೆಗೆ ಹೋಗುವಷ್ಟರಲ್ಲಿ‌
ವಸುಧಮ್ಮ ನಿಧಾನವಾಗಿ ಎದ್ದು ಕೂತಿ ದ್ದರು. ಸೀರೆಗೆ ಮೈಗೆ ಸಗಣಿ ಮೆತ್ತಿತ್ತು.
ಸುಮಿತ್ರ ಮ್ಮ ನಿಗೆ ಗಂಗೆಯ ಮೇಲೆ ಕ್ರೋಧ ಉಕ್ಕಿಬಂದಿತ್ತು. ಒಂದು ಕೋಲು ತಗೊಂಡು ಗಂಗೆಗೆ ಹೊಡಯಲು ಶುರು ಮಾಡಿದರು...
ಏ ಗಂಗೆ ನಂಗೆ ಒದೀತ್ಯ....? ನಿನ್ನ ನಾನು ಹೆತ್ತಬ್ಬೆಯಂತೆ ಸಾಕಿದ್ನಿ ...
ನಂಗೇ ಒದಿತ್ಯ.... ಹಡ್ಬೆ ರಂಡೆ ಬೋಸೂಡಿ...‌ಅದೆಂಥ ಪಾಪ ಬಂದರೂ ಪರವಾಗಿಲ್ಲ ನಂಗೆ.. ನಿನ್ನ ಗಡತನ ಹಿರಿಸಿಕೊಡ್ತ್ನಿ ...ಇವತ್ತು ನಿನ್ನ ಕೊಂದು ಹಣಿತ್ನಿ.... ಅಂತ ತಮ್ಮ ಯಥಾನುಶಕ್ತಿ ಹೊಡೆಯುವಾಗ ಗಂಗೆ ಹೊಡೆತ ತಾಳಲಾರದೆ ಅಂಭಾ ...
ಅಂತ ಕೂಗಿ ಮಲಗಿ ಸರೆಂಡರ್‌ ಆಯತು...ಗಂಗೆಯು ‌ಕಣ್ಣಲ್ಲಿ ಧಾರಾಕಾರವಾಗಿ ಕಣ್ಣೀರು ಇಳಿಯತೊಡಗಿತು.... ಅದನ್ನು ಕಂಡ ವಸುದಮ್ಮ ಕರಗಿ ತಾವು ಕಣ್ಣೀರು ಹಾಕತೊಡಗಿದರು.
ಎದೆಯ ನೋವು ಒಂದು ಕಡೆಯಾದರೆ
ಮಗಳಂತೆ ಸಾಕಿದ ಗಂಗೆಗೆ ಹೊಡೆದ ನೋವು ಒಂದು ಕಡೆ. "ತಡ್ಯೆ ವಸು
ಅದು ಹಂಗೆಲ್ಲ ಒದ್ಯಲ್ಲ .... ಒಂದಸಾರಿ ಅದರ ಕೆಚ್ಚಲು ನೋಡೋಣ ಎಲ್ಲಾರ ಗಾಂಯ ಗೀಯ ಆಗಿದ್ಯಾಂತ ಅಂತ..."
ಭಟ್ರು ಗಂಗೆಯ ಎಬ್ಬಿಸಿ ನಿಧಾನವಾಗಿ ಬ್ಯಾಟರಿ ಹಾಕಿ ನೋಡಿದಾಗ ಕೆಚ್ಚಲ ಬಳಿ ಬಿದಿರು ಮುಳ್ಳಿನಿಂದ ಗಾಯ ವಾಗಿತ್ತು. ಆ ಗಾಯಕ್ಕೇ ವಸುದಮ್ಮ ನ ಕೈ ಅಕಸ್ಮಾತ್ತಾಗಿ ತಾಗಿದ ಪರಿಣಾಮ
ವಾಗಿ ಆ ನೋವಿಗೆ ತಡೆಯಲಾಗದೆ ಒದ್ದಿದೆ.
ಆ ವಿಷಯ ತಿಳಿದು ಆ ನೋವಿನಲ್ಲೂ ಗಂಗೆಯ ಕುತ್ತಿಗೆ ತಬ್ಬಿ ತಾವೂ ಕಣ್ಣೀರಿ ಟ್ಟರು ಮತ್ತೆ ವಸುಧಮ್ಮ.
