#ನನ್ನ_ಬ್ಲಾಗ್_ಲೇಖನಗಳು_1717
#ಎರೆಡು_ಸಾವಿರ_ಲೇಖನ_ತಲುಪಲು_ಮೂರನೆ_ಸೆಲ್_ಫೋನ್
#ಮಗಳು_ಅಳಿಯ_ನೀಡಿದ_ಹೊಸ_ಫೋನ್
#ಇತ್ತೀಚೆಗೆ_ಸೆಲ್_ಫೋನ್_ಬಾಳಿಕೆ_ಬರುವುದಿಲ್ಲ_ಯಾಕೆ?
#ಅಪ್_ಗ್ರೇಡ್_ಆದ_ಹಾಗೆ_ಶಿಥಿಲವಾಗುವುದು.
#ಪ್ರತಿ_ವರ್ಷ_ಹೆಚ್ಚಾಗುವ_ಬೆಲೆ.
ಬರಹಗಾರನಿಗೆ ತನ್ನ ಲೇಖನಗಳು ಸುರಕ್ಷಿತವಾಗಿಡುವ ಕಾಳಜಿ ಸದಾ ಇರುವಂತೆ ಆ ಲೇಖನಗಳು ಪುಸ್ತಕವಾಗಿ ಪ್ರಕಟವಾಗಲಿ ಎಂಬ ಹಂಬಲವೂ ಇರುತ್ತದೆ.
ಇವತ್ತಿನ ಆಧುನಿಕ ಸಾಮಾಜಿಕ ಜಾಲ ತಾಣದಲ್ಲಿ ಹಾಳೆಯಲ್ಲಿ ಬರೆದಿಡುವ ಕೆಲಸ ಇಲ್ಲ, ಪೆನ್ನು ಇಂಕು ಬೇಕಾಗಿಲ್ಲ ಮೊಬೈಲ್ ಫೋನ್ ನಲ್ಲಿ ಬರೆದದ್ದು ಬ್ಲಾಗ್ ನಲ್ಲಿ ಸೇವ್ ಮಾಡಿದರೆ ಆಯಿತು.
ಈ ರೀತಿ 2017 ಜನವರಿ 1 ರಿಂದ ಪ್ರಾರಂಬಿಸಿದ ನನ್ನ ಬ್ಲಾಗ್ ನಲ್ಲಿ ಇವತ್ತಿನ ಈ ಲೇಖನ ಸೇರಿ 1717ನೇ ಲೇಖನ ಆಗಿದೆ, ಈಗಾಗಲೇ 2 ಸೆಲ್ ಫೋನ್ ಗಳು ಶಿಥಿಲವಾಗಿದೆ ಈಗ 3 ನೇ ಹೊಸ ಸೆಲ್ ಫೋನ್ ಮಗಳು ಅಳಿಯ ಕಳಿಸಿದ್ದಾರೆ ಇದರಲ್ಲಿ ಹಿಂದಿನ ಫೋನಿಗಿಂತ 4 ಪಟ್ಟು ಕಾರ್ಯಕ್ಷಮತೆ ಇದೆ ಮತ್ತು ನನ್ನ ಹಿಂದಿನ ಫೋನಿನ 2 ಪಟ್ಟು ಬೆಲೆ ಜಾಸ್ತಿ.
ನಾನು ಯಾರಿಂದಲೂ ಉಡುಗೊರೆ ಸ್ವೀಕರಿಸುವುದಿಲ್ಲ ಎ೦ದು ಗೊತ್ತಿದ್ದ ಮಗಳು ಫೋನ್ ನನಗೆ ತಲುಪುವ ಅಂತಿಮ ಘಳಿಗೆಯಲ್ಲಿ ಅಳಿಯರಿಂದ ಫೋನ್ ಕಳಿಸಿದ ಸುದ್ದಿ ತಿಳಿಸಿದ್ದಾಳೆ ಮತ್ತು ಇದು ಉಡುಗೊರೆ ಅಲ್ಲ ನಿಮ್ಮ ನಿರಂತರ ಬರವಣಿಗೆಗೆ ತಮ್ಮ ಸಣ್ಣ ಪಾಲು ಎಂದಿದ್ದಾರೆ.
ಇವರ ಸಹೃದಯೀ ಮನಸ್ಸಿಂದ ಕಳಿಸಿದ ಫೋನ್ ಸ್ವೀಕರಿಸಿದ್ಧೇನೆ ಅವರಿಬ್ಬರಿಗೂ ಕೃತಜ್ಞತೆ ತಿಳಿಸಿ ಅವರಿಬ್ಬರಿಗೂ ಇದಕ್ಕೂ ಹೆಚ್ಚಿನ ಉಡುಗೊರೆ ನೀಡುವ ಶಕ್ತಿ ನನಗಿರಲಿ ಎಂದು ಹಾರೈಸಿದ್ಧೇನೆ.
ಸೆಲ್ ಫೋನ್ ನ ಬಳಕೆ ನನಗೆ ಹೆಚ್ಚಿರುವುದು ನನ್ನ ಬರವಣಿಗೆಗೆ ಮತ್ತು ಅದನ್ನು ಪೇಸ್ ಬುಕ್ ಮತ್ತು ಅದರ ಗ್ರೂಪ್ ಗಳಿಗೆ, ವಾಟ್ಸಪ್ ಗ್ರೂಪ್ ಗಳಿಗೆ ಶೇರ್ ಮಾಡಲು ಅದರ ಜೊತೆ ನನ್ನ ಸಂಸ್ಥೆಯ ವ್ಯವಹಾರಗಳ ಮೈಲ್, ಹಣ ಪಾವತಿ ಮಾಹಿತಿ, ಬ್ಯಾಂಕ್ ಮಾಹಿತಿ ಇತ್ಯಾದಿಗಳಿಗೆ ಹೆಚ್ಚು ಬಳಸುತ್ತೇನೆ.
ಈಗ ಹೊಸ ಪೋನಿನಲ್ಲಿ ಸಂಸ್ಥೆಯ 16 ಸಿಸಿ ಕ್ಯಾಮೆರಾ ಪೂಟೇಜ್ ನೋಡಲು, ನೆಟ್ ಪ್ಲೆಕ್ಸ್, ಅಮೇಜಾನ್ ಪ್ರೈಮ್ ವಿಡಿಯೋ ಸೇರಿದೆ ನಿನ್ನೆ ಇದರಲ್ಲಿ ಕಾಂತಾರ ಸಿನಿಮಾ ನೋಡಿದೆ ಇವತ್ತು ನೆಟ್ ಪ್ಲಿಕ್ಸ್ ನಲ್ಲಿ ವೀರಪ್ಪನ್ ನೋಡಬೇಕು .
Comments
Post a Comment