Blog number 1697. ಹರಿಕೋಡೆಯವರು ನೀಡಿದ ಶಿಶು ನಾಳ ಶರೀಪ ಸಾಹೇಬರ ಲೀಲಾಮೃತ ಪುಸ್ತಕ ನನ್ನನ್ನು ಅವರ ಸಮಾದಿ ದರ್ಶನ ಮಾಡಿಸಿತು.
ಮೊಟ್ಟ ಮೊದಲ1982 ರಲ್ಲಿ ಶಿಶುನಾಳರ ಹಾಡು ಕೇಳಿ ಪ್ರಬಾವಿತನಾಗಿದ್ದೆ, 2003 ರಲ್ಲಿ ಶ್ರೀ ಹರಿಕೊಡೆಯುವರು ನೀಡಿದ ಶ್ರೀ ಶಿಶುನಾಳ ಷರೀಪ ಸಾಹೇಬರ ಜೀವನ ಲೀಲಾಮೃತ ಎಂಬ ಪುಸ್ತಕ ನೀಡಿದ್ದರು ಅದನ್ನ ಬರೆದವರು ಡಾll ಮಲ್ಲಿಕಾಜು೯ನ ಸಿಂದಗಿ, ಈ ಪುಸ್ತಕದಲ್ಲಿ ಶಿಶುನಾಳ ಷರೀಪರ ಸಂಪೂಣ೯ ಮಾಹಿತಿ ಇದೆ.
ಹರಿ ಕೋಡೆಯವರು ಶಿಶುನಾಳರ ಪ್ರಭಾವಕ್ಕೆ ಒಳಗಾಗಿ ಸಿನಿಮಾ ಕೂಡ ನಿಮಿ೯ಸಿದರು.
2006ರಲ್ಲಿ ಹುಬ್ಬಳ್ಳಿಗೆ ಹೋಗುವಾಗ ರಾಷ್ಟ್ರೀಯ ಹೆದ್ದಾರಿ ಬೆಂಗಳೂರು ಪೂನಾ ಕಾಮಗಾರಿ ನಡೆಯುತ್ತಿತ್ತು. ನಾವು ದಾರಿ ತಪ್ಪಿ ನೇರವಾಗಿ ಶಿಶುನಾಳ ತಲುಪಿದ್ದೆ ಅವತ್ತೇ ಶಿಶುನಾಳರ ಜನ್ಮದಿನವೂ ಆಗಿತ್ತು, ಅಲ್ಲಿ ಅನೇಕ ಪ್ರಸಿದ್ಧ ಗಾಯಕರು ಶಿಶುನಾಳರ ಗೀತೆ ಹಾಡುತ್ತಿದ್ದರು ಎಂತಹ ಭಾಗ್ಯ ನನ್ನದು.
ಶಿಶುನಾಳಕ್ಕೂ ನನಗೂ ಒಂದು ರೀತಿಯ ಸಂಬ೦ದ ಈ ರೀತಿ ಸತ್ಸ೦ಗ ಬೆಳೆದಿದೆ.
Comments
Post a Comment