ಹತ್ತು ಗಂಟೆಗೆ ಬಚ್ಚಲಿಗೆ ಹೋಗಿ ಸ್ನಾನ ಮಾಡಿ ಕೋಣೆಗೆ ಬಂದು ವಸುಧಮ್ಮ

ಗಾಡ್ರೇಜ್ ಬೀರಿನಲ್ಲಿದ್ದ ನಿಲುವುಗನ್ನಡಿ ಯಲ್ಲಿ ಒಮ್ಮೆ ತಮ್ಮ ಎದೆ ನೋಡಿ ಕೊಂಡರು. ತಮ್ಮ ಬಲ ಮೊಲೆಯ ಮೇಲ್ಬಾಗದಲ್ಲಿ ಗಂಗೆಯ ಗೊರಸಿನ ಹೊಡೆತದಿಂದ ರಕ್ತ ಕನ್ನೆತ್ತಿರುಗಟ್ಟಿ
(ರಕ್ತ ಹೆಪ್ಪುಗಟ್ಟಿ) ಕೆಂಪಾಗಿದೆ. ಅಲ್ಲಿ ಯೇ ಕಪಾಟಿನಲ್ಲಿದ್ದ ಅಯೋಡಿಕ್ಸ್ ನ ಡಬ್ಬಿ ತೆಗೆದು ಆ ಭಾಗದ ಮೇಲೆ ಹಚ್ಚಿ ನೀವಿಕೊಂಡರು. ಆ ಅಯೋಡಿಕ್ಸ್ ವಾಸನೆಯ ಘಮ ಕ್ಕೆ ಒಮ್ಮೆ ಆಯಮ್ಮಾಯಿತು ವಸುಧಮ್ಮ ನಿಗೆ.
ಹಾಗೆ ಐದು ನಿಮಿಷ ತಿಕ್ಕಿಕೊಂಡು ಕುಪ್ಪಸ ತೊಟ್ಟಕೊಂಡರು.
ವಸುಧಾ ಹೆಮ್ಮಡಲು ಹೈಸ್ಕೂಲ್ ನಲ್ಲಿ
ಎಸ್ ಎಲ್ ಸಿ ಓದಿದ್ದು ಕೊನೆ.‌ಆ ಕಾಲ ಕ್ಕೇ ವಯಸ್ಸಿಗೆ ಮೀರಿದ ದೇಹ ಬೆಳ ವಣಿಗೆ. ಗಣಿತ ಮೇಷ್ಟ್ರು ಸುರೇಶಪ್ಪ
ಗಣಿತ ಪಾಠ ಮಾಡುವಾಗ ಅಚಾನಕ್ಕಾ ಗಿ ವಸುಧಾಳ  ಎದೆಯ ನೋಡಿ ಲೆಕ್ಕ ತಪ್ಪಿದ್ದು ಹಲವಾರು ಭಾರಿ. ಉದ್ದ ಲಂಗ ಕುಪ್ಪಸ ದ ಅಪ್ರತಿಮ ದೇಹ ಸಿರಿ ಯ ಸುಮಿತ್ರ ಆ ಭಾಗದ ಹುಡುಗರ ಕನಸಿನ ಕನ್ಯೆ. ಹಾಗೆ ಮನ ಸೋತವರಲ್ಲಿ ಗಣೇಶ ಭಟ್ರೂ ಒಬ್ಬರು.
ಸಾಕಷ್ಟು ಸ್ಥಿತಿ ವಂತರಾಗಿದ್ದಕ್ಕೆ ಊರು ಮನೆಯಾದರೂ ವಸುಧಾ ನ ಹೆತ್ತವರು
ಗಣೇಶ ಭಟ್ರಿಗೆ ಹೆಚ್ಚು ಲೆಕ್ಕಾಚಾರ ಮಾಡದೇ ದಾರೆಯೆರೆದು ಕೊಟ್ಟಿದ್ದರು.
ನಂತರ ಸಾಲಾಗಿ ಮೂರು ಮಕ್ಕಳ ಹೆತ್ತು ಸುಸ್ತಾದರು ವಸುಧಮ್ಮ..
ಆಗಿಲ್ಲ ಚಾಲ್ತಿಯಲ್ಲಿದ್ದ ವಂಕಿ ಕಾಪರ್ಟಿ ಗಳಿಗೆಲ್ಲ ಪರ್ಟಿ ಹೊಡೆದು ಉದರದಲ್ಲಿ
ಹೊಸ ಜೀವವೊಂದು ಚೆಟ್ಟೆಮುಟ್ಟೆ ಹಾಕಿಕೊಂಡು ಕೂತುಬಿಡ್ತಿತ್ತು. ಹೀಗಿರುವಾಗ ಫಿಲೋಮಿನ ಡಾಕ್ಟ್ರು
ಇಬ್ಬರಿಗೂ ಆಪರೇಷನ್ ಮಾಡಿಸಿ ಕೊಳ್ಳಲು ಹೇಳಿದರು.‌ವಸುಧಮ್ಮ‌ ಹಠ ಹಿಡಿದು ಆಪರೇಷನ್ ಮಾಡಿಸಿದರು.
ಎಲ್ಲೋ ಒಂದು ಕಡೆ ತಮ್ಮ ಮೊಲೆಯ ಬಗ್ಗೆ ಅಪಾರ ಹೆಮ್ಮೆ ಜಂಭವಿತ್ತು.
ತನ್ನ ಸ್ತನವನ್ನು ಬಿಟ್ಟ ಕಣ್ಣಿಂದ ಬಿಡದೇ ನೋಡಿ ಜೊಲ್ಲುಸುರಿಸಿದ್ದ ಅನೇಕ ಗಂಡಸರನ್ನು ನೋಡಿ ಮನದಲ್ಲೇ ಜಂಭ ಪಟ್ಟಿದ್ದರು.ಹೀಗೆ ಮಕ್ಕಳ ಹೆತ್ತು ಹೆತ್ತು ಮಗುವಿಗೆ ಹಾಲುಡಿಸಿ ಹಾಲುಡಿಸಿ ತಮ್ಮ ಸೌಂದರ್ಯ ಅದರಲ್ಲೂ ವಿಶೇಷವಾಗಿ "ಸ್ತನ" ಸೌಂದರ್ಯ ಹಾಳುಮಾಡಿಕೊಳ್ಳಲು ಇಚ್ಚೆಯಿಲ್ಲ ಅವರಿಗೆ. ಮದುವೆಗೆ ಮುಂಚೆ ಗೆಳತಿ ಯರು ಅವಳೆದೆಯ ಮೇಲೆ ಹೊಡೆದು ಕಣ್ಣಾಗುತ್ತೇ ನೋಡು ಅಂತ ರೇಗಿಸು ತ್ತಿದ್ದರು. ಡಾಕ್ಟರ್ ಫಿಲೋಮಿನ ಮಗುವಿಗೆ ಸಂಪೂರ್ಣ ವಾಯಿದಿ ಎದೆ ಹಾಲು ಕುಡಿಸಲು ಹೇಳಿದ್ದರು ಅತ್ತೆ ಅಮ್ಮ ನಿಗೆ ಹೆದುರಿಸಿ ಮಕ್ಕಳಿಗೆ ಹೆಚ್ಚು ಎದೆ ಜಗ್ಗಿಸದೇ ಬೇಗ ಬೇಗ ನಿಪ್ಪಲ್ ಹಾಲು ಅಭ್ಯಾಸ ಮಾಡಿದ್ದರು‌ . ಆಗಿನ ಕಾಲದಲ್ಲಿ ವಸುಧಮ್ಮನ ವಾರದ ಸಂಗಾತಿ ತರಂಗ ವಾರ ಪತ್ರಿಕೆ. ಅಲ್ಲಿ ಬಂದ ಲೇಖನವೊಂದರಲ್ಲಿ  ಮೊದಲೇ ತನ್ನ ಸ್ತನದ ಬಗ್ಗೆ ವಿಪರೀತ ಮೋಹವಿದ್ದ ವಸುಧಮ್ಮ ನಿಗೆ "ಮಗುವಿಗೆ ಹೆಚ್ಚು ಹಾಲುಡಿಸಿದರೆ ಸ್ತನದ ಗಡಸು ತನ ಹೋಗಿ ಜೋತು ಬೀಳುತ್ತದೆ ಅಂತ '" ಇತ್ತು.....
ಆ ಸಾಲುಗಳು ಆಕೆಯ ಮೇಲೆ ಗಾಢವಾಗಿ ಪರಿಣಾಮ ಬೀರಿತ್ತು.
  ತನ್ನ ಪೇಟೆಯ ಸ್ನೇಹಿತೆಯರ ಸಹಾಯದಿಂದ ಬ್ರಾ ತರಿಸಿಕೊಂಡು ತನ್ನೆದೆಗೆ ತಕ್ಕಂತ ಬ್ರಾ ವನ್ನು ವಸುಧಮ್ಮ
ಯಾವತ್ತೂ ತಪ್ಪದೇ ಬಳಸುತ್ತಿದ್ದರು.

ಹಳ್ಳಿ ಹೆಂಗಸರಲ್ಲಿ ಈ ವಸುಧಮ್ಮ
ಈ ಕಾರಣದಿಂದ ಅಚ್ಚರಿ ಯ ಮಹಿಳೆ ಯಾಗಿದ್ದರು‌ ‌. ಅಪ್ಪಿ ತಪ್ಪಿ ರಾತ್ರಿ ಮಲಗಿದಾಗ ತಮ್ಮ ಗಂಡಂದಿರಿಗೆ ಹೇಳಿ ತಾವೂ ತೊಡುವಂತಾಗಿತ್ತು ಬ್ರಾ....
ಹೀಗೆಯೇ ತಮ್ಮ ಮಕ್ಕಳ ಮದುವೆ ಯಾದ ನಂತರವೂ ತಮ್ಮ ಸೌಂದರ್ಯ ಕಾಪಾಡಿಕೊಂಡುಬಂದಿದ್ದ ವಸುಧಮ್ಮ ನಿಗೆ ಇತ್ತಿಚೆಗೆ ಎದೆಯ ಮಾಂಸಲ ಗಳ ಮದ್ಯೆ ಏನೋ ಗಂಟು ಕಟ್ಟಿ ದಂತಾ ಅನುಭವ ಆಗಲು ಶುರುವಾಗಿದೆ...ಅದೇ ಗಂಗೆ ಒದ್ದ ಜಾಗದಲ್ಲೇ...
ಇಲ್ಲ ಇದು ತನಗೆ ಭ್ರಮೆಯಾ...‌!?
ಮತ್ತೆ ಮತ್ತೆ ಎದೆಯ ನೀವತೊಡಗಿದರು ವಸುಧಮ್ಮ.
ಹೌದು ನೋವಿಲ್ಲದ ಕುರುವಿನಂತಹ ಗಂಟು....ಬಹುಶಃ ಹತ್ತು ವರ್ಷಗಳ ಹಿಂದಿನ ಗಂಗೆಯ ಒದೆತ ಈಗ ಗಟ್ಟಿ ಯಾಗಿದೆಯಾ‌‌.....!? ಯಾರಿಗೆ ಕೇಳು ವುದು....? ಗಂಡ ಗಣೇಶ ಭಟ್ರಿಗೆ ಹೀಗೆ ಹೇಳಿದರೆ ರಸಿಕತನ ಹೆಚ್ಚಾಗುತ್ತದೆ...
ಮಕ್ಕಳ ಬಳಿ ಹೇಳಿಕೊಳ್ಳಲು ಮುಜುಗರ.. ‌...
ಆ ದಿವಸ ಗೌರ್ಮೆಂಟ್ ಆಸ್ಪತ್ರೆಯ
ಲೇಡಿ ಡಾಕ್ಟರ್ ಸುಮ ರ ಬಳಿ ಹೋದಾಗ ಅವರು ಸ್ತನ ಪರೀಕ್ಷೆ ಮಾಡಿ ಒಂದು ನಿಮಿಷ ಗಂಭೀರವಾಗಿ ಚಿಂತಿಸಿ .... ಹೌದಮ್ಮ ಒಂದು ಗಂಟಿದೆ.
ನೋಡೋಣ ಕರಗಲು ಒಂದು ಇಂಜೆಕ್ಷನ್‌ ಬರೆದುಕೊಡ್ತೀನಿ‌ ತಗೋಳ್ಳಿ‌‌.
ಅಂದರು. ತಿಂಗಳು ಬಿಟ್ಟು ಬನ್ನಿ ಅಂದರು.
ತಿಂಗಳು ಬಿಟ್ಟರೆ ಗಂಟು ಇನ್ನಷ್ಟು ದೊಡ್ಡ ದಾಯಿತು. ಆದರೆ ಯಾವುದೇ ನೋವಿಲ್ಲ...!! ಮತ್ತೆ ಸ್ತನ ಪರೀಕ್ಷೆ ಮಾಡಿದ ಡಾಕ್ಟರ್ ಸುಮ
ನೋಡಿಮ್ಮ‌ ಈ ಗಂಟನ್ನ ಒಂದು ಬಯೋಪ್ಸಿ ಮಾಡಿಸೋಣ. ಅದನ್ನು ಪರೀಕ್ಷೆ ಮಾಡಿಸಿ ನಂತರ ಆಪರೇಷನ್ ಮಾಡವ ನಿರ್ಧಾರ ಮಾಡೋಣ‌ .ನಾಳೆ
ಮನೆಯವರನ್ನು ಕರೆದುಕೊಂಡು ಬನ್ನಿ
ಅಂದರು.
ಮಾರನೇ ದಿನ ಗಣೇಶ ಭಟ್ರನ್ನ ಆಸ್ಪತ್ರೆಗೆ ಕರೆದುಕೊಂಡು ಮತ್ತೆ ಬಂದರು ವಸುಧಮ್ಮ.
ವಸುಧ ನ ಹೊರಗೆ ಕಳಿಸಿ ಡಾಕ್ಟರ್ ಸುಮ "ನೋಡಿ ಭಟ್ರೆ ನಿಮ್ಮ ಮನೆಯವರನ್ನು ಮಣಿಪಾಲ್ ಗೆ ಕರೆದುಕೊಂಡು ಹೋಗಿ .... ನಿಮ್ಮ ಹೆಂಡತಿ ಯ ಎದೆಯಲ್ಲಿ ರುವ ಗೆಡ್ಡೆ ಅನುಮಾನಾಸ್ಪದ...‌ ಬಹುಶಃ
ಅದು ಕ್ಯಾನ್ಸರ್ ಆಗಿದ್ದರೂ ಆಗಿರ ಬಹುದು... ಹಾಗಂತ 100% ಕ್ಯಾನ್ಸರ್ ಅಂತ ಹೇಳಲ್ಲ... ನಲವತ್ತರ ನಂತರ ಈ ತರಹದ ಎದೆಯಲ್ಲಿ ನ ಅನಪೇಕ್ಷಿತ ಊತ ಗಂಟು ಗೆಡ್ಡೆಗಳು ಹೆಚ್ಚಿನ ಸಂದರ್ಭದಲ್ಲಿ ಕ್ಯಾನ್ಸರ್ ಆಗಿರುವ ಸಾದ್ಯತೆ ಹೆಚ್ಚು. ನಿಮ್ಮ ಹೆಂಡತಿ ಯ ತಾಯಿಯ ಕಡೆಯವರಿಗ್ಯಾರಿಗಾದರೂ
ಈ ಕ್ಯಾನ್ಸರ್ ಖಾಯಿಲೆ ಇದ್ದರಂತೂ ಈ ಸಾದ್ಯತೆ ಹೆಚ್ಚು.  ನೀವು ತಡ ಮಾಡದೆ‌ ಮಣಿಪಾಲ್ ಗೆ ಹೋಗಿ ಚಿಕಿತ್ಸೆ ಮಾಡಿ ಸಿ...‌ ಈಗ ಸ್ತನ ಕ್ಯಾನ್ಸರ್ ಗೆ ಅತ್ಯುತ್ತಮ ಔಷಧಿ ಯಿದೆ. ಬಹುತೇಕ ರು ಒಮ್ಮೆ ಚಿಕಿತ್ಸೆ ಮಾಡಿಸಿದನಂತರ ಲೈಫ್ ಟೈಮ್ ಬದುಕಿದವರಿದ್ದಾರೆ. ಕ್ಯಾನ್ಸರ್ ಕಾಯಿಲೆ ಗಳಲ್ಲೇ ಸ್ತನ ಕ್ಯಾನ್ಸರ್ ಅತ್ಯಂತ ಸುಲಭವಾಗಿ ವಾಸಿಯಾಗುವ ಖಾಯಿಲೆ ಯಾಗಿದೆ. ನೀವು ಚಿಂತಿಸ ಬೇಡಿ ಗಾಭರಿಯಾಗಬೇಡಿ ಎಂದರು.
ಡಾಕ್ಟರ್ ಕ್ಯಾಬಿನ್ ನಿಂದ ಹೊರಗೆ ಬಂದವರೇ ಹೊರಗೆ ಕೂತಿದ್ದ ಹೆಂಡತಿ ಗೆ ಈಗ ಬಂದೆ ಅಂತೇಳಿ ಆಸ್ಪತ್ರೆ ಯ ಹೊರಭಾಗದಲ್ಲಿ ದ್ದ ಶವಾಗಾರದ ಸಮೀಪದ ರಂಜದ ಮರದ ಕಟ್ಟೆಯ ಮೇಲೆ ಕೂತು ಬಿಕ್ಕಿ ಬಿಕ್ಕಿ ಅತ್ತು ಸುಧಾರಿಸಿಕೊಂಡು ಬೆಂಗಳೂರಿನ ಮಗ ಮಗಳಿಗೆ ಕರೆ ಮಾಡಿ ಪರಿಸ್ಥಿತಿ ವಿವರಿಸಿದರು‌. ಅವರೂ ಆಘಾತಕ್ಕೊ
ಳಗಾದರೂ ನಾವೂ ಇವತ್ತು ರಾತ್ರಿ ಹೊರಟು ನಾಳೆ ಊರಿಗೆ ಬರ್ತಿವಿ ನೀವು ತಲೆಬಿಸಿ ಮಾಡಿಕೊಳ್ಳದಿರಿ ಅಂತ ಅಪ್ಪ ನಿಗೆ ದೈರ್ಯ ತುಂಬಿ
ಯಾವುದೇ ಕಾರಣಕ್ಕೂ ಅಮ್ಮ ನಿಗೆ ಈ ವಿಷಯ ತಿಳಿಸದಿರಿ ಎಂದರು.

ಮಣಿಪಾಲ್ ಸೇರಿ ಎಲ್ಲಾ ಟೆಸ್ಟ್ ಆಗಿ
ಕೊನೆಗೆ ವಸುಧಮ್ಮ ನ ಬಲ ಸ್ತನ ವನ್ನು ಶೂರ್ಪಣಕಿ ಮೂಗು ಕಿವಿ ಕೊಯ್ದ ಹಾಕಿದಂತೆ ಕೊಯ್ಯುವ ನಿರ್ಧಾರ ಮಾಡಿದರು ವೈದ್ಯರು.

ಜೀವನ ಪರ್ಯಂತ ತನ್ನ ಎದೆಯ ಬಗ್ಗೆ ಅಪಾರ ಹೆಮ್ಮೆ ಬಿಮ್ಮು ಹೊಂದಿದ್ದ ವಸುಧಮ್ಮ ನಿಗೆ ತನ್ನ ಅರ್ಧ ಜೀವ ವೇ ಹೋದ ಅನುಭವ ಆಗತೊಡಗಿತು.ತನ್ನ ಜೀವ ಹೋದರೂ ಪರವಾಗಿಲ್ಲ ಎದೆ ಕತ್ತರಿಸಿ ವಿರೂಪ ಮಾಡುವುದು ಬೇಡ ಅಂದಾಗ ಮಕ್ಕಳು ಗಂಡ ಅವಳಿಗೆ ಗದರಿಸಿ
ಮುಲಾಜಿಲ್ಲದೇ ಆಪರೇಷನ್ ಗೆ ತಳ್ಳಿ ದರು.

ಮಾರನೆಯ ದಿ‌ನ ವಸುಧಮ್ಮ ನಿದಾನವಾಗಿ ಬಲದಿಕ್ಕಿನ ಎದೆಯತ್ತ ನೋಡಿ ಚಪ್ಪಟೆ ಬ್ಯಾಂಡೇಜ್ ಕಂಡು ಕಣ್ಣೀರು ಸುರಿಸಿದರು‌ . ತನ್ನ ಅವಭಾಜ್ಯ ಪ್ರೀತಿಯ ಅಂಗ ಕಳೆದುಕೊಂಡ ಕಹಿ ಅನುಭವ ವಸುಧಮ್ಮ ನಿಗೇ ಗೊತ್ತು.. ‌‌. ಕನ್ನಡಿ‌ ನೋಡದಾದರು‌ . ಎದೆಯ ಮೇಲೆ ವಿರೂಪವಾಗಿ ಹೊಲಿಗೆ ಹಾಕಿ ಗುಡ್ಡ ಹೂಡಿಹಾಕಿದಂತಾಗಿತ್ತು. ಗಾಯ ಮಾದ ಮೇಲೆ ನೀಲಿ ಬಣ್ಣದ ಪೆನ್ನಿ ನಲ್ಲಿ ರೇಡಿಯೇಷನ್ ಚಿಕಿತ್ಸೆ ಗೆ ಗುರುತು ಹಾಕಲಾಗಿತ್ತು.... ಆ ಚಿಕಿತ್ಸೆ ಭಯಾನಕ ಎನಿಸಿತ್ತು. ಮಿಷಿನ್ ಎದುರು ಮಲಗಿಸಿ ಡಾಕ್ಟ್ರು ..ಏನಾಗಲಮ್ಮ ಬರೀ ಬೆಳಕು ಮಾತ್ರ " ಅಂತ ಹೇಳಿ ಹೊರಗೆ ಹೋಗ್ತಿದ್ರು.... ಬಾಯಿ ರುಚಿ , ಎಲ್ರೂ ನೋಡಲಿ ಎಂಬಂಥ ಸೌಂದರ್ಯ ಪ್ರಜ್ಞೆ ವಸುಧಮ್ಮ ನಿಗೆ ಸತ್ತು ಹೋಗತೊಡ ಗಿತ್ತು.
ಹೌದು ಈಗಲೂ ನಾನು ನನ್ನ ಸೌಂದರ್ಯ ಮೆರೆಸಬೇಕೇ ಮೊಮ್ಮಕ್ಕಳಾದಮೇಲೂ...‌ಒಳಗಿನ
ವಿಷಯ ಹೇಳಲಾರದಾದಳು.

ಆಪರೇಷನ್ ಗಾಯ ಒಣಗಿ ರೇಡಿಯಷನ್ ಮುಗಿದು , ಕಿಮೋ ಥೆರಪಿಯೂ ಮುಗಿಯುವಷ್ಟರಲ್ಲಿ
ವಸುಧಮ್ಮ ನುಜ್ಜುಗುಜ್ಜಾಗಿದ್ದರು. ಒಂದು ‌ಸಣ್ಣ ಇಂಜೆಕ್ಷನ್ ಭಯ ಪಡು ತ್ತಿದ್ದವರು ಈಗ ಗಂಟೆಗಟ್ಟಲೆ ಕಿಮೋ ಇಂಜೆಕ್ಷನ್ ನನ್ನು ನರದೊಳಗಿಳಿಸಿ ಕೊಳ್ಳುವ ಯಾತನೆ ಅನುಭವಿಸ ಬೇಕಿತ್ತು....
ತಲೆ ತಿರುಕು, ಹೊಟ್ಟೆ ಹಸಿವಿಲ್ಲದಿರು ವಿದು , ತಲೆಕೂದಲುದುರಿ ಒಂದು ಬೇಸಿಗೆಯಲ್ಲಿ ಎಲೆ ಉದುರಿಸಿಕೊಂಡ ಸೂಚಿ ಪರ್ಣ ಅರಣ್ಯ ಜಾತಿಯ ಮರದಂತಾದರು ವಸುಧಮ್ಮ...

ಕಾಲ ಬದಲಾವಣೆ ಆಯಿತು. ವಸುಧಮ್ಮ ಮತ್ತೆ ಚಿಗುರಿದರು. ತಲೆಗೂದಲು ಹುಟ್ಟುತು‌ . ಬೆಂಗಳೂರಿನ ಮಕ್ಕಳ ಮನೆಗೆ ಹೋಗಿ ರೆಸ್ಟ್ ತೆಗೆದುಕೊಳ್ಳಲು ಹೋಗುವ ಕಾರಣದಿಂದ ಮನೆಯ ಕೊಟ್ಟಿಗೆಯ ಗಂಗೆ ಗೌರಿಯ ಮಕ್ಕಳು ಮೊಮ್ಮಕ್ಕಳು ಯಾವುದೋ ಗೋಶಾಲೆ ಗೆ ಶಿಫ್ಟ್ ಆದವು.ಈ ಹೆಳೆಯಲ್ಲಿ ಕೊಟ್ಟಿಗೆ ಕಾಲಿಯಾಯಿತು.

ವಸುಧಮ್ಮ ಊರಿಗೆ ಮರಳಿದರು.
ಆವತ್ತು ಹೆಬ್ಬಾಗಿಲು ನಾಗರಾಜ ಭಟ್ರ
ಮನೆಯಲ್ಲಿ ಚಂಡಿಹೋಮ ....
ಊಟಕ್ಕೆ ಹೊರಡಲು ಸ್ನಾನ ಮಾಡಿ
ಬಂದ ವಸುಧಮ್ಮ ಬಲಬದಿಯ ಬ್ರಾ ದೊಳಗೆ ಬಟ್ಟೆ ಯ ಸಿಂಬೆಯುಂಡೆ ಮಾಡಿಕೊಂಡು ತುಂಬಿ ಹುಕ್ಸ್ ಹಾಕಿಕೊಂಡರು.
ತಾನೇನೋ ಕಳೆದು ಕೊಂಡಿಲ್ಲ ಎಂಬ ಆತ್ಮವಿಶ್ವಾಸ ಮೂಡಿಸಿಕೊಳ್ಳುತ್ತಾ...
ಯಾಕೋ ಅವತ್ತು ಮತ್ತೆ ಅವರಿಗೆ
ಆ ದಿನ ಗಂಗೆ ಎದೆಗೆ ಒದ್ದದ್ದೂ, ಗಣಿತ ಮೇಷ್ಟ್ರ ವಕ್ರ ನೋಟ, ಸ್ನೇಹಿತೆಯರು ತನ್ನ ಸ್ತನ ನೋಡಿ ಕಣ್ಣಾಗುತ್ತೆ(ದೃಷ್ಟಿ ಯಾಗುತ್ತದೆ) ಅಂದ ಮಾತು ,ತಾನು ಸೌಂದರ್ಯ ಕ್ಕಾಗಿ ಮಕ್ಕಳಿಗೆ ಪೂರ್ಣ ಪ್ರಮಾಣದ ಹಾಲು ಕುಡಿಸದಿದ್ದದ್ದೂ ಎಲ್ಲಾ ಒಂದರ ಹಿಂದೆ ಒಂದು ಬಂದು ಮನವಕಾಡಿ ಯಾವ ಕಾರಣದಿಂದ
ತನಗೆ ಹೀಗಾಯಿತು ಅಂತ ಉತ್ತರ ಸಿಗದ ಪ್ರಶ್ನೆ ಗೆ ತಲೆಕೆಡಿಸಿಕೊಳ್ಳುತ್ತಾ...
ಕುಪ್ಪಸತೊಟ್ಟು ಸೀರೆ ನೆರಿಗೆ ಹಾಕಿ
ಉಟ್ಟು ಊಟದ ಮನೆಗೆ ಹೋಗಲು ಸಿದ್ದವಾದರು....

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